logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಝಂಝಾಮಾರುತ
(ಭೂ) ಬೀಸುಗಾಳಿಯ ವೇಗದಲ್ಲಿ ಕೆಲವೇ ಮಿನಿಟ್ ಕಾಲ ಪ್ರಕಟವಾಗುವ ತಾತ್ಕಾಲಿಕ ತೀವ್ರ ಹೆಚ್ಚಳ. (ಅಮೆರಿಕದಲ್ಲಿ) ಸೆಕೆಂಡ್‌ಗೆ ೮.೨೩ ಮೀಟರ್ ವೇಗದಲ್ಲಿ ಎರಡು ಮಿನಿಟ್‌ವರೆಗಾದರೂ ಬೀಸುವ ಗಾಳಿ. ವರ್ಷಮಾರುತ
squall

ಝಂಝಾವಾತ
(ಭೂವಿ) ಸಾಕಷ್ಟು ಕ್ಷೋಭೆ ಉಂಟು ಮಾಡುವ ಮತ್ತು ಮಳೆ ಆಲಿಕಲ್ಲು ಸುರಿಸುವ ಚಂಡಮಾರುತ
tempest

ಝಳ
(ಭೌ) ಒಂದು ಅಥವಾ ಹೆಚ್ಚು ಗೋಚರ ಬೆಳಕಿನ ಆಕರವು ವೀಕ್ಷಕನ ನೋಟಕ್ಕೆ ಉಂಟುಮಾಡುವ ಅಹಿತ ಭಾವನೆ
glare

ಝೇಂಕಾರ ಪಕ್ಷಿ
(ಪ್ರಾ) ತ್ವರಿತವಾಗಿ ರೆಕ್ಕೆ ಬಡಿಯುವುದರಿಂದ (ಸೆಕೆಂಡ್‌ಗೆ ೫೦-೯೦ ಸಲ) ಮರ್ಮರ ಧ್ವನಿ ಮಾಡುವ ಹಲವು ಜಾತಿಯ ಪಕ್ಷಿಗಳು. ಭೂಮಿಯ ಪಶ್ಚಿಮ ಗೋಳಾರ್ಧದಲ್ಲಿ ಮಾತ್ರ ಕಂಡು ಬರುತ್ತವೆ. ಆಪೋಡಿಫಾರ್ಮೀಸ್ ಗಣದ ಟ್ರೋಕಿಲಿಡೀ ಕುಟುಂಬಕ್ಕೆ ಸೇರಿದವು. ಇವುಗಳ ಚರ್ಮ ಗಳಿಂದ ಆಭರಣ ತಯಾರಿ ಸುತ್ತಾರೆ. ಹಠಾತ್ತನೆ ಸ್ಥಿರವಾಗಿ ಗಾಳಿಯಲ್ಲಿ ನಿಲ್ಲಬಲ್ಲವು. ಹಿಮ್ಮುಖವಾಗಿ ಹಾರಬಲ್ಲ ಏಕೈಕ ಪಕ್ಷಿಜಾತಿ; ಹಾರುತ್ತವೆಯೆ ಹೊರತು ನಡೆಲಾರವು. ಹಗಲಿನಲ್ಲಿ ೪೦0-೫೦0 ಸೆ. ಇರುವ ಇವುಗಳ ಶರೀರದ ಉಷ್ಣತೆ ರಾತ್ರಿಯಲ್ಲಿ ೧೮0 ಸೆ.ಗೆ ಇಳಿಯುತ್ತದೆ
humming bird


logo