logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಊಜ್
(ಭೂವಿ) ಫೊರಾಮಿನಿಫೆರ, ಡಯಾಟಮ್ ಮುಂತಾದ ಸಾಗರಜೀವಿಗಳ ಚಿಪ್ಪು ಚೂರುಗಳಿಂದ ಕೂಡಿದ ಸಾಗರ ತಳಸಂಚಯ. ಸಣ್ಣ ಕಣಗಳಿಂದಾಗಿದೆ
ooze

ಊಟೆ
(ಸಾ) ನೆಲದಡಿಯಿಂದ ಮೇಲಕ್ಕೆ ಚಿಮ್ಮುವ ನೀರು. ಬುಗ್ಗೆ. ಕಾರಂಜಿ. ನೋಡಿ : ಚಿಲುಮೆ
fountain

ಊಡು
(ತಂ) ಬೈರಿಗೆ/ಕತ್ತರಿಸುವ ಉಪಕರಣದ ಮುಂಚಲನೆ. ಪಾತ್ರೆಗೆ ದ್ರಾವಣ ತುಂಬು. ಯಂತ್ರದಲ್ಲಿ ಸಂಸ್ಕರಣಕ್ಕೆ ವಸ್ತು ಅಥವಾ ಬಿಡಿ ಭಾಗಗಳನ್ನು ಮುಂದೂಡುವ ಭಾಗ. (ಕಂ) ಕಂಪ್ಯೂಟರ್/ಸಂಪರ್ಕ ಜಾಲಬಂಧಕ್ಕೆ ಸಂe/ಕ್ರಮವಿಧಿ ಒದಗಿಸುವುದು
feed

ಊತ
(ವೈ) ಶರೀರದ ಯಾವುದೇ ಭಾಗ ಬಾತು ಕೊಳ್ಳುವುದು, ಊದಿಕೊಳ್ಳುವುದು. ಬಾವು. ಬೀಗು
intumescence

ಊತ
(ಸ) ಸಸ್ಯದ ಯಾವುದೇ ಭಾಗ ಹಾನಿಗೆ/ಬೇನೆಗೆ ಒಳಗಾದಾಗ ಅಲ್ಲಿಯ ಊತಕಗಳು ಸಹಜ ಪ್ರಮಾಣಕ್ಕಿಂತ ದೊಡ್ಡದಾಗಿ ಉಬ್ಬಿಕೊಳ್ಳುವುದು
swell

ಊತಕ ಉರಿಯೂತ
(ವೈ) ತೀವ್ರ ಸ್ವರೂಪದಲ್ಲಿ ಹರಡ ಬಹುದಾದ ಬ್ಯಾಕ್ಟೀರಿಯಾಗಳಿಂದಾಗುವ ಚರ್ಮ ಸೋಂಕು. ಸಾಮಾನ್ಯವಾಗಿ ಸ್ಟ್ರೆಪ್ಟೋಕಾಕಸ್ ಅಥವಾ ಸ್ಟಫೈಲೊಕಾಕಸ್ ಜೀವಿ ಗಳಿಂದ ತಲೆದೋರುವ ಊತಕ ಉರಿಯೂತದಲ್ಲಿ ಚರ್ಮ ಕೆಂಪಾಗಿರುತ್ತದೆ. ಬಿಸಿಯಾಗಿರುತ್ತದೆ, ಊದಿಕೊಂಡಿರುತ್ತದೆ, ನೋವು ಅಸಾಧ್ಯವಾಗಿರುತ್ತದೆ. ಇದು ಸಾಮಾನ್ಯವಾಗಿ ಕೆಳ ಅವಯವದಲ್ಲಿ (ಕಾಲುಗಳಲ್ಲಿ) ಕಂಡುಬರುವ ಸಮಸ್ಯೆ. ಸಿಹಿಮೂತ್ರ ರೋಗಿಗಳಲ್ಲಿ ಗಂಭೀರ ಸ್ವರೂಪ ತಳೆಯಬಲ್ಲದು
cellulitis

