logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಗರೋಚಿ
ದೇಹಕಾಂತಿ (ನಿರ್ಮಳಿನ ಅಂಗರೋಚಿ ಜಳಮಂ ಲುಳಿತಾಳಕಂ ಉನ್ಮದಾಳಿಯಂ .. .. ಪೋಲೆ: ಆಚವರ್ಧ, ೨. ೧೧)

ಅಂಗಲತಾ
ದೇಹವೆಂಬ ಬಳ್ಳಿ (ಅಂಗಲತಾಲಾಲಿತಸಾಂದ್ರ ಚಂದನರಸಂ ಬೆಳ್ದಿಂಗಳ್ ಎಂಬೊಂದು ಪಂಬಲ ಬಂಬಲ್ಗೆಡೆಯಾಗೆ ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ: ಪಂಪಭಾ, ೧. ೧೩೭)

ಅಂಗವಲ್ಲಭ
ಅಂಗರಾಜ್ಯದ ದೊರೆ, ಕರ್ಣ (ಇನ್ನುಂ ಈ ಒಡಲೊಳಿರ್ದುದು ನಾಣಿಲಿಜೀವಂ ಎಂದೊಡೆ ಆವೆಡೆಯೊಳೆ ನಿನ್ನೊಳೆನ್ನ ಕಡುಗೂರ್ಮೆಯುಂ ಅೞ್ಕಱುಂ ಅಂಗವಲ್ಲಭಾ: ಪಂಪಭಾ, ೧೩. ೪)

ಅಂಗಹಾರ
ನೃತ್ಯ, ನಟನೆಯ ಮುದ್ರೆ (ಭರತಾಗಮದೊಳ್ ಮೂವತ್ತೆರಡನೆ ನೆಗೞ್ದಂಗಹಾರಮುಂ: ಆದಿಪು, ೯. ೨೯)

ಅಂಗಹೀನ
ದೈಹಿಕ ಊನವುಳ್ಳವನು (ಪಾಂಡುರಾಜಂಗೆ ಧೃತರಾಷ್ಟ್ರನಂಗಹೀನನೆಂದು ವಿವಾಹದೊಸಗೆಯೊಡನೆ ಪಟ್ಟಬಂಧದೊಸಗೆಯಂ ಮಾಡಿ ನೆಲನನಾಳಿಸೆ: ಪಂಪಭಾ, ೧. ೧೦೭ ವ)

ಅಂಗಾಧಿಪತಿ
ಕರ್ಣ (ನೀನುಳ್ಳೊಡೆ ಉಂಟು ರಾಜ್ಯಂ ನೀನುಳ್ಳೊಡೆ ಪಟ್ಟಮುಂಟು ಬೆಳ್ಗೊಡೆಯುಂಟಯ್ ನೀನುಳ್ಳೊಡೆ ಉಂಟು ಪೀೞಗೆ ನೀನಿಲ್ಲದೆ ಇವೆಲ್ಲಂ ಒಳವೆ ಅಂಗಾಧಿಪತೀ: ಗದಾಯು, ೫. ೨೦)

ಅಂಗಾರ
ಕೆಂಡ (ಎಂದು ಪೊಗೞ್ದು ಮುಂದೆ ಧಗಧಗಿಪ ಧೂಪಾಂಗಾರದೊಳ್ಮಂಡಿಸಲೆಂದು ಓಹಿಲದೇವಂ ಉದ್ಯತನಾಗಿ: ಉದ್ಭಟಕಾ, ೧೧. ೧೨೨ ವ)

ಅಂಗಾರವಲ್ಲಿ
ಕೊಡಸಿಗೆ ಎಂಬ ಒಂದು ಬಗೆಯ ಸಸ್ಯ (ಅಂಗಾರವಲ್ಲಿ ಕೊಡಸಿಗೆ: ಅಭಿಧಾವ, ೧. ೮. ೨೭)

ಅಂಗಾಲ್
ಕಾಲ ಅಡಿ, ಪಾದದ ಕೆಳಭಾಗ (ಅಂಗಾಲೊಳ್ ಮುಳ್ ನಡೆಯುಂ ತಾನೆಂತು ಮಱುಗುವನಂತು: ಸಮಯಪ, ೫. ೬)

ಅಂಗಿ
ಅಂಗಗಳುಳ್ಳುದು ದೇಹ, ಶರೀರ (ಅಂಗಿಯ ಅಂಗದೊಳೆಲ್ಲಂ ತೀವಿರ್ಪಂ ಭೂತಚತುಷ್ಟಾವಯವದಿಂ ಅನ್ಯಂ ಆತ್ಮನಂ ಕಂಡಱಯೆಂ: ಯಶೋಧಚ, ೪. ೧೭)


logo