logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಧಕ್ಕೆ ತರಂಗ
(ಭೌ) ನೋಡಿ: ಆಘಾತ ತರಂಗ
shockwave

ಧನ
(ಗ) ಸೊನ್ನೆಗಿಂತ ಹೆಚ್ಚಿನ ಮೌಲ್ಯವುಳ್ಳದ್ದು
positive

ಧನಕಿರಣ
(ಭೌ) ಧನ ವಿದ್ಯುದಾವೇಶಯುತ ಅಯಾನ್‌ಗಳ ಹೊನಲು. ಅನಿಲದ ಮೂಲಕ ವಿದ್ಯುತ್ ವಿಸರ್ಜನೆಯಿಂದ ಇದನ್ನು ಉಂಟುಮಾಡಬಹುದು
positive ray

ಧನವಿದ್ಯುತ್ತು
(ಭೌ) ಯಾವುದೇ ಕಾಯದಲ್ಲಿ ಎಲೆಕ್ಟ್ರಾನ್‌ಗಳ ಕೊರತೆಗೆ ಸಂಬಂಧಿಸಿದಂಥ ಪರಿಣಾಮಗಳನ್ನು ಉಂಟುಮಾಡುವ ವಿದ್ಯಮಾನ. ಉದಾ: ರೇಷ್ಮೆಯಿಂದ ಉಜ್ಜಿದಾಗ ಗಾಜಿನ ಮೇಲೆ ಧನವಿದ್ಯುತ್ತು ಉಂಟಾಗುತ್ತದೆ. ನೋಡಿ: ಋಣವಿದ್ಯುತ್ತು
positive electricity

ಧನವಿದ್ಯುದ್ವಾರ
(ಭೌ) ನೋಡಿ: ಆನೋಡ್
anode

ಧನಾತ್ಮಕ
(ಭೌ) ೧. ಸಹಜ ಸ್ಥಿತಿಯಲ್ಲಿರುವುದಕ್ಕಿಂತ ಕಡಿಮೆ ಸಂಖ್ಯೆಯ ಎಲೆಕ್ಟ್ರಾನ್‌ಗಳಿದ್ದು ಆ ಕಾರಣದಿಂದ ಎಲೆಕ್ಟ್ರಾನ್‌ಗಳನ್ನು ತನ್ನತ್ತ ಆಕರ್ಷಿಸುವ, ಅಂತೆಯೇ ಪ್ರೋಟಾನ್‌ಗಳನ್ನು ವಿಕರ್ಷಿಸುವ, ಸಾಮರ್ಥ್ಯವುಳ್ಳ. ೨. ವಿದ್ಯುನ್ಮಂಡಲದಲ್ಲಿ ಭೂಮಿಗಿಂತ ಹೆಚ್ಚಿನ ವಿಭವಶಕ್ತಿ ಇರುವ ಬಿಂದು
positive

ಧನಾತ್ಮಕ ಬೆಲೆ
(ಗ) ನೋಡಿ : ಮಾಡ್ಯುಲಸ್. x ಎಂಬ ಚರಾಂಕದ ಧನಾತ್ಮಕ ಬೆಲೆಯ ಉತ್ಪನ್ನವನ್ನು |x| ಎಂದು ಸೂಚಿಸ ಲಾಗುವುದು. ದತ್ತ ಚರಾಂಕ xನ ಬೆಲೆಯು (i) ಧನಾತ್ಮಕವಾಗಿದ್ದರೆ |x|=x ಆಗಿಯೂ (ii) ಋಣಾತ್ಮಕವಾಗಿದ್ದರೆ |x|=-x ಆಗಿಯೂ ಮತ್ತು (iii) ಶೂನ್ಯವಾಗಿದ್ದರೆ |x|=0 ಆಗಿಯೂ ಇರುತ್ತದೆ. ಉದಾ: |2|=2, |-|.5|=1.5, |0|=0
modulus

ಧನಾವೇಶ
(ಭೌ) ವಿದ್ಯುದಾವೇಶದ ಎರಡು ಬಗೆಗಳಲ್ಲಿ ಒಂದು-ಪ್ರೋಟಾನ್‌ನದು; ಇನ್ನೊಂದು ಋಣಾವೇಶ - ಎಲೆಕ್ಟ್ರಾನ್‌ನದು. ರೇಷ್ಮೆಯಿಂದ ಗಾಜನ್ನು ಉಜ್ಜಿದಾಗ ಗಾಜಿನಲ್ಲಿ ಧನಾವೇಶ ಉಂಟಾಗುತ್ತದೆ
positive charge

