logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಗಜ ಮಹೀಶ
ಕಾಮರಾಜ, ಮನ್ಮಥ ರಾಜ (ಬೇಟದೊಳೆನ್ನಂ ಅಂಗಮಹೀಶನ ಬಾಣಕೆ ಗೂಡುಮಾಡಿ ತಾಂ ಕೂಟದಲಂಪಿನಿಂಪಂ ಇನಿಸಂ ಮಿಗೆ ತೋಱದೊಡೆ ಎಂತು ಸೈರಿಪೆಂ: ಉದ್ಭಟಕಾ, ೧೦. ೬೪)

ಅಂಗಜಾಗಮ
ಕಾಮಶಾಸ್ತ್ರ (ಕಲ್ಲಾದೊಡಂ ಇಂದು ದ್ಯುತಿಗುಲ್ಲಸದಿಂದೊಸರ್ವುದು ಅಂಗಜಾಮಗಮದ ಒಳ್ಪಂ: ಉದ್ಭಟಕಾ, ೧೦. ೮೧)

ಅಂಗಜಾವ
ಪಹರೆ, ಸರದಿ ಕಾವಲು (ಸುರಭಿಶರನಂಗಜಾವಂ ಗರಟಿಗೆ ಮೆಯ್ಗಾಪು ಮೆಱೆಯೆ ಬಿಡದೋಲಗಿಪರ್: ಯಶೋಧಚ, ೨. ೪)

ಅಂಗಡಿಸೂಱೆ
ಅಂಗಡಿಯನ್ನು ಸೂರೆಮಾಡುವುದು (ಕಲಪಿಕನಾಯಕರ್ಗೆ ಪೊಸಮಾಂಗೊನರಂಗಡಿ ಸೂಱೆಯಂ ಶುಕಾವಲಿಯ ಪದಾತಿಗಿತ್ತು: ಅನಂತಪು, ೬. ೮೫)

ಅಂಗಣ
ಅಂಗಳ (ನಿಚ್ಚಲಿ ಕಾರಿರುಳೊಳ್ ಪೊಱಪಚ್ಚಮಂ ಉಟ್ಟಿರ್ದು ಇಱುಂಕಿ ಕಕ್ಷದೊಳ್ ಆ ಪಾಟಚ್ಚರ ಭಯದಿಂದುಟ್ಟು ಪಟಚ್ಚರಮಂ ಮನೆಗೆ ವಂದು ನಿಂದು ಅಂಗಣದೊಳ್: ಶಾಂತಿಪು, ೬. ೬೫); ಮನೆಗೆ ಸೇರಿದ ಬಯಲು (ಮನೆಯಂಗಳದೊಳ್ ಮನಮೊಸೆದಾಡುವ ಮಕ್ಕಳ ವಿನೋದಮಂ ಕಾಣ್ಬ ದಿವಸಮೆಂದಾದಪುದೋ: ಸುಕುಮಾಚ, ೯. ೧೦೧)

ಅಂಗಣವಲಯ
ಅಂಗಳದ ಸುತ್ತು, ಆವರಣ (ಅಂಗಣಕ್ಕೆ: ಅಂಗಣವಲಯ, ಅಂಗಣವಾವಿ, ಅಂಗಣವೆಟ್ಟು: ಶಬ್ದಮದ, ೩೧೩, ಪ್ರ)

ಅಂಗಣವಾವಿ
ಅಂಗಣದಲ್ಲಿನ ಬಾವಿ (ಅಂಗಣವಾವಿಯೆಂದಚ್ಚಗನ್ನಡ ಸಮಾಸಮುಂಟು: ಶಬ್ದಮದ, ೨೯೨ ವೃತ್ತಿ)

ಅಂಗಣವೆಟ್ಟು
ಅಂಗಳದಲ್ಲಿನ ಆಟದ ಬೆಟ್ಟ (ಅಂಗಣಕ್ಕೆ ಅಂಗಣವಲಯಂ, ಅಂಗಣವಾವಿ, ಅಂಗಣವೆಟ್ಟು: ಶಬ್ದಮದ, ೩೧ ಪ್ರ)

ಅಂಗದ
ಭುಜಕೀರ್ತಿ, ತೋಳಬಂದಿ (ಫಣಾಮಣಿಯುಂ ಮಣಿಕುಂಡಲ ಅಂಗದಪ್ರಮುಖವಿಭೂಷಣಮುಂ ನಿಜಾಂಗರುಚಿಯೊಳ್ ಪೆಣೆದಿರೆ: ಆದಿಪು, ೯. ೧೧೦)

ಅಂಗನಾಯಕ
ಅಂಗದೇಶದ ದೊರೆ, ಕರ್ಣ (ಬೇಗಂ ಇಸು ವೈರಿಯನೀಗಳೆ ಕೊಂದಪೆಂ ರಸಾಂಬರಧರಣೀ ವಿಭಾಗದೊಳಗಾವೆಡೆವೊಕ್ಕೊಡಂ ಅಂಗನಾಯಕಾ: ಪಂಪಭಾ, ೧೨. ೨೦೩)


logo