logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಷಟಲ್
(ಭೌ) ಬೈಜಿಕ ಕ್ರಿಯಾಕಾರಿಗಳಲ್ಲಿ ಮಾದರಿಗಳನ್ನು ಇರಿಸಲು, ಮತ್ತೆ ಹಿಂತೆಗೆದುಕೊಳ್ಳಲು ಉಪಯೋಗಿಸುವ ಧಾರಕ. ಇದರಲ್ಲಿ ಇರಿಸಿದ ಮಾದರಿಗಳನ್ನು ನ್ಯೂಟ್ರಾನ್‌ಗಳ ವಿಕಿರಣದ ಮೂಲಕ ವಿಕಿರಣಪಟುಗಳನ್ನಾಗಿ ಮಾಡಲಾಗುತ್ತದೆ
shuttle

ಷಡ್ಭುಜ
(ಗ) ನೋಡಿ: ಷಷ್ಠಭುಜ
hexagon

ಷರತ್ತು
(ಗ) ನೋಡಿ : ನಿರ್ಬಂಧ
condition

ಷಷ್ಟ್ಯಂಶ
(ಗ) ಈ ಪದ್ಧತಿಯಲ್ಲಿ ಒಂದು ಮಾನವನ್ನು ೬೦ ಸಮಭಾಗಗಳನ್ನಾಗಿ ವಿಭಜಿಸಿ ಅಂತಹ ಒಂದು ಸಣ್ಣ ಭಾಗವನ್ನು ಉಪ-