logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಪಕ್ಕೆಲುಬು
(ಜೀ) ಕಶೇರುಕಗಳ ಅಸ್ಥಿಪಂಜರದ ಬೆನ್ನೆಲುಬಿಗೂ ಎದೆಯ ಮೂಳೆಗೂ ಅಂಟಿಕೊಂಡಿರುವ ಕಮಾನು ಆಕಾರದ ಎಲುಬು; ವಿಸೆರಾವನ್ನು (ಆಂತರಿಕಾಂಗಗಳನ್ನು) ಆವರಿಸಿರುವ ಶರೀರದ ಭಿತ್ತಿಗಳಿಗೆ ಆಸರೆಯಾಗಿ ಉಪಯುಕ್ತ
rib

ಪಕ್ವ
(ಜೀ) ಸಂಪೂರ್ಣ ಬೆಳವಣಿಗೆಯ ಅಥವಾ ಅಭಿವರ್ಧನೆಯ ಹಂತಕ್ಕೆ ಬಂದ ಅಥವಾ ಅಂಥ ಹಂತದಲ್ಲಿರುವ
mature

ಪಕ್ಷ
(ಖ) ಹುಣ್ಣಿಮೆಯಿಂದ ಮುಂದಿನ ಅಮಾವಾಸ್ಯೆ ತನಕದ (ಕೃಷ್ಣ ಪಕ್ಷ) ಅಥವಾ ಅಮಾವಾಸ್ಯೆಯಿಂದ ಮುಂದಿನ ಹುಣ್ಣಿಮೆ ತನಕದ (ಶುಕ್ಲ ಪಕ್ಷ) ಅಂದಾಜು ೧೪ ದಿವಸಗಳ ಅವಧಿ
fortnight

ಪಕ್ಷಪಾತ
(ಭೌ) ದತ್ತ ವಿದ್ಯುತ್ ಪ್ರವಾಹಕ್ಕಿಂತ ಹೆಚ್ಚಿನ ಪ್ರವಾಹಗಳಿಗೆ ಸಂಬಂಧಿಸಿದಂತೆ ಅಥವಾ ಒಂದು ಧ್ರುವೀಯತೆಯ ಪ್ರವಾಹಕ್ಕೆ ಸಂಬಂಧಿಸಿದಂತೆ ಕ್ರಿಯೆ ನಡೆಸುವ ಹಾಗೆ ರಿಲೇಯಲ್ಲಿ (ಟಪ್ಪೆ) ಮಾಡಿದ ಹೊಂದಾಣಿಕೆ. ಇಲ್ಲಿ ಪಕ್ಷಪಾತವು ದತ್ತ ಪ್ರವಾಹಕ್ಕೆ ವಿರುದ್ಧವಾಗಿರುವುದು. ಅಭಿನತಿ
bias

ಪಕ್ಷಪಾತ ಫಲಿತಾಂಶ
(ಭೌ) ವೀಕ್ಷಣೆ, ಗುಣ ಪರೀಕ್ಷಣೆ ಮುಂತಾದ ಕ್ರಿಯೆಗಳಲ್ಲಿ ಉಪಕರಣದ ನ್ಯೂನತೆಯ ಇಲ್ಲವೇ ವಿಧಾನದ ದುರ್ಬಲತೆಯ ಕಾರಣವಾಗಿ ಅಳತೆಯಲ್ಲಿ ವ್ಯವಸ್ಥಿತವಾಗಿ ದೋಷ ನುಸುಳುವುದು
biased result

ಪಕ್ಷವಾತ
(ವೈ) ಸೊಂಟದ ಕೆಳಗಿನ ಅಂಗಗಳು ನಿಶ್ಚೇಷ್ಟಿತವಾಗುವುದು, ಪಾರ್ಶ್ವವಾಯುವಿಗೆ ತುತ್ತಾಗುವುದು
paraplegia

ಪಕ್ಷಿ
(ಪ್ರಾ) ಹೆಚ್ಚು ಕಡಿಮೆ ದೇಹವಿಡೀ ಗರಿಗಳಿಂದ ಆವೃತ ವಾಗಿರುವ ಮತ್ತು ಕೈಗಳೆರಡೂ ರೆಕ್ಕೆಗಳಾಗಿ ಮಾರ್ಪಟ್ಟಿರುವ ನಿಯತತಾಪಿ ಕಶೇರುಕ. ಏವೀಸ್ ವರ್ಗದ ಸದಸ್ಯ ಪ್ರಾಣಿ. ಪ್ರಪಂಚದಲ್ಲಿರುವ ಸುಮಾರು ೨೭-೨೮ ಪಕ್ಷಿ-ವರ್ಗಗಳ ಪೈಕಿ ೨೧ ವರ್ಗಗಳ, ೬೨ ಕುಟುಂಬ ಹಾಗೂ ೧೨ ಉಪಕುಟುಂಬಗಳಿಗೆ ಸೇರಿದ ಪಕ್ಷಿಗಳು ಭಾರತದಲ್ಲಿವೆ
bird

ಪಕ್ಷಿ ಪಾಲನೆ
(ಪ್ರಾ) ಪಕ್ಷಿಸಂಗೋಪನೆ ಹಾಗೂ ಸಂವರ್ಧನೆ, ವಿಶೇಷವಾಗಿ ಮನೆಗಳಲ್ಲಿ ಕಾಡುಹಕ್ಕಿಗಳ ಸಾಕಣೆ
aviculture

ಪಕ್ಷಿಪಾದೀ
(ಪ್ರಾ) ಹಕ್ಕಿಗಳು ಮರದ ಮೇಲೆ ಕುಳಿತು ಕೊಳ್ಳುವಾಗ ಆಸರೆಯಾಗಿ ಮರದ ಕೊಂಬೆ ಇತ್ಯಾದಿಗಳನ್ನು ಹಿಡಿದುಕೊಳ್ಳಲನುವಾಗುವಂತೆ ರೂಪಿತವಾದ (ಹಕ್ಕಿಯ ಪಾದ)
insessorial

ಪಕ್ಷಿವಿಜ್ಞಾನ
(ಪ್ರಾ) ಪಕ್ಷಿಗಳ ಸ್ವರೂಪ, ಜೀವನ, ವರ್ಗೀಕರಣ, ಶರೀರ ರಚನೆ, ಅಭ್ಯಾಸ, ಆವಾಸ, ಹಾರಾಟ, ವಲಸೆ ಮೊದಲಾದವುಗಳನ್ನು ಕುರಿತ ವೈಜ್ಞಾನಿಕ ಅಧ್ಯಯನ
ornithology


logo