logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ವಂಕಿ ಆಕಾರದ
(ಸ) ಬಾಲ ಚಂದ್ರಾಕಾರದ
crescent

ವಕ್ರ
(ಗ) ಸ್ವಾತಂತ್ರ್ಯಾಂಕ ೧ ಇರುವ ಬಿಂದು ರೇಖಿಸುವ ಡೊಂಕುಗೆರೆ. ವಕ್ರರೇಖೆ
curve

ವಕ್ರಖಂಡ
(ಗ) ನೋಡಿ : ರೇಖಾಖಂಡ
segment

ವಕ್ರಗಳ ಹೊಂದಿಕೆ
(ಸಂ) ಸಂಬಂಧಿತ ಚರ y ಮತ್ತು xಗಳ ಬಗ್ಗೆ ದತ್ತಾಂಶವನ್ನು ಬಳಸಿ ಈ ಸಂಬಂಧವನ್ನು ಬಿಂಬಿಸಲು ಅತ್ಯಂತ ಸೂಕ್ತವೆನಿಸುವ ವಕ್ರದ ರಚನೆ; ಇದಕ್ಕೆ ಹಲವು ವಿಧಾನಗಳಿವೆ. ಕನಿಷ್ಠತಮ ವರ್ಗ ಮೊತ್ತದ ವಿಧಾನ ಅತ್ಯಂತ ಜನಪ್ರಿಯ
curve fitting

ವಕ್ರಚಲನೆ
(ಖ) ಭೂಮಿಯಿಂದ ಕಾಣುವಂತೆ ಗ್ರಹಗಳು ಪೂರ್ವ-ಪಶ್ಚಿಮ ದಿಶೆಯಲ್ಲಿ ಚಲಿಸುವುದು. ಖಗೋಳದಲ್ಲಿ ಗೋಚರಿಸುವ ಏಳು ಚರಕಾಯಗಳ (ಶನಿ, ಗುರು, ಕುಜ, ಸೂರ್ಯ, ಶುಕ್ರ, ಬುಧ, ಚಂದ್ರ - ಭೂಮಿಯ ಸುತ್ತ ಅವುಗಳ ವಾರ್ಷಿಕ ಪರಿಭ್ರಮಣಾವಧಿಗಳ ಅವರೋಹೀ ಕ್ರಮದಲ್ಲಿ) ಸಹಜ ಚಲನೆಯ ದಿಶೆಗೆ (ಪಶ್ಚಿಮದಿಂದ ಪೂರ್ವಕ್ಕೆ) ವಿರುದ್ಧ ದಿಶೆಯ (ಪೂರ್ವದಿಂದ ಪಶ್ಚಿಮಕ್ಕೆ) ಚಲನೆ. ಸಹಜ ಚಲನೆಗೆ ಮಾರ್ಗ ಚಲನೆ ಎಂದು ಹೆಸರು. ಸೂರ್ಯ ಮತ್ತು ಚಂದ್ರರಿಗೆ ವಕ್ರಚಲನೆ ಇಲ್ಲ. ಐದು ಗ್ರಹಗಳ (ಬುಧ, ಶುಕ್ರ, ಕುಜ, ಗುರು, ಶನಿ) ನೈಜ ಚಲನದಿಶೆಗಳು ಪಶ್ಚಿಮ-ಪೂರ್ವವೇ ಆಗಿದ್ದರೂ ಭೂಮಿಯಲ್ಲಿಯ ನಮಗೆ, ಭೂಚಲನೆಯ ಕಾರಣವಾಗಿ, ಅವು ಕೆಲವೊಮ್ಮೆ ಪೂರ್ವ-ಪಶ್ಚಿಮ ದಿಶೆಯಲ್ಲಿ ಸರಿದಂತೆ ಭಾಸವಾಗುತ್ತದೆ. ಇದೇ ವಕ್ರಚಲನೆ - ಆಯಾ ಗ್ರಹದ ಸಹಜ ಗುಣವಲ್ಲ, ಭೂಚಲನೆಯ ಪರೋಕ್ಷ ಪರಿಣಾಮ ಮಾತ್ರ
retrograde motion

ವಕ್ರತಾ ತ್ರಿಜ್ಯ
(ಗ) ವಕ್ರರೇಖೆಯ ವಕ್ರತೆಯ ವ್ಯುತ್ಕ್ರಮ. ನೋಡಿ: ವಕ್ರತೆ
radius of curvature

