logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಫಂಡಸ್
(ವೈ) ೧. ನೇತ್ರದರ್ಶಕ ಬಳಸಿ ಪಾಪೆಯ ಮೂಲಕ ಕಾಣಬಹುದಾದ ಕಣ್ಣುಗುಡ್ಡೆಯ ಪೊಳ್ಳುಭಾಗ. ೨. ಹೊಟ್ಟೆಯ ಅಥವಾ ಯಾವುದೇ ಟೊಳ್ಳಾದ ಅಂಗದ ಅತ್ಯಂತ ತಳಭಾಗ
fundus

ಫಣಿ
(ವೈ) ಚರ್ಮದ ಅಡಿಯಲ್ಲಿ ಏಳುವ ಕುರು
carbuncle

ಫರ್
(ಸ) ಪೈನೇಸೀ ಕುಟುಂಬದ ಹಾಗೂ ಏಬೀಸ್ ಜಾತಿಗೆ ಸೇರಿದ ಒಂದು ವೃಕ್ಷ. ಹೊಡೆಗಳ ಮೇಲೆ ಸೂಜಿ ಆಕಾರದ ಬಿಡಿಬಿಡಿ ಎಲೆಗಳು ಇರುತ್ತವೆ. ಕಾಯಿಗಳು ಶಂಕುವಿನ ಆಕಾರ. ದಾರು ಮೃದು, ಸಂಗೀತ ವಾದ್ಯ ಭಾಗಗಳ ತಯಾರಿಕೆ ಯಲ್ಲೂ ಹಡಗು ನಿರ್ಮಾಣದಲ್ಲೂ ಬಳಕೆ
fir

ಫರ್ಕ್ಯುಲ
(ಜೀ) ಹಕ್ಕಿಗಳಲ್ಲಿ ಎರಡು ಕ್ಲಾವಿಕಲ್ ಮೂಳೆಗಳು ‘U’ ಅಥವಾ ‘V’ ಆಕಾರದಲ್ಲಿ ಕೂಡಿ ಆದ ರಚನೆ
furcula

ಫರ್‌ಫರ್
(ವೈ) ಕೆಳಗಡೆ ಹೊಸ ಚರ್ಮ ಹುಟ್ಟಿದ ಹಾಗೆಲ್ಲ ಮೇಲುಗಡೆ ಉದುರುತ್ತ ಹೋಗುವ ಸತ್ತ ಚರ್ಮದ ಹುರುಪೆ. ಹಗರು. ಮುಖ್ಯವಾಗಿ ತಲೆ ಹೊಟ್ಟು. ಸಿಬ್ಬು. ಸಿಂಡು
furfur

ಫರ್ಮಿ
(ಭೌ) ಫೆಮ್ಟೊಮೀಟರ್, ಪ್ರತೀಕ fm, ಅತಿ ಕಡಿಮೆ ಉದ್ದವನ್ನು ಅಳೆಯಲು ಬಳಸುವ ಮಾನ, ೧೦-೧೫ ಮೀ. ಉದ್ದಕ್ಕೆ ಸಮ. ಪ್ರೋಟಾನ್ ತ್ರಿಜ್ಯದ ದರ್ಜೆಯಲ್ಲಿದೆ. 1.2 fm. ಬೈಜಿಕ ಭೌತವಿಜ್ಞಾನ ದಲ್ಲಿ ಬಳಕೆ. ಎನ್ರಿಕೊಫರ್ಮಿ (೧೯೦೧-೫೪) ಸ್ಮರಣಾರ್ಥ ಈ ಹೆಸರು
fermi

ಫರ್ಮಿಯಮ್
(ರ) ಪ್ರತೀಕ Fm. ಮಾನವನಿರ್ಮಿತ ಧಾತು. ಪರಮಾಣು ಸಂಖ್ಯೆ ೧೦೦. ಮುಖ್ಯ ಸಮಸ್ಥಾನಿ ೨೫೭Fm. ಅರ್ಧಾಯು ೮೦ ದಿನಗಳು. ೧೯೫೨ರಲ್ಲಿ ಸಿಡಿಸಲಾದ ಮೊದಲ ಹೈಡ್ರೊಜನ್ ಬಾಂಬ್‌ನ ಭಗ್ನಾವಶೇಷಗಳಲ್ಲಿ ಇದನ್ನು ಮೊದಲು ಪತ್ತೆ ಹಚ್ಚಲಾಯಿತು
fermium

ಫರ್ಮಿಯಾನ್
(ಭೌ) ಫರ್ಮಿ-ಡಿರಾಕ್ ಸಂಖ್ಯಾಕಲನ ಸಿದ್ಧಾಂತವನ್ನು ಪಾಲಿಸುವ ಒಂದು ಕಣ. ಉದಾ: ಬೇರ‍್ಯಾನ್ ಮತ್ತು ಲೆಪ್ಟಾನ್‌ಗಳು. ಇವು ಪೌಲಿ ಬಹಿಷ್ಕರಣ ತತ್ತ್ವಕ್ಕೆ ಬದ್ಧ
fermion

ಫರ್ಲಾಂಗ್
(ಸಾ) ದೂರಕ್ಕೆ ಸಂಬಂಧಿಸಿದ ಬ್ರಿಟಿಷ್ ಏಕಮಾನ. ಒಂದು ಮೈಲಿಯ ಎಂಟನೇ ಒಂದು ಭಾಗ. ೨೨೦ ಗಜ. ೨೦೧.೧೭ ಮೀಟರ್‌ಗೆ ಸಮ
furlong

ಫಲಕ
(ತಂ) ಮುಖ. ಸೂಚೀಫಲಕ
dial


logo