logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಂಗೀಕೃತ ಪಟ್ಟಿ
(ಭೌ) ಅಣುವಿನಲ್ಲಿ ಅಥವಾ
allowed band

ಅಂಗೀಕೃತ ಸಂಕ್ರಮಣ
(ಭೌ) ಶಕ್ತಿ ಮಟ್ಟಗಳ ನಡುವೆ ಎಲೆಕ್ಟ್ರಾನ್‌ಗಳ ಸಂಕ್ರಮಣ. ಇದು ಯಾವುದೇ ಕ್ವಾಂಟಮ್ ಆಯ್ಕೆ ನಿಯಮದಿಂದ ಪ್ರತಿಬಂಧಿತವಲ್ಲದುದು. ಅನುಮತ ಸಂಕ್ರಮಣ
allowed transition

ಅಂಗುಲ
(ಗ) ಬ್ರಿಟಿಷ್ ಮಾನಕ ವ್ಯವಸ್ಥೆಯಲ್ಲಿ ಉದ್ದದ ಏಕಮಾನ =೧/೩೬ ಗಜ=೧/೧೨ ಅಡಿ=೦.೦೨೫೪ ಮೀ. ಇಂಚು
inch

ಅಂಗುಲಾಸ್ಥಿ
(ಪ್ರಾ) ಕೈಯ ಅಥವಾ ಕಾಲಿನ ಬೆರಳೆಲುಬು
phalange

ಅಂಗುಲಿಗಾಮಿ
(ಪ್ರಾ) ಹಿಮ್ಮಡಿ ಊರದೆ ಬೆರಳುಗಳ ಮೇಲೆಯೇ ನಡೆಯುವ (ಪ್ರಾಣಿ). ಉದಾ: ನಾಯಿ, ಬೆಕ್ಕು, ಸಿಂಹ
digitigrade

ಅಂಗುಲೀಯ
(ಜೀ) ಬಿಡಿಬಿಡಿಯಾದ ಬೆರಳುಗಳಿರುವ, ಬೆರಳುಗಳಂಥ ಕವಲುಗಳಿರುವ
digitate

ಅಂಗುಸ್ತಾನ
(ತಂ) ಸೂಜೊತ್ತು. (ದರ್ಜಿಯ) ಬೆರಳ ಕಾಪು. ಅಂಗುಲಿತ್ರಾಣ
thimble

ಅಂಗುಳು
(ಜೀ) ಕಶೇರುಕಗಳಲ್ಲಿ ಬಾಯಿಯ, ಕೀಟಗಳಲ್ಲಿ ಗಂಟಲಿನ, ಮೇಲ್ಭಾಗ. ತಾಲು
palate

ಅಂಗೋರ
(ಸಾ) ಅಂಗೋರ ನಗರದ ಮೊಲ ಅಥವಾ ಮೇಕೆಯ ಕೂದಲು ಅಥವಾ ಇದರಿಂದ ನೇಯ್ದು ತಯಾರಿಸಿದ ಮೆತ್ತನೆ ಹಾರ ಮತ್ತು ವಸ್ತ್ರ
angora

ಅಂಗ್ಯುಲ
(ಪ್ರಾ) ಬೆರಳಿನ ತುದಿಯಲ್ಲಿರುವ ಉಗುರು, ಗೊರಸು ಅಥವಾ ಮೊನೆಯುಗುರು. ಪಂಜ
ungula


logo