logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆಕರ
(ತಂ) ಫೀಲ್ಡ್ ಎಫೆಕ್ಟ್ ಟ್ರಾನ್ಸಿಸ್ಟರ್‌ನಲ್ಲಿರುವ ಎಲೆಕ್ಟ್ರೋಡ್. ಇದರಿಂದ ಎಲೆಕ್ಟ್ರಾನ್‌ಗಳು ಹೊಮ್ಮಿ ಎಲೆಕ್ಟ್ರೋಡ್‌ಗಳ ನಡುವಿನ ಪ್ರದೇಶವನ್ನು ಪ್ರವೇಶಿಸುತ್ತವೆ. (ಭೌ) ವಿಕಿರಣಪಟುತ್ವದಲ್ಲಿ ಆಲ್ಫ, ಬೀಟ ಅಥವಾ ಗ್ಯಾಮಾ ಕಿರಣಗಳ ಉಗಮ ಸ್ಥಾನ
source

ಆಕರಕೋಶ
(ಜೀ) ಹಲವು ಬಗೆಯ ಕೋಶಗಳನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಪ್ರತ್ಯೇಕಿತ ಕೋಶ. ಭ್ರೂಣದ ಬೆಳವಣಿಗೆಯ ಆರಂಭದಲ್ಲಿ ಇಂತಹ ಕೋಶಗಳನ್ನು ಬೇರ್ಪಡಿಸಿ ಅಂಗಾಂಗಗಳ ಊತಕ ಕೃಷಿಗೆ ಬಳಸಬಹುದು. ಕಾಂಡಕೋಶ
stem cell

ಆಂಕರೈಟ್
(ಭೂವಿ) ಕ್ಯಾಲ್ಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಕಬ್ಬಿಣದ ಕಾರ್ಬೊನೇಟ್. ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿರುವ ಬಿಳಿ, ಕೆಂಪು/ಬೂದು ಕಾರ್ಬೊನೇಟ್ ಖನಿಜ. ಸಾಸಾಂ ೨.೯೫-೩.೧ Ca (Fe, Mg, Mn) (CO3)2
ankerite

ಆಕರೈನ
(ಪ್ರಾ) ಆರ್ತ್ರಾಪೊಡ ವಿಭಾಗ. ಆರ‍್ಯಾಕ್ನಿಡ ವರ್ಗದ ಒಂದು ಗಣ: ಗೋಳಾಕಾರದ ಅವಿಭಾಜಿತ ದೇಹವಿದೆ. ಉದಾ: ನುಸಿ, ಉಣ್ಣಿ
acarina

ಆಕರ್ಷಣೆ
(ಭೌ) ಒಂದು ವಸ್ತು ಇನ್ನೊಂದರತ್ತ ಸೆಳೆಯಲ್ಪಡುವುದು
attraction

ಆಕಸ್ಮಿಕ ಪ್ರಭೇದ
(ಪ್ರಾ) ಜೀವಿ ಸಮುದಾಯ ವೊಂದರಲ್ಲಿ ಕಂಡುಬರುವ ಅಪರೂಪದ ಜಾತಿ. ಬೇರೆ ಪ್ರದೇಶ ಗಳಿಂದ ಬಂದಿರಬಹುದು. ಸಮುದಾಯದ ಜಾತಿಗಳ ಗುಣಗಳನ್ನು ವಿಶ್ಲೇಷಿಸುವಾಗ ಆಕಸ್ಮಿಕ ಪ್ರಭೇದಗಳನ್ನು ಪರಿಗಣಿಸುವುದಿಲ್ಲ
accidental species

ಆಕಳ ಸಿಡುಬು
(ವೈ) ವ್ಯಾಕ್ಸೀನಿಯ ವೈರಸ್ಸಿನ ಕಾರಣ ದನಗಳಲ್ಲಿ ತೋರುವ ಗುಳ್ಳೆ ಸಹಿತದ ಸೋಂಕುಬೇನೆ. ಇದು ಮಾನವ ಸಿಡುಬನ್ನು ಹೋಲುತ್ತದೆ. ಆದರೆ ಅದಕ್ಕಿಂತ ಸೌಮ್ಯ ವಾದದ್ದು. ಆಕಳುಗಳ ಕೆಚ್ಚಲ ಮೇಲೆ ಕೀವುಗುಳ್ಳೆಗಳೇಳುತ್ತವೆ. ಈ ಕೀವನ್ನು (ಲಸಿಕೆಯನ್ನು) ಸಂಗ್ರಹಿಸಿ ಅದನ್ನು ಮಾನವರಿಗೆ ಚುಚ್ಚಿದಾಗ, ಅವರಿಗೆ ಮಾನವ ಸಿಡುಬು ಬರದಂತೆ ರಕ್ಷಣೆ ದೊರೆಯುತ್ತದೆ
vaccinia

ಆಕಾಶ
(ಖ) ಭೂಮಿ ಮೇಲೆ ಕವಿಚಿರುವಂತೆ ಭಾಸವಾಗುವ ಅರ್ಧಗೋಳ ಚಾವಣಿ. ಗಗನ ಕಾಯಗಳೆಲ್ಲವೂ ಇದಕ್ಕೆ ಲಗತ್ತಾಗಿ ಅಲ್ಲಿಯೇ ಚಲಿಸುತ್ತಿರುವಂತೆ ತೋರುತ್ತವೆ. ಪ್ರಧಾನವಾಗಿ, ಸೂರ್ಯನ ಬೆಳಕನ್ನು ವಾಯುಮಂಡಲದ ಅನಿಲಾಣುಗಳು ಮತ್ತು ದೂಳ ಕಣಗಳು ಚದರಿಸುವುದರಿಂದ ಆಕಾಶಕ್ಕೆ ಆಕಾರವೂ ಬಣ್ಣವೂ ಒದಗಿದೆ. ಬಾನು, ಗಗನ
sky

ಆಕಾಶ ಸಂಶೋಧನೆ
(ಅಂವಿ) ಭೂವಾತಾವರಣದ ಆಚೆಗಿರುವ ಆಕಾಶ ಪರಿಸರ, ವಸ್ತುಗಳ ಮೇಲೆ ಅದರ ಪರಿಣಾಮ, ಭೂವೀಕ್ಷಣೆಗೂ ಅಂತರಿಕ್ಷ ಆಳಗಳ ವೀಕ್ಷಣೆಗೂ ಅನುಕೂಲ ಬಿಂದುವಾಗಿ ಅದರ ಬಳಕೆ - ಇವುಗಳ ಪರಿಶೋಧನೆ. ಸಾಮಾನ್ಯವಾಗಿ ಅಂತರಿಕ್ಷ ನೌಕೆಯೊಂದರ ನೆರವಿನಿಂದ ನಡೆಸಲಾಗುತ್ತದೆ. ವ್ಯೋಮ ಸಂಶೋಧನೆ
space research

ಆಕಾಶಗಂಗಾತೀತ
(ಖ) ಆಕಾಶಗಂಗೆಯ ಹೊರಗೆ ಇರುವ ಅಥವಾ ಹೊರಗಿನಿಂದ ಬರುವ. ಬ್ರಹ್ಮಾಂಡಾತೀತ
extragalactic


logo