logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಎಂ.ಕೆ.ಎಸ್. ಪದ್ಧತಿ MKS
(ಭೌ) ದೀರ್ಘತೆ (ಉದ್ದ), ದ್ರವ್ಯರಾಶಿ ಹಾಗೂ ಕಾಲವನ್ನು ಅಳೆಯಲು ಎ. ಗಿಯೋರ್ಗಿ ೧೯೦೧ರಲ್ಲಿ ಸಿಜಿಎಸ್ ಪದ್ಧತಿಯನ್ನು ಆಧರಿಸಿ ನಿರ್ಮಿಸಿದ ಮತ್ತು ಅಂತರರಾಷ್ಟ್ರೀಯ ವಿದ್ಯುತ್ ತಾಂತ್ರಿಕ ಆಯೋಗ ಅಂಗೀಕರಿಸಿದ ಮೀಟರ್-ಕಿಲೋಗ್ರಾಮ್-ಸೆಕೆಂಡ್‌ಗಳ ಮೆಟ್ರಿಕ್‌ಮಾನ ವ್ಯವಸ್ಥೆ. ೧೯೬೦ರಲ್ಲಿ ಇದಕ್ಕೆ ವಿದ್ಯುತ್ ಪ್ರವಾಹದ ಮಾನ ‘ಆಂಪೇರ್’ನ್ನು ಸೇರಿಸಲಾಯಿತು. ತದನಂತರ ಇದನ್ನು ಎಂಕೆಎಸ್‌ಎ ವ್ಯವಸ್ಥೆ ಎನ್ನಲಾಗುತ್ತಿದೆ
system

ಎಂಎಚ್‌ಡಿ
(ಭೌ) ನೋಡಿ: ಕಾಂತದ್ರವಬಲ ವಿಜ್ಞಾನ
magnetohydrodynamics

ಎಎಂಯು
(atomic mass unit) (ಭೌ) ಪರಮಾಣು ರಾಶಿ ಏಕಮಾನದ ಸಂಕ್ಷಿಪ್ತ ರೂಪ
amu

ಎಎಸ್‌ಸಿಐಐ ASCII
(ಕಂ) ನೋಡಿ: ಪ್ರತೀಕ ಸಂಕೇತ

ಎಕಪ್ನಿಯ
(ವೈ) ಅಕ್ಷರಶಃ ‘ಧೂಮರಹಿತ’, ಅಂದರೆ ಕಾರ್ಬನ್ ಡೈಆಕ್ಸೈಡ್ ಇರದ ಸ್ಥಿತಿ ಎಂದಾಗುತ್ತದೆ. ಆದರೆ ಇದೊಂದು ತಪ್ಪು ಬಳಕೆ. ವಾಸ್ತವವಾಗಿ ರಕ್ತದಲ್ಲಿ ಸಹಜ ಪ್ರಮಾಣಕ್ಕಿಂತ ಕಡಿಮೆ ಇರುವ ಕಾರ್ಬನ್ ಡೈಆಕ್ಸೈಡ್ ಸ್ಥಿತಿಯನ್ನು ಸೂಚಿಸಲು ಈ ಶಬ್ದವನ್ನು ಬಳಸಲಾಗುತ್ತದೆ
acapnia

ಎಕರೆ
(ಭೂ) ವಿಸ್ತೀರ್ಣದ ಒಂದು ಮಾನ = ೧೦ ಚದರ ಚೈನ್‌ಗಳು (೧ ಚೈನ್ = ೬೬ ಅಡಿಗಳು) ಅಥವಾ ೪೮೪೦ ಚದರ ಗಜಗಳು = ೦.೪೦೪೭ ಹೆಕ್ಟೇರ್ = ಸುಮಾರು ೪೦೫೦ ಚದರ ಮೀ
acre

ಎಕಿಮೋಸಿಸ್
(ವೈ) ಚರ್ಮದ ಕೆಳಗೆ ಅಥವಾ ಲೋಳೆಪೊರೆಯಡಿಯಲ್ಲಿ ರಕ್ತಸ್ರಾವವಾಗಿ, ಊದಿಕೊಂಡು, ಚರ್ಮದ ಮೇಲೆ ರೂಪುಗೊಳ್ಳುವ ಊದಾ ಬಣ್ಣದ ಕಲೆ
ecchymosis

ಎಕೊಸೌಂಡರ್
(ಸಾ) ಸಾಗರ ತಳಕ್ಕೆ ಪ್ರೇಷಿಸಿದ ಧ್ವನಿ ಪ್ರತಿಧ್ವನಿಯಾಗಿ ಮರಳುವವರೆಗಿನ ಅವಧಿಯನ್ನು ದಾಖಲಿಸಿ ಸಾಗರದ ಆಳವನ್ನು ಕಂಡುಹಿಡಿಯುವ ಸಾಧನ. ಸಾಗರಾಂತರ್ಗತ ವಸ್ತುಗಳ ಬಗೆಗಿನ ವಿವರಗಳನ್ನು ಇದರಿಂದ ತಿಳಿಯಬಹುದು. ಪ್ರತಿಧ್ವನಿ ಗಭೀರತಾಮಾಪಕ
echosounder

ಎಕ್ಕಿದ ದಾರ
(ತಂ) ಎಕ್ಕುವ ಸಲಕರಣೆಯಿಂದ ಹಿಂಜಿ ನೂತ ದಾರ
carded yarn

ಎಕ್ಕಿದ ಹತ್ತಿ
(ತಂ) ಮೆತ್ತೆ , ಹಾಸಿಗೆಗಳಿಗೆ ಬಳಸುವ ಹತ್ತಿ. (ವೈ) ಶಸ್ತ್ರಚಿಕಿತ್ಸೆ, ಅಂಗ ಪ್ರಸಾದನಗಳಲ್ಲಿ ಬಳಸುವ ಸಂಸ್ಕರಿಸಿದ ಹತ್ತಿ
cotton wool


logo