ಊತಕ ಕೃಷಿ
(ಜೀ) ಪ್ರಾಣಿ ಅಥವಾ ಸಸ್ಯ ದೇಹದಿಂದ ತೆಗೆದ ಊತಕ ತುಣುಕುಗಳನ್ನು ಪ್ರತ್ಯೇಕವಾಗಿ, ಯುಕ್ತ ಪರಿಸರದಲ್ಲಿ ಬೆಳೆಸುವುದು. ಜೀವಕೋಶಗಳ ಬೆಳವಣಿಗೆ ಹಾಗೂ ಪ್ರಭೇದೀಕರಣಗಳನ್ನು ನಿಯಂತ್ರಿಸುವ ಅಂಶಗಳ ಬಗೆಗೆ ತಿಳಿಯಲು ಊತಕ ಕೃಷಿ ಅತ್ಯಮೂಲ್ಯವೆಂದು ಸಾಧಿತವಾಗಿದೆ. ಸಸ್ಯ ಊತಕಗಳ ಕೃಷಿಯ ಫಲವಾಗಿ ಸಂಪೂರ್ಣವಾಗಿ ಹೊಸ ಮಾದರಿಯ ಸಸ್ಯ ಗಳನ್ನು, ವೈರಸ್‌ಗಳಿಂದ ಬಾಧಿತವಾಗದಂಥ ಸಸ್ಯಗಳನ್ನು ಬೆಳೆಯಲು ಸಾಧ್ಯವಾಗಿದೆ. ಅಂಗಾಂಶ ಕೃಷಿ
tissue culture

ಊತಕ ಕ್ಷಯ
(ವೈ) ಜೀವಂತ ಊತಕದಲ್ಲಿ ಕೋಶ ಹಂತಹಂತವಾಗಿ ಶಿಥಿಲಗೊಂಡು/ವಿಘಟನೆಗೊಂಡು ಊತಕ ಕ್ರಮೇಣ ನಶಿಸುವುದು
necrobiosis

ಊತಕ ತಂತ್ರವಿದ್ಯೆ
(ವೈ) ಹಾನಿಗೀಡಾದ ಅಥವಾ ಗಾಯಗೊಂಡ ಶಾರೀರಿಕ ರಚನೆಯನ್ನು, ಅಂಗಾಂಶ ಅಥವಾ ಕೆಲವು ವೇಳೆ ಅಂಗಗಳನ್ನು ಪೂರ್ವಸ್ಥಿತಿಗೆ ತರುವ ಅಥವಾ ಬದಲಾಯಿಸುವ ತಂತ್ರವಿದ್ಯೆ. ಈ ವಿನೂತನ ಚಿಕಿತ್ಸೆಯು ಜೀವ ವಿಜ್ಞಾನ ಹಾಗೂ ತಂತ್ರಜ್ಞಾನದ ಮೂಲ ತತ್ವಗಳ ಆನ್ವಯಿಕತೆಯನ್ನು ಆಧರಿಸಿದೆ. ಇಲ್ಲಿ ಹಾನಿಗೀಡಾದ ಅಂಗಾಂಶಗಳ ಬದಲಾಗಿ, ಮೂಲ ಅಂಗಾಂಶಗಳಂತೆಯೇ ಕಾರ್ಯ ನಿರ್ವಹಿಸುವ ಪರ್ಯಾಯ ಗಳನ್ನು ತಯಾರಿಸಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಜೀವಂತ ಕೋಶಗಳನ್ನು ಆಕರ ಸಾಮಗ್ರಿಯಂತೆ ಉಪಯೋಗಿಸಲಾಗುತ್ತದೆ
tissue engineering

ಊತಕ ವಿಜ್ಞಾನ
(ಜೀ) ಕ್ರಿಯೆಗೆ ಸಂಬಂಧಿಸಿದಂತೆ ಪ್ರಾಣಿ ಹಾಗೂ ಸಸ್ಯ ಊತಕಗಳ ಸೂಕ್ಷ್ಮ ರಚನೆ ಮತ್ತು ರಾಸಾಯನಿಕ ಸಂಯೋಜನೆಗಳನ್ನು ಅಧ್ಯಯನ ಮಾಡುವ ಶಾಖೆ. (ವೈ) ಸೂಕ್ಷ್ಮ ದರ್ಶಕದ ಅಡಿಯಲ್ಲಿ ಜೀವಕೋಶಗಳ ರಚನೆಯನ್ನು ಅಧ್ಯಯನ ಮಾಡುವ ವಿಜ್ಞಾನ. ಸಹಜ ಕೋಶಗಳ ಅಧ್ಯಯನವು ಸಹಜ ಊತಕ ವಿಜ್ಞಾನ; ರೋಗಗ್ರಸ್ತ ಜೀವಕೋಶಗಳ ಅಧ್ಯಯನವು ವಿಕೃತ ಊತಕ ವಿಜ್ಞಾನವಾಗುತ್ತದೆ
histology


logo