logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಕಂಕಣ ಗ್ರಹಣ
(ಖ) ಚಂದ್ರನ ಕಪ್ಪು ಬಿಂಬವನ್ನು ಆವರಿಸಿದ ಸೂರ್ಯಬಿಂಬವು ಬಳೆಯಂತೆ ಪ್ರಜ್ವಲಿಸುತ್ತ ಹೋಗುವ ಗಗನ ವಿದ್ಯಮಾನ
annular eclipse

ಕಕಾಓ
(ಸ) ಸ್ಟರ್‌ಕ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ತಿಯೋಬ್ರೊಮಾ ಕಕಾಓ ಜಾತಿಯ ಮರ. ಬೀಜಗಳನ್ನು ಒಣಗಿಸಿ ಕೋಕೋ ಹಾಗೂ ಚಾಕೊಲೆಟ್ ತಯಾರಿಸುತ್ತಾರೆ. ಕೋಕೊ
cacao

ಕಂಕಾಲ
(ಪ್ರಾ) ಪ್ರಾಣಿಯ ಶರೀರವನ್ನು ಒಳಗೊಂಡ ಅಥವಾ ಅದಕ್ಕೆ ಆಧಾರವಾಗಿರುವ ಮೂಳೆಗಳು, ಮೆಲ್ಲೆಲುಬು, ಚಿಪ್ಪು ಮೊದಲಾದವುಗಳ ಗಡಸು ಚೌಕಟ್ಟು. ಅಸ್ಥಿಪಂಜರ. ಎಲುಬಿನ ಗೂಡು
skeleton

ಕಕೆಕ್ಸಿಯ
(ವೈ) ನ್ಯೂನಪೋಷಣೆಯಿಂದ ತಲೆ ದೋರುವ ದೌರ್ಬಲ್ಯ ಮತ್ತು ಶೈಥಿಲ್ಯ. ಕ್ಯಾನ್ಸರ್ ರೋಗದಿಂದ ನರಳುತ್ತಿರುವ ಕೆಲವರಲ್ಲೂ ಕಂಡುಬರುತ್ತದೆ
cachexia

ಕಕ್ಕು
(ವೈ) ಜೀರ್ಣವಾಗಿಲ್ಲದ ಆಹಾರ ಮತ್ತೆ ಬಾಯಿಗೆ ಬರುವುದು. ದೋಷಯುಕ್ತ ಕವಾಟಗಳಲ್ಲಿ ರಕ್ತ ಹಿಂದಕ್ಕೆ ಬರುವಿಕೆ. ನೋಡಿ : ವಾಂತಿ
regurgitation

ಕಕ್ಷ
(ಸ) ಕಾಂಡದಿಂದ ಎಲೆ ಅಥವಾ ಕೊಂಬೆ ಟಿಸಿಲೊಡೆಯುವ ನೆಲೆಯಲ್ಲಿ ಎಲೆ ಅಥವಾ ಕೊಂಬೆ ಹಾಗೂ ಕಾಂಡ ನಡುವಿನ ಕೋನ. ಪರ್ವಕೋನ, ಕಂಕುಳು
axil

ಕಕ್ಷಕ
(ಭೌ) ಅಣು ಅಥವಾ ಪರಮಾಣುಗಳಲ್ಲಿ ಒಂದು ನಿರ್ದಿಷ್ಟ ಎಲೆಕ್ಟ್ರಾನಿನ ಚಲನೆಯ ಬಗ್ಗೆ ಷ್ರೋಡಿಂಗರ್ ತರಂಗ ಸಮೀಕರಣದಿಂದ ಹೊರಬೀಳುವ ಫಲಿತಾಂಶ ಅಥವಾ ಅದರ ಚಿತ್ರರೂಪಣ. ಯಾವುದೇ ಅಣು ಅಥವಾ ಪರಮಾಣುವಿನಲ್ಲಿ ಎಲೆಕ್ಟ್ರಾನ್‌ನ ನೆಲೆ. ಬೋರ್ ಪರಮಾಣು ಸಿದ್ಧಾಂತದ ಪ್ರಕಾರ ಎಲೆಕ್ಟ್ರಾನ್‌ಗಳು ನ್ಯೂಕ್ಲಿಯಸ್‌ನ ಸುತ್ತ ವಿವಿಧ ವರ್ತುಳೀಯ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿರುವುವೆಂದು ಭಾವಿಸಲಾಗಿತ್ತು. ಆದರೆ ಕ್ವಾಂಟಮ್ ಯಂತ್ರವಿಜ್ಞಾನದ (quantum mechanics) ಪ್ರಕಾರ ಪರಮಾಣುವಿನ ಸುತ್ತ ದತ್ತ ವ್ಯೋಮ ಘಟಕದಲ್ಲಿ (space element) ಎಲೆಕ್ಟ್ರಾನ್ ಇರುವ ಸಂಭಾವ್ಯತೆ ಇದೆ. ಇದು ಎಲೆಕ್ಟ್ರಾನ್‌ನ ತರಂಗಫಲನವನ್ನು (wave function) ಅವಲಂಬಿಸಿದೆ. ಯಾವುದೇ ಪರಮಾಣುವಿನೊಳಗೆ ಎಲೆಕ್ಟ್ರಾನ್‌ನ ತರಂಗಫಲನ ಗಣನೀಯ ಪ್ರಮಾಣದಲ್ಲಿರುವ ಬಿಂದುಗಳನ್ನು ಒಳಹಿಡಿದಿರುವ ಘನಗಾತ್ರವೇ ಪರಮಾಣು ಕಕ್ಷಕ
orbital

ಕಕ್ಷಾ ಧಾತುಗಳು
(ಖ) ಯಾವುದೇ ಗ್ರಹದ ಕಕ್ಷೆಯನ್ನೂ ಇದರಲ್ಲಿ ಗ್ರಹದ ನೆಲೆಯನ್ನೂ ನಿರ್ಧರಿಸಲು ಅವಶ್ಯ ವಾಗುವ ಆರು ಗಣಿತ ಅಂಶಗಳು: ೧. ಆರೋಹೀ ಸಂಪಾತ ಬಿಂದುವಿನ ರೇಖಾಂಶ, ೨. ಕಕ್ಷೆಯ ಬಾಗು, ೩. ಪುರರವಿಯ ರೇಖಾಂಶ, ೪. ಅರ್ಧ ದೀರ್ಘಾಕ್ಷ, ೫. ಉತ್ಕೇಂದ್ರತೆ, ೬. ಪುರರವಿ ಯನ್ನು ಗ್ರಹ ದಾಟಿದ ಕ್ಷಣ
elements of an orbit

ಕಕ್ಷಾವೇಗ
(ಖ) ಭೂಮಿಯ ಸುತ್ತ ಅಥವಾ ಮತ್ತಾವುದೇ ಖಗೋಳಕಾಯದ ಸುತ್ತ ಕಕ್ಷೆಯಲ್ಲಿ ಸುತ್ತುತ್ತಿರುವ (ಯಾನ ಮಾಡುತ್ತಿರುವ) ಉಪಗ್ರಹ ಅಂತರಿಕ್ಷ ನೌಕೆ ಅಥವಾ ಮತ್ತಾವುದೇ ಕಾಯದ ಚಲನವೇಗ
orbital velocity

ಕಕ್ಷೀಯ ಮೊಗ್ಗು
(ಸ) ಸಸ್ಯದ ಕಂಕುಳಿನಿಂದ ಚಿಗುರಿದ ಮೊಗ್ಗು
axillary bud


logo