logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ದಕ್ಷತೆ
(ಸಾ) ವ್ಯವಸ್ಥೆಯ ಕಾರ್ಯ ಸಾಮರ್ಥ್ಯ.
efficiency

ದಕ್ಷಿಣ
(ಭೂ) ನೋಡಿ : ದಿಗ್ಬಿಂದುಗಳು
south

ದಕ್ಷಿಣ ಪ್ರಭೆಗಳು
(ಖ) ನೋಡಿ: ಧ್ರುವಪ್ರಭೆ
southern lights

ದಕ್ಷಿಣಾವರ್ತಕ
(ಭೌ) ಸಮತಲ-ಧ್ರುವೀಕೃತ ಬೆಳಕಿನ ಧ್ರುವೀಕರಣ ಸಮತಲವನ್ನು (ಎದುರಿನಿಂದ ಬರುತ್ತಿ ರುವ ಬೆಳಕನ್ನು ಕಂಡಂತೆ) ಬಲಕ್ಕೆ ಅಂದರೆ ಪ್ರದಕ್ಷಿಣವಾಗಿ, ತಿರುಗಿಸುವ ದ್ಯುತಿಪಟುತ್ವ ವಸ್ತು/ರಾಸಾಯನಿಕ ಸಂಯುಕ್ತ. ಬಲಮುರಿ, ದಕ್ಷಿಣ ಭ್ರಾಮಕ, ನೋಡಿ : ವಾಮಾವರ್ತಕ
dextrorotatory

ದಂಡ
(ತಂ) ಕೂಡು ಪಟ್ಟಿಗಳ ಮೂಲಕ ಇಲ್ಲವೇ ಹಲ್ಲು ಚಕ್ರಗಳ ಮೂಲಕ ಚಲನೆ ಅಥವಾ ಬಲವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಬಳಸುವ ಉರುಳೆಯಾಕಾರದ ಲೋಹದ ತುಂಡು
shaft

ದಂಡ ಕಾಂತ
(ಭೌ) ಸರಳ ದಂಡಾಕಾರದ ಶಾಶ್ವತ ಕಾಂತ. ಇದರ ಒಂದೊಂದು ಕೊನೆಯೂ ಒಂದೊಂದು ಧ್ರುವ
bar magnet

ದಂಡ ಕೈವಾರ
(ತಂ) ನೋಡಿ : ಟ್ರ್ಯಾಮಲ್
beam compass

ದಡಾರ
(ವೈ) ವೈರಸ್‌ನಿಂದ ಬರುವ ಒಂದು ಅಂಟುಜಾಡ್ಯ. ಎಳೆಯರಲ್ಲಿ ಹೆಚ್ಚು ಸಾಮಾನ್ಯ. ಉಸಿರಾಟದಲ್ಲಿ ತೊಂದರೆಗಳು, ಜ್ವರ, ಚರ್ಮದ ಮೇಲೆ ಕೆಂಪು ಗುಳ್ಳೆಗಳು ಈ ರೋಗದ ಲಕ್ಷಣಗಳು
measles

ದಂಡೆ
(ಭೂವಿ) ನದೀ ಪಾತ್ರದ ಯಾವುದೇ ಅಂಚು. ತಟ
bank

ದಡ್ಡು
(ವೈ) ಎಡೆಬಿಡದ ತುರಿಕೆ ಅಥವಾ ತಿಕ್ಕಾಟದ ಕಾರಣ ವಾಗಿ ಚರ್ಮ ಗಡಸು ಅಥವಾ ದೊರಗು ಆಗಿರುವುದು. ಜಡ್ಡುಗಂಟು, ಗಡಸುಗಂಟು
callosity


logo