logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ತಗಡು
(ಭೌ) ತೆಳು ಪೊರೆಯಂಥ ರಚನೆಯುಳ್ಳ ಸಾಮಗ್ರಿ. ಆದರೆ ಇದರ ದಪ್ಪ ೦.೨೫ ಮಿಮೀಗಿಂತ ಹೆಚ್ಚು. ೬ ಮಿಮೀಗಿಂತ ಹೆಚ್ಚಾಗಿದ್ದರೆ ಅದಕ್ಕೆ ಫಲಕ ಎಂದು ಹೆಸರು. ಹಲಗೆ
sheet

ತಟಬಂಧ
(ತಂ) ೧. ನದಿಯ ನೆರೆಯನ್ನು ತಡೆಯಲು ಹಾಕಿದ ಅಣೆಕಟ್ಟು. ೨. ನದಿ ತಾನೇ ನಿರ್ಮಿಸಿಕೊಂಡ ನೈಸರ್ಗಿಕ ಒಡ್ಡು
levee

ತಟಸ್ಥ
(ರ) ಆಮ್ಲೀಯವೂ ಅಲ್ಲದ, ಕ್ಷಾರೀಯವೂ ಅಲ್ಲದ. ಅಂದರೆ H ಹಾಗೂ ಹೈಡ್ರಾಕ್ಸಿಲ್ (OH) ಅಯಾನ್‌ಗಳು ಸಮಸಂಖ್ಯೆಯಲ್ಲಿರುವ (ಭೌ) ಋಣ ಅಥವಾ ಧನ ವಿದ್ಯುದಾವೇಶ ಇರದ. (ತಂ) ದೀರ್ಘ ರಾಸಾಯನಿಕ ಬಾಳಿಕೆಯ. ಉದಾ: ಗಾಜು
neutral

ತಟಸ್ಥ ಸಮಸ್ಥಿತಿ
(ಭೌ) ತುಸು ಸ್ಥಾನಪಲ್ಲಟ ವಾದರೂ ವಿಭವಶಕ್ತಿ ವ್ಯತ್ಯಯವಾಗದ ಕಾಯಕ ಸ್ಥಿತಿ
neutral equilibrium

ತಟಸ್ಥೀಕರಣ
(ರ) ಆಮ್ಲಕ್ಕೆ ಕ್ಷಾರವನ್ನು/ಕ್ಷಾರಕ್ಕೆ ಆಮ್ಲವನ್ನು ಯಾವೊಂದರ ಪ್ರಮಾಣವೂ ಹೆಚ್ಚಿರದಂತೆ ಬೆರೆಸಿ ದ್ರವವನ್ನು ತಟಸ್ಥಗೊಳಿಸುವುದು. ಆಮ್ಲ ಪ್ರತ್ಯಾಮ್ಲದೊಂದಿಗೆ ವರ್ತಿಸಿ ಲವಣ ಮತ್ತು ನೀರು ಮಾತ್ರ ಉತ್ಪಾದನೆಯಾಗುವುವು
neutralization

ತಟಸ್ಥೀಕರಣೋಷ್ಣ
(ರ) ಸಾರರಿಕ್ತ ದ್ರಾವಣಗಳಾಗಿರುವ, ಸಮಾನ ತೂಕದ ಆಮ್ಲ-ಪ್ರತ್ಯಾಮ್ಲಗಳ ಪ್ರತಿಕ್ರಿಯೆಯಿಂದ ಬಿಡುಗಡೆಯಾಗುವ ಉಷ್ಣ. ಪ್ರಬಲ ಆಮ್ಲ HCl, HNO3 ಪ್ರತ್ಯಾಮ್ಲ NaOH, KOH ಇವುಗಳಿಗೆ ಈ ಮೌಲ್ಯ ಸರಿಸುಮಾರು - ೧೩.೬ ಕಿ.ಕ್ಯಾ.
heat of neutralisation

ತಟ್ಟು
(ವೈ) ರೋಗಪರೀಕ್ಷೆಗಾಗಿ ಶರೀರದ ಭಾಗವನ್ನು ಮೆದುವಾಗಿ ತಟ್ಟುವುದು
percussion

ತಟ್ಟೆಪಾದ
(ವೈ) ಪಾದದ ಮಧ್ಯೆ ಕಮಾನು ಆಕಾರವಿಲ್ಲದೆ ಇಡೀ ಪಾದ ನೆಲ ತಾಕುವಂತೆ ಚಪ್ಪಟೆಯಾಗಿರುವ ಸ್ಥಿತಿ
flat foot

ತಡಕೆ
(ಪ್ರಾ) ಸ್ತನಿಗಳಲ್ಲಿ ಅಂಡಾಶಯ ಅಥವಾ ವೃಷಣದಲ್ಲಿಯ ಯೋಜೀ (ಸಂಯೋಜಕ) ಊತಕಗಳ ಚೌಕಟ್ಟು. ಆಧಾರಕಟ್ಟು
stroma

ತಡೆ
(ಭೂವಿ) ಭೂಮಿಯಲ್ಲಿ ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲಗಳ ಊರ್ಧ್ವಮುಖ ಚಲನೆಗೆ ಅಡ್ಡಿಬರುವ ಯಾವುದೇ ತಡೆ. ಪೆಟ್ರೋಲಿಯಮ್ ಸಂಚಯನಕ್ಕೆ ಸಹಕಾರಿ
trap


logo