ಧನುರ್ವಾಯು
(ವೈ) ಕ್ಲಾಸ್‌ಟ್ರಿಡಿಯಮ್ ಟೆಟನಿ ಎಂಬ ಬ್ಯಾಸಿಲಸ್‌ನ ಸೋಂಕಿನಿಂದ ದೇಹದಲ್ಲಿ ಬಿಡುಗಡೆಯಾಗುವ ಜೀವಿವಿಷದಿಂದ (ಟಾಕ್ಸಿನ್) ಉಂಟಾಗುವ ಸ್ನಾಯು ಸೆಳವು ರೋಗ. ದವಡೆ ಸ್ನಾಯುಗಳು ಸೆಟೆದು ಬಾಯಿ ಬಿಡಲಾಗದೆ ತೀವ್ರ ನೋವಿನಿಂದ ಉಂಟಾಗುವ ಸೆಳವು ರೋಗ. ಸಕಾಲದಲ್ಲಿ ಯುಕ್ತ ಚಿಕಿತ್ಸೆ ನೀಡದಿದ್ದಲ್ಲಿ, ಮರಣದಲ್ಲಿ ಪರ್ಯವಸಾನಗೊಳ್ಳುವ ಮಾರಕರೋಗ. ತುಕ್ಕು ಹಿಡಿದ ಕಬ್ಬಿಣ, ಜಾನುವಾರು ಲದ್ದಿ, ರಸ್ತೆಯಲ್ಲಿರುವ ರದ್ದಿ ಮುಂತಾದವುಗಳ ಜೊತೆ ತೆರೆದ ಗಾಯ ಸಂಪರ್ಕಕ್ಕೆ ಬಂದಾಗ ಈ ಬೇನೆ ಅಂಟಬಹುದು. ಜೀವಿವಿಷವನ್ನು ಚುಚ್ಚುಮದ್ದಾಗಿ ನೀಡಿ ರೋಗಬಾರದಂತೆ ಸಂರಕ್ಷಣೆ ಒದಗಿಸ ಬಹುದು. ಲಾಕ್‌ಜಾ, ಟೆಟನಸ್
tetanus

ಧಮನಿ
(ವೈ) ಹೃದಯದಿಂದ ಆಕ್ಸಿಜನ್‌ಭರಿತ ರಕ್ತವನ್ನು ದೇಹದ ಎಲ್ಲ ಅಂಗಾಂಗಗಳಿಗೆ ಸಾಗಿಸುವ ದಪ್ಪ ಭಿತ್ತಿಯ ರಕ್ತನಾಳ. ಈ ಸಾರ್ವಕಾಲಿಕ ನಿಯಮಕ್ಕೆ ಒಂದೇ ಒಂದು ಅಪವಾದವಿದೆ: ಪಲ್ಮನರಿ ಆರ‍್ಟರಿ (ಶ್ವಾಸಧಮನಿ)ಯು ಆಕ್ಸಿಜನ್ ಪೂರೈಕೆ ಆಗದೆ ಇರುವ ರಕ್ತವನ್ನು ಹೃದಯದ ಬಲಹೃತ್ಕರ್ಷಿಯಿಂದ ಶ್ವಾಸಕೋಶಕ್ಕೆ ಒಯ್ಯುತ್ತದೆ. ಅಲ್ಲಿ ರಕ್ತಕ್ಕೆ ಆಕ್ಸಿಜನ್ ಪೂರೈಕೆಯಾಗುತ್ತದೆ. ದೊಡ್ಡ ಧಮನಿಯು ಅನೇಕಾನೇಕ ಸಣ್ಣ ಧಮನಿಗಳಾಗಿ ದೇಹಾದ್ಯಂತ ವ್ಯಾಪಿಸಿದೆ. ಎಲ್ಲ ಧಮನಿಗಳೂ ಸ್ನಾಯುಭಿತ್ತಿಯಿಂದ ಕೂಡಿದ್ದು ಭಿತ್ತಿಯ ಸಂಕೋಚನವು ರಕ್ತಪರಿಚಲನೆಗೆ ಸಹಕಾರಿ
artery


logo