logo
भारतवाणी
bharatavani  
logo
Knowledge through Indian Languages
Bharatavani

Champoo Nudigannadi (Halagannada Shabdartha Sankalana)

Please click here to read PDF file Champoo Nudigannadi (Halagannada Shabdartha Sankalana)

ಅಂಕಂಗುಡು
ಓಡಲು ಕುದುರೆಗೆ ಸೂಚನೆ ಕೊಡು (ಅಂಕಂಗುಡಲೊಡಮದು ನಿಶ್ಶಂಕಂ ಪನ್ನೆರಡು ಯೋಜನಂ ಪಾಱದುದು: ಶಾಂತಿಪು, ೧೧. ೪೧ ವ)

ಅಂಕಂಗೊಳ್
ಅಂಕಂಗುಡು (ದಕ್ಷಿಣಚರಣದಿಂ ಅಂಕಂಗೊಂಡು ಭೋಂಕನೆಡೆದ ಕೊಸೆಯಂ ತೆಗೆದು: ನೇಮಿಪು, ೪. ೧೦೪ ವ)

ಅಂಕಕಾರ್ತಿ
ಅಂಕಕಾತಿ, ವೀರನಾರಿ (ಕಲಿಯೆನೆ ನೆಗೞ್ದಳ್ ಕಸವರಗಲಿಯೆನೆ ಗುಣದಂಕಕಾರ್ತಿ ಮೊನೆಯೊಳ್ ಮನೆಯೊಳ್: ಅಜಿತಪು, ೧. ೬೫)

ಅಂಕಕಾಱ
ಅಂಕವೆಂಬ ದ್ವಂದ್ವಯುದ್ಧ ಮಾಡುವವನು, ವೃತ್ತಿವೀರ (ನುಡಿಯಲಱಯದ ಅಂಕಕಾಱಂ ಆಕಾಶಮಂ ನೋಡಿದನೆಂಬಂತೆ: ಧರ್ಮಾಮೃ, ೯. ೮೨ ವ)

ಅಂಕಚಾರಣೆ
ವ್ಯಕ್ತಿ ಅಥವಾ ಪದಾರ್ಥದ ವಿಶೇಷ ಲಕ್ಷಣಗಳನ್ನು ಹೇಳುವುದು (ಅಂಕಚಾರಣೆಗಳೊಳಂ ಸಂತಂ ಪೇೞ್ಗೆ ಉೞದಾವೆಡೆಯಂತರದೊಳಂ ಆಗದು ಎಂದಂ ಅತಿಶಯಧವಳಂ: ಕವಿರಾಮಾ, ೨. ೨೯)

ಅಂಕಣಿ
ರಿಕಾಪು (ಜಾತ್ಯಶ್ವಂಗಳಂ ವಳಯಮಂ ಸೋಂಕದಂಕಣಿಯ ಹಂಗಿಲ್ಲದೆ ಭೋಂಕನೇಱೆ: ಗಿರಿಜಾಕ, ೬. ೫೫ ವ)

ಅಂಕತಳ
ತೊಡೆಯ ಮೇಲ್ಭಾಗ (ತದಂಗನಾ ಅಂಕತಳದೊಳ್ ಬಾಲಾರ್ಕನಂ ಪೋಲ್ತು ಭಾಸುರತೇಜೋಧಿಕನಪ್ಪ ಬಾಳನಂ: ಆದಿಪು, ೭. ೪೪)

ಅಂಕದಂಬು
ಹೆಸರುವಾಸಿಯಾದ ಬಾಣ (ಅಂಕದಂಬೆತ್ತಲುಂ ತುಱುಗಿ ನಡುವಿನಂ ಸಾರ್ದು ಸಾರ್ದೆಚ್ಚೆಚ್ಚು ಕಾದಿದರ್: ಪಂಪಭಾ, ೧೩. ೩೯)

ಅಂಕದ ವಸ್ತು
ಅಮೂಲ್ಯವಾದ ವಸ್ತು (ಮಿತ್ರಂ ಧನಂ ಧಾತ್ರಿ ಕಿಂಕರರ್ ಎಂಬ ಅಂಕದ ವಸ್ತುವಂ ಪಡೆಗೆ: ಪಂಚತಂತ್ರ, ೪೪೧)

ಅಂಕದೌಷಧ
ವೀರ್ಯಪುಷ್ಟಿಯ ಔಷಧ, ಪರಿಣಾಮಕಾರಿ ಔಷಧ (ಬಲಮರ್ದೆನೆ ಅಂಕದೌಷಧಂ: ರನ್ನ ನಿಘಂಟು, ೪)


logo