ವಕ್ರತಾ ವೃತ್ತ
(ಗ) ನೋಡಿ : ವಕ್ರತೆ
circle of curvature

ವಕ್ರತಾಕೇಂದ್ರ
(ಗ) ವಕ್ರರೇಖೆಯ ಒಂದು ಜೊತೆ ಆಸನ್ನ ಬಿಂದುಗಳಲ್ಲಿ ಅದಕ್ಕೆಳೆದ ಲಂಬಗಳು ಸಂಧಿಸುವ ಬಿಂದು. ವೃತ್ತದಲ್ಲಿ ಇದು ವೃತ್ತಕೇಂದ್ರವೇ ಆಗುತ್ತದೆ. ವಕ್ರತಾ ಕೇಂದ್ರವನ್ನು ಕೇಂದ್ರವಾಗಿಯೂ ಇದರಿಂದ ಆಸನ್ನ ಬಿಂದುಗಳ ದೂರವನ್ನು ತ್ರಿಜ್ಯವಾಗಿಯೂ ಆಯ್ದು ರಚಿಸಿದ ವೃತ್ತಕ್ಕೆ ವಕ್ರತಾವೃತ್ತ ಎಂದು ಹೆಸರು. ಆಸನ್ನ ಬಿಂದುಗಳು ವಕ್ರತಾರೇಖೆಯಲ್ಲಿ ಚಲಿಸಿದಂತೆ ವಕ್ರತಾಕೇಂದ್ರ ರೇಖಿಸುವ ಪಥಕ್ಕೆ ಕೇಂದ್ರಜವೆಂದು ಹೆಸರು
centre of curvature

ವಕ್ರತೆ
(ಭೂವಿ) ನೋಡಿ: ತಿರುಚುಮುರುಚುತನ
tortuosity

ವಕ್ರತೆ
(ಗ) ವಕ್ರರೇಖೆಯ ಬಾಗು ಅಥವಾ ಡೊಂಕುತನದ ಅಳತೆ. ವೃತ್ತ ಕುರಿತಂತೆ ಇದು ತ್ರಿಜ್ಯದ ವ್ಯುತ್ಕ್ರಮ. ಯಾವುದೇ ಸಮತಲ ವಕ್ರರೇಖೆ ಕುರಿತಂತೆ ವಕ್ರತೆ ಪಡೆವ ವಿಧಾನ. P ಮತ್ತು Q ಎಂಬ ಎರಡು ಆಸನ್ನ ಬಿಂದುಗಳಲ್ಲಿ ವಕ್ರರೇಖೆಗೆ ಎಳೆದ ಲಂಬಗಳು PN ಮತ್ತು QN ಒಳಗೊಳ್ಳುವ ಕೋನ PNQ = dy. ಕಂಸ AP=s, PQ=ds ಆಗಿದ್ದರೆ (A ಆ ವಕ್ರರೇಖೆಯ ಮೇಲಿನ ಒಂದು ಸ್ಥಿರಬಿಂದು) ds / dyಯನ್ನು- P ಬಿಂದುವಿನಲ್ಲಿ ವಕ್ರರೇಖೆಯ ವಕ್ರತಾ ತ್ರಿಜ್ಯ ಎನ್ನುತ್ತೇವೆ---. ಪ್ರತೀಕ p. ವಕ್ರತಾ ತ್ರಿಜ್ಯದ ವ್ಯುತ್ಕ್ರಮವೇ Pಯಲ್ಲಿ ವಕ್ರರೇಖೆಯ ವಕ್ರತೆ. ಬಿಂದು Q ವಕ್ರರೇಖೆಯ ನೇರ P-ಗಾಮಿ ಯಾಗಿ ಅಂತಿಮ ಪರಿಮಿತಿಯಲ್ಲಿ Pಯೊಡನೆ ಐಕ್ಯವಾಗುವಾಗ, N ಕೇಂದ್ರವಾಗಿಯೂ p ತ್ರಿಜ್ಯವಾಗಿಯೂ ಎಳೆದ ವೃತ್ತ ವಕ್ರರೇಖೆಯನ್ನು Pಯಲ್ಲಿ ಸ್ಪರ್ಶಿಸುತ್ತದೆ. ಇದು P ಬಿಂದುವಿನಲ್ಲಿ ವಕ್ರರೇಖೆಯ ವಕ್ರತಾವೃತ್ತ. ಹೀಗೆ, ವಕ್ರರೇಖೆಯ ಯಾವುದೇ ಬಿಂದುವಿನಲ್ಲಿಯ ವಕ್ರತಾವೃತ್ತದ ತ್ರಿಜ್ಯದ ವ್ಯುತ್ಕ್ರಮವೇ ಅಲ್ಲಿ ಆ ವಕ್ರರೇಖೆಯ ವಕ್ರತೆ
curvature


logo