logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಗಂಬಡೆ
ಆಕಾರ ಧರಿಸು (ಶೃಂಗಾರಲಕ್ಷ್ಮಿಯಂಗಂ ಬಡೆದನೇಕರೂಪದಿಂ ನಿಂದಂತೆ: ಶಬರಶಂ, ೧.೭೯ ವ)

ಅಂಗಘಟನ
ಮೈಕಟ್ಟು (ಅಸಮಾಸ್ತ್ರನ ಅಂಗಘಟನಂ ಅದು ಅಸದೃಶಂ ಈ ವಿಭುವಿನಂಗಘಟನಕ್ಕೆ ಎನೆ: ಕರ್ಣನೇಮಿ, ೫. ೪)

ಅಂಗಚಿತ್ತ
ಪಾರಿತೋಷಕ (ನರೇಂದ್ರಂ ರಾಜಲೋಕಮಂ ವಿಸರ್ಜಿಸಿ ತನ್ನ ವಂಶವರ್ಧನೆಗಂಗಚಿತ್ತಮನಿತ್ತು: ಕಾದಂಬ, ೨. ೮೬ ವ)

ಅಂಗಚ್ಛವಿ
ದೇಹಕಾಂತಿ (ಪಿಳುಕಂ ಬೇಡಿತೆಗೆ ಸಲಹಲಿತ್ತೊಡೆ ಗೂಡಿನೊಳದು ಬಳೆದು ತಳೆದುದಂಗಚ್ಛವಿಯಂ: ಯಶೋಧಚ, ೩. ೩೬)

ಅಂಗಜ
ಮನ್ಮಥ (ನೆಗೞ ಕರ್ಪೂರ ಕಾಳಾಗರು ಮಳಯಮಹೀಜಂಗಳ್ ಏಳಾಲತಾಳೀ ಸ್ಥಗಿತಂಗಳ್ ಕಣ್ಗೆವಂದಿರ್ದುವಂ ಇವನೆ ವಲಂ ಕೊಂಬುಗೊಂಡ ಅಂಗಜಂ .. .. ಎಚ್ಚು ಮೆಚ್ಚಂ ಸಲಿಸುವಂ: ಪಂಪಭಾ, ೪. ೨೩)

ಅಂಗಜನೆಂಬಜಂ
ಮನ್ಮಥನೆಂಬ ಬ್ರಹ್ಮ (ಈ ಕನ್ನೆಯಂ ಮಾಡುವಲ್ಲಿಗೆ ಚಂದ್ರಂ ಮಳಯಾನಿಳಂ ಮಳಯಜಂ ನೀರೇಜಂ ಇಮ್ಮಾವು ಮಲ್ಲಿಗೆ ಎಂದಿಂತಿವಂ ಅೞ್ಕಱಂದ ಅಮರ್ದಿನೊಳ್ ತಾನೞಯಿಂ ತೊಯ್ದು ಮೆಲ್ಲಗೆ ಸಂದಂಗಜನೆಂಬಜಂ ಪಡೆದಂ: ಪಂಪಭಾ, ೪. ೭೫)

ಅಂಗಜನ್ಮ
ಮನ್ಮಥ (ಸೆಱೆಗೆಯ್ದು ಕಣ್ಣುಮಂ ಮನಮುಮಂ ಅಂಗಜನ್ಮನರಲಂಬುಗಳಿಂದೆ ಮರುಳ್ಚಿ: ಪಂಪಭಾ, ೨. ೪೦)

ಅಂಗಜಾಸ್ತ್ರ
ಮನ್ಮಥನ ಬಾಣ (ರಾಜಪುತ್ರಿಸ್ಮಿತ ಮಧುಮಧುರಾಪಾಂಗ ಜೈತ್ರಾಂಗಜಾಸ್ತ್ರಂಗಳ ಕೋಳಂ ನೂತನಪ್ರೇಮದೆ ನಿಮಿರ್ವೆಡೆಯೊಳ್ ಕಾವನಾವಂ: ಆದಿಪು, ೪. ೫೧)

ಅಂಗಜೋತ್ಪತ್ತಿಸುಖ
ಕಾಮಸುಖ (ಪೂಣ್ದೆನಗಾಗದಂಗಜೋತ್ಪತ್ತಿ ಸುಖಕ್ಕೆ ಸೋಲಲೞಗುಂ ಪುರುಷವ್ರತಂ: ಪಂಪಭಾ, ೧. ೭೫)

ಅಂಗಜೋತ್ಪನ್ನ ವಿಮೋಹ
ಕಾಮದಿಂದಾದ ವ್ಯಾಮೋಹ (ನೃಪತಿ ಬೇಡಿದುದಂ ಕುಡಲೊಲ್ಲದೆ ಅಂಗಜೋತ್ಪನ್ನ ವಿಮೋಹದಿಂದೞದಪಂ: ಪಂಪಭಾ, ೧. ೭೨)


logo