logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಛತ್ರ
(ಸ) ಒಂದು ಪ್ರದೇಶದಲ್ಲಿ ಅಖಂಡವಾಗಿ ಹಬ್ಬಿರುವ ಗಿಡಮರಗಳ ಸಮುದಾಯ. ಹಸಿರು ಹಂದರ/ಚಪ್ಪರ
canopy

ಛತ್ರಪ್ರಭೇದ
(ಜೀವಿ) ವಿಶಾಲ ಪ್ರಾಂತದಲ್ಲಿ ಆವರಿಸಿರುವ ಸಸ್ಯ ಅಥವಾ ಪ್ರಾಣಿ. ಇವುಗಳಿಂದ ಆವಾಸದಲ್ಲಿ ಇರುವ ಇತರ ಜೀವಿಗಳಿಗೂ ರಕ್ಷಣೆ ದೊರೆಯುತ್ತದೆ
umbrella species

ಛತ್ರಾವರಣ
(ಸ) ಯಾವುದೇ ಒಂದು ಸಸ್ಯ ಪ್ರಭೇದದ ಎಲ್ಲ ಬಿಡಿ ಸಸ್ಯಗಳ ಊರ್ಧ್ವ ಪ್ರಕ್ಷೇಪ ಒಳಗೊಳ್ಳುವ ನೆಲದ ಶೇಕಡತೆ. ಎಲ್ಲ ಪ್ರಭೇದಗಳ ಈ ಶೇಕಡತೆಗಳ ಮೊತ್ತ ಒಟ್ಟು ಛತ್ರಾವರಣವನ್ನು ಕೊಡುತ್ತದೆ
canopy cover

ಛದ್ಮ
(ಸಾ) ಶತ್ರುಗಳ ಕಣ್ಣು ತಪ್ಪಿಸುವ ಲಕ್ಷ್ಯದಿಂದ ಮರೆಮಾಚುವ ಸಲುವಾಗಿ ವಸ್ತುಗಳನ್ನು/ಜನರನ್ನು ನೈಸರ್ಗಿಕ ಹಿನ್ನೆಲೆಯ ಒಂದು ಭಾಗವಾಗಿ ಕಾಣುವಂತೆ ಮಾಡುವುದು
camouflage

ಛದ್ಮನ
(ಪ್ರಾ) ಪ್ರಾಣಿಯೊಂದು ಬೇಟೆಯನ್ನು ಹಿಡಿಯುವ ಅಥವಾ ಶತ್ರುವಿನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅವುಗಳ ಬಾಹ್ಯ ಲಕ್ಷಣಗಳನ್ನು ಅನುಕರಿಸುವುದು.
simulation

ಛದ್ಮವರ್ಣನ
(ಪ್ರಾ) ಕೆಲವು ಪ್ರಾಣಿಗಳು ಶತ್ರುಗಳಿಂದ ರಕ್ಷಿಸಿಕೊಳ್ಳಲು ತಮ್ಮ ಮೈಬಣ್ಣ ಸುತ್ತಲಿನ ಬಣ್ಣದೊಂದಿಗೆ ಬೆರೆಯುವಂತೆ ಬದಲಿಸಿಕೊಳ್ಳುವ ಕ್ರಿಯೆ. ಉದಾ: ಗೋಸುಂಬೆ/ಊಸರವಳ್ಳಿ. ರಕ್ಷೀರಂಜನ
protective colouring

ಛಾಯಾ ಗಡಿಯಾರ
(ತಂ) ವಸ್ತುವಿನ ಮೇಲೆ ಬಿಸಿಲು ಬಿದ್ದಾಗ ಉಂಟಾಗುವ ನೆರಳಿನ ವಿನ್ಯಾಸದ ಪರಿಶೀಲನೆ ಯಿಂದ ಹಗಲಿನ ವೇಳೆಯನ್ನು ಸ್ಥೂಲವಾಗಿ ಸೂಚಿಸಲು ಬಳಸುವ ಸಾಧನ. ಇಂದು ಇದಕ್ಕೆ ಐತಿಹಾಸಿಕ ಮಹತ್ತ್ವವಷ್ಟೆ ಉಂಟು. ಒಂದೇ ಸ್ಥಳದಲ್ಲಿ ಸೂರ್ಯನ ಸ್ಥಾನ ದಿನ ದಿನ ಬದಲಾಗುವುದರಿಂದಲೂ ಯಾವ ವ್ಯಕ್ತಿಯೂ ಒಂದೇ ಸ್ಥಳಕ್ಕೆ ಬಂಧಿತನಾಗಿಲ್ಲದಿರು ವುದರಿಂದಲೂ (ಹಗಲಿನ) ಛಾಯಾ ಗಡಿಯಾರಗಳ ಉಪಯುಕ್ತತೆ ತೀರ ಸೀಮಿತ. ಆದಿ ಮಾನವನ ಗಡಿಯಾರ ಸೂರ್ಯನಾಗಿದ್ದರಿಂದ ಅವನು ಸೂರ್ಯನನ್ನು ನೋಡಿ ಹೊತ್ತು ಅಂದಾಜು ಮಾಡುತ್ತಿದ್ದ
shadow clock

ಛಾಯಾಚಿತ್ರ ಭೂವಿಜ್ಞಾನ
(ಭೂವಿ) ವಿಮಾನ ಅಥವಾ ಕೃತಕ ಭೂ ಉಪಗ್ರಹಗಳಿಂದ ತೆಗೆದ ಛಾಯಾಚಿತ್ರ ಗಳಿಂದ ತೆಗೆದ ಭೂಸ್ವರೂಪಗಳ ಅಧ್ಯಯನ ಮಾಡುವ ವಿಜ್ಞಾನ
photogeology

ಛಾಯಾಚಿತ್ರಣ
(ತಂ) ನೋಡಿ: ಫೋಟೊಗ್ರಫಿ
photography

ಛಾಯಾಪ್ರೇಮಿ
(ಜೀ) ನೋಡಿ: ಫೋಟೊಫೈಗಸ್
photophygous


logo