logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಯಕೃತ್ತಿನ
(ವೈ) ಪಿತ್ತಜನಕಾಂಗಕ್ಕೆ ಸಂಬಂಧಿಸಿದ
hepatic

ಯಕೃತ್ತಿನ ದ್ವಾರ
(ವೈ) ಯಕೃತ್ತಿನೊಳಕ್ಕೆ ನರ, ಧಮನಿ, ಸಿರ ಮತ್ತು ದುಗ್ಧರಸ ನಾಳಗಳನ್ನು ಕೂಡಿಸುವ ದ್ವಾರ
portal

ಯಕೃತ್ತು
(ವೈ) ಅಕಶೇರುಕಗಳಲ್ಲಿ ಜೀರ್ಣಕಾರಕ ಗ್ರಂಥಿ ಅಥವಾ ಹೆಪಟೊಪ್ಯಾಂಕ್ರಿಯಾಸ್. ಕಶೇರುಕಗಳಲ್ಲಿ ಒಂದು ನಾಳೀಯ ಗ್ರಂಥಿ. ಜಠರದ ಬಲಭಾಗದಲ್ಲಿರುತ್ತದೆ. ಕಡುಗೆಂಪು ಬಣ್ಣದ್ದು. ಪ್ಯಾರಂಕೈಮಾ ದ್ರವ್ಯದಿಂದ ಸದಾ ಕೂಡಿದ್ದು ಕವಚದಿಂದ ಆವೃತ. ಪಿತ್ತರಸ ಸ್ರವಿಸುತ್ತದೆ. ಕೆಲವೊಂದು ರಕ್ತ ಪ್ರೋಟೀನ್‌ಗಳನ್ನೂ ಕಿಣ್ವಗಳನ್ನೂ ತಯಾರಿಸುತ್ತದೆ. ರಕ್ತ ಪರಿಚಲನೆಯಲ್ಲಿ ಇರಬಹುದಾದ ಜೀವಾಣು ವಿಷಗಳನ್ನು ನಿವಾರಿಸುತ್ತದೆ. ಗ್ಲೂಕೋಸನ್ನು ಗ್ಲೈಕೋಜೆನ್ ಆಗಿ ಪರಿವರ್ತಿಸುತ್ತದೆ. ಉಪಾಪಚಯಕಗಳ ಸಂಗ್ರಹ ಹಾಗೂ ಸಂಶ್ಲೇಷಣೆಯಲ್ಲಿ ಮುಖ್ಯ ಪಾತ್ರ. ಪಿತ್ತಜನಕಾಂಗ. ಈಲಿ
liver

ಯಂತ್ರ
(ಭೌ) ೧. ಒಂದು ಬಿಂದುವಿನಲ್ಲಿರುವ ರೋಧವನ್ನು (ಹೊರೆಯನ್ನು) ಮತ್ತೊಂದು ಬಿಂದುವಿನಲ್ಲಿ ಬಲ (ಯತ್ನ) ಅನ್ವಯಿಸುವ ಮೂಲಕ ನಿವಾರಿಸಿ ಯಾಂತ್ರಿಕ ಕಾರ್ಯ ನಿರ್ವಹಣೆಯನ್ನು ಹೆಚ್ಚು ಸುಲಭಗೊಳಿಸುವ ಸಾಧನ. ಇಳಿತಲ, ಬೆಣೆ, ಸನ್ನೆಕೋಲು, ರಾಟೆ, ತಿರುಪುಮೊಳೆ ಹಾಗೂ ಅಕ್ಷದಂಡ-ಗಾಲಿ ಇವು ಸರಳ ಯಂತ್ರಗಳು. ೨. ಪ್ರತಿಯೊಂದು ಭಾಗಕ್ಕೂ ಗೊತ್ತಾದ ಒಂದು ಕಾರ್ಯವಿರುವ ಅನೇಕ ಭಾಗಗಳಿದ್ದು ಯಾಂತ್ರಿಕ ಶಕ್ತಿಯನ್ನು ನಿಯೋಜಿಸಲಾಗುವ ಸಲಕರಣೆ. ಉದಾ: ಹೊಲಿಗೆ ಯಂತ್ರ, ಮುದ್ರಣ ಯಂತ್ರ ಇತ್ಯಾದಿ
machine

ಯಂತ್ರ ಸ್ಥಗಿತತೆ
(ತಂ) ನಿರ್ವಹಿಸಬೇಕಾದ ಕಾರ್ಯವನ್ನು ಮಾಡದೆ ಯಂತ್ರವನ್ನು ಸುಮ್ಮನೆ ಚಾಲೂ ಇಟ್ಟಿರುವುದು. ಸ್ಥಗನ
idling

ಯಂತ್ರವಿಜ್ಞಾನ
(ಭೌ) ಕಾಯಗಳ ಮೇಲೆ ವರ್ತಿಸುವ ಬಲಗಳ ಮತ್ತು ಅವು ಪ್ರೇರಿಸುವ ಚಲನೆಗಳ ಅಧ್ಯಯನ. ಯಾಂತ್ರ
mechanics

ಯಂತ್ರಸಂಕೇತ
(ಕಂ) ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆ. ಇದರಲ್ಲಿಯ ಪ್ರತಿಯೊಂದು ಯಂತ್ರ-ಸಂಕೇತ ಆದೇಶವನ್ನು ಕಂಪ್ಯೂಟರ್ ಯಾವುದೇ ಮಧ್ಯವರ್ತಿಯ ಅನುವಾದದ ಆವಶ್ಯಕತೆ ಇಲ್ಲದೆಯೇ ಗುರುತಿಸಿ ಕಾರ್ಯಗತಗೊಳಿಸಬಲ್ಲದು
machine code

ಯಂತ್ರಸ್ಥಾವರ
(ತಂ) ಯಾಂತ್ರಿಕ ಅಥವಾ ರಚನಾ ಉದ್ಯೋಗದಲ್ಲಿ ಅಗತ್ಯವಾಗಿರುವ ಯಂತ್ರ ಸಲಕರಣೆ ಮತ್ತಿತರ ಪರಿಕರಗಳು, ಕಾರ್ಖಾನೆ ಕಟ್ಟಡಗಳೂ ಇದರಲ್ಲಿ ಸೇರಿರುತ್ತವೆ
plant

ಯಂತ್ರಾಂಶ
(ಕಂ) ಕಂಪ್ಯೂಟರನ್ನು ರೂಪಿಸುವ ಭೌತ ಪದಾರ್ಥ. ಎಲ್ಲ ಯಾಂತ್ರಿಕ, ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಘಟಕಗಳ ಸಮುಚ್ಚಯ. ಕಂಪ್ಯೂಟರ್‌ನ ಒಡಲು. ಹಾರ್ಡ್‌ವೇರ್
hardware

ಯಥಾದೃಷ್ಟಿ ರೂಪಣ
(ಗ) ಗೊತ್ತಾದ ಸ್ಥಾನದಿಂದ ಒಂದು ಘನ ವಸ್ತುವನ್ನು ನೋಡಿದರೆ ಅದು ಹೇಗೆ ಕಾಣುವುದೊ, ಅದೇ ಪರಸ್ಪರ ಸಂಬಂಧವುಳ್ಳ ಸ್ಥಾನ, ಪ್ರಮಾಣ ಮೊದಲಾದವುಗಳಲ್ಲಿ ಕಾಣುವಂತೆ, ಆ ವಸ್ತುವನ್ನು ಸಮತಲದ ಮೇಲೆ ನಿರೂಪಿಸುವ ಕಲೆ
perspective


logo