logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಘಟ
(ಸಾ) ನೋಡಿ : ಶವ
corpse

ಘಟಕ ಚಿತ್ರ
(ಕಂ) ಕಂಪ್ಯೂಟರ್‌ನ ಯಂತ್ರಾಂಶ (ಹಾರ್ಡ್‌ವೇರ್) ಹಾಗೂ ತಂತ್ರಾಂಶ (ಸಾಫ್ಟ್‌ವೇರ್)ಗಳನ್ನೂ ಇವುಗಳ ಅಂತರಸಂಯೋಜನೆಗಳನ್ನೂ ಸೂಚಿಸುವ ಚೌಕ, ಆಯತ ಹಾಗೂ ಸರಳರೇಖೆಗಳ ಕೂಟ
block diagram

ಘಟಕ ವಿವರಗಳು
(ಸಾ) ಸಮಸ್ಯೆಯನ್ನು ರೂಪಿಸುವ ಮುಖ್ಯ ಅಂಶಗಳನ್ನು ಕುರಿತ ಮಾಹಿತಿ
breakdown details

ಘಟನಾ ಕ್ಷಿತಿಜ
(ಖ) ಕೃಷ್ಣವಿವರದ ಈ ಮಿತಿ ಯೊಳಗಿಂದ ಬೆಳಕು ಹೊರಕ್ಕೆ ಹಾಯದು. ನೋಡಿ : ಕೃಷ್ಣ ವಿವರ
event horizon

ಘಟನೆ
(ಭೌ) ಅವಕಾಶದ (ಸ್ಪೇಸ್) ಮೂರು ನಿರ್ದೇಶಕಾಂಗ ಗಳಿಂದಲೂ (ಉದ್ದ, ಅಗಲ, ಎತ್ತರ) ಕಾಲದ ಒಂದು ನಿರ್ದೇಶಕಾಂಗದಿಂದಲೂ ಅವಕಾಶ-ಕಾಲ ಸಾತತ್ಯದಿಂದಲೂ ಯಾವುದೇ ಬಿಂದುವಿನಲ್ಲಿ ಪ್ರತಿನಿಧಿಸಲ್ಪಡುವ ಭೌತ ವಾಸ್ತವತೆ. ಅವಕಾಶ-ಕಾಲ ಸಂಯೋಗ. ಸೂರ್ಯೋದಯ ಎಂಬ ಘಟನೆಯಲ್ಲಿ ಮೂಡಿದ ನೆಲೆ (ಅವಕಾಶ) ಮತ್ತು ಕ್ಷಣ (ಕಾಲ) ನಿಹಿತವಾಗಿವೆ. (ಗ) ಯಾವುದೇ ಪ್ರಯೋಗದಲ್ಲಿ ಒದಗಬಹುದಾದ ವಿಭಿನ್ನ ಸಾಧ್ಯತೆಗಳಲ್ಲಿ ಪ್ರತಿಯೊಂದರ ಹೆಸರು. ಘನದ ಆರು ಮುಖಗಳನ್ನು ೧ರಿಂದ ೬ರವರೆಗೆ ಸಂಖ್ಯೆಯಲ್ಲಿ ಬರೆಯೋಣ. ಇಂಥ ಎರಡು ಘನಗಳನ್ನು ಪಗಡೆ ದಾಳಗಳಂತೆ ಯಾದೃಚ್ಛಿಕವಾಗಿ ಎಸೆಯುತ್ತ ಹೋಗೋಣ. ಆಗ ದೊರೆಯುವ ೩೬ ಜೋಡಣೆಗಳು (೧,೧), (೧,೨), (೧,೩), (೧,೪), (೧,೫), (೧,೬), (೨,೧)... (೬,೬). ಈ ಒಂದೊಂದು ಜೋಡಣೆಯೂ ಒಂದೊಂದು ಘಟನೆ
event

ಘಂಟಾಕೋನ
(ಖ) ಆಕಾಶಕಾಯದ ಘಂಟಾವೃತ್ತಕ್ಕೂ ದಕ್ಷಿಣೋತ್ತರಕ್ಕೂ ನಡುವಿನ ಕೋನ
hour angle

ಘಂಟಾರೂಪಿ
(ಜೀ) ಗಂಟೆಯಂತೆ ಆಕಾರ ವಿರುವ (ಪ್ರಾಣಿ, ಸಸ್ಯ, ಸಸ್ಯಭಾಗ)
campanulate

ಘಟ್ಟ
(ಭೂವಿ) ಭೂವೈಜ್ಞಾನಿಕ ‘ಕಾಲ’ವೊಂದರಲ್ಲಿ ನಿಕ್ಷೇಪಗೊಂಡ ಶಿಲಾ ಶ್ರೇಣಿ
stage

ಘಟ್ಟಗಳು
(ಭೂ) ದಕ್ಷಿಣ ಭಾರತದ ಪೂರ್ವ ಮತ್ತು ಪಶ್ಚಿಮ ಗಳಲ್ಲಿ ಉದ್ದಕ್ಕೂ ಹಬ್ಬಿರುವ ಬೆಟ್ಟದ ಎರಡು ಸಾಲುಗಳು
ghats

ಘನ
(ಗ) ಆರು ಸರ್ವಸಮ ಚೌಕ ಫಲಕಗಳಿಂದಾಗಿದ್ದು ಆಸನ್ನ ಫಲಕಗಳ ನಡುವೆ ೯೦0 ಇರುವ ಘನವಸ್ತು. ಯಾವುದೇ ಭುಜದ ಮೂರನೆಯ ಘಾತ ಇದರ ಘನ ಗಾತ್ರ. ಯಾವುದೇ ಸಂಖ್ಯೆಯನ್ನು ಅದರಿಂದಲೇ ಮೂರು ಸಲ ಗುಣಿಸಿದಾಗ ದೊರೆಯುವ ಲಬ್ಧ. x x x x x = x3
cube


logo