logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಹಕ್ಕಳೆ
(ವೈ) ಗಾಯ ಮಾಯುವಲ್ಲಿ ಅದರ ಮೇಲೆ ಕಟ್ಟುವ ಒರಟು ಒಣಕಲು ಪದರ. ಹುರುಪು. ಕಿರಟು
scale

ಹಕ್ಕಿಕಡಪಿನ ರೋಗ
(ವೈ) ಮಕ್ಕಳಲ್ಲಿ ಮೂಳೆ ವಕ್ರಗೊಂಡ ರೋಗ. ಕುಟಿಲವಾತ. ನೋಡಿ : ರಿಕೆಟ್ಸ್
rickets

ಹಗರು
(ವೈ) ಕೆಳಗಡೆ ಹೊಸ ಚರ್ಮ ಹುಟ್ಟಿದ ಹಾಗೆಲ್ಲ ಮೇಲುಗಡೆ ಉದುರುತ್ತ ಹೋಗುವ ಸತ್ತ ಚರ್ಮ. ಹುರುಪೆ. ಉದಾ : ತಲೆಹೊಟ್ಟು
scurf

ಹಗೇವು
(ತಂ) ಧಾನ್ಯಗಳು, ಹಸಿರು ಮೇವು ಮೊದಲಾದವನ್ನು ಶೇಖರಿಸಿಡಲು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾದ ನೆಲದಡಿಯ ರಚನೆ. ಕಣಜ
silo

ಹಡಗು ಕಟ್ಟೆ
(ತಂ) ರೇವಿನಲ್ಲಿ ಹಡಗಿಗೆ ಸರಕು ತುಂಬಿಸಲು ಇಲ್ಲವೇ ಅದರಿಂದ ಸರಕನ್ನು ಇಳಿಸಲು ನಿಗದಿಯಾಗಿರುವ ಸ್ಥಳ
dock

ಹಡಗು ಜಗಲಿ
(ತಂ) ಸಾಮಾನು ತುಂಬುವುದು, ಇಳಿಸುವುದು ಮೊದಲಾದವಕ್ಕಾಗಿ ಹಡಗನ್ನು ಪಕ್ಕದಲ್ಲಿ ನಿಲ್ಲಿಸಲು ಅನುಕೂಲಿಸುವಂತೆ ತೀರಕ್ಕೆ ಸಮಾಂತರವಾಗಿ ನಿರ್ಮಿಸಿದ ಮರದ ಆಥವಾ ಕಲ್ಲಿನ ಜಗಲಿ. ಸರಕು ಕಟ್ಟೆ. ಬಂದರು ಕಟ್ಟೆ
wharf

ಹಡಗುಕೊರಕ
(ಪ್ರಾ) ನೋಡಿ : ಟೆರೆಡೊ
teredo

ಹಂಡ್ರೆಡ್‌ವೇಟ್
(ಸಾ) ತೂಕದ ಏಕಮಾನ. ಪ್ರತೀಕ CWt. ಬ್ರಿಟನ್‌ನಲ್ಲಿ = ೧೧೨ ಪೌಂಡ್. ಮೆಟ್ರಿಕ್ ಮಾನದಲ್ಲಿ = ೫೦ ಕಿಗ್ರಾಮ್. ಅಮೆರಿಕದಲ್ಲಿ = ೧೦೦ ಪೌಂಡ್
hundredweight

ಹಣತೆ ಮಸಿ
(ರ) ೧. ದೀಪದ ಹೊಗೆ ಕಪ್ಪಿನಿಂದ ತಯಾರಿಸಿದ ವರ್ಣದ್ರವ್ಯ. ಕಾರ್ಬನ್‌ನ ಭಿನ್ನವರ್ತಕ ರೂಪ. ೨. ಅಧಿಕ ಪ್ರಮಾಣದಲ್ಲಿ ಕಾರ್ಬನ್ ಇರುವ ಖನಿಜಯುತ ತೈಲ, ಟರ್ಪೆಂಟೈನ್, ಡಾಮರು ಇತ್ಯಾದಿಗಳನ್ನು ಸೀಮಿತ ವಾಯು ಹರವಿನಲ್ಲಿ ಹೊಗೆ ಕಾರುವ ಜ್ವಾಲೆಯೊಂದಿಗೆ ಉರಿಯುವಂತೆ ಮಾಡಿದಾಗ ಲಭಿಸುವ ಮಸಿ. ಇದು ಕಪ್ಪಗಿದ್ದು ಇದರಲ್ಲಿ ಶೇ. ೮೦-೮೫ರಷ್ಟು ಕಾರ್ಬನ್ ಮತ್ತು ಅಲ್ಪ ಪ್ರಮಾಣದಲ್ಲಿ ತೈಲ ಸಾಮಗ್ರಿ ಇರುತ್ತವೆ. ನೋಡಿ : ಕಾರ್ಬನ್ ಬ್ಲ್ಯಾಕ್
lamp black

ಹಣ್ಣು
(ಸ) ಬೀಜಗಳು ಪಕ್ವಗೊಂಡಂತೆ ಆವೃತಬೀಜೀಯ ಅಂಡಾಶಯದಿಂದ ವಿಕಸಿಸುವ ಸಸ್ಯಭಾಗ. ಮಿಥ್ಯಾ ಫಲ, ಸತ್ಯ ಫಲಗಳ ಜೊತೆರಚನೆಗಳಿರಬಹುದು, ಇಲ್ಲದಿರಬಹುದು. ಫಲ
fruit


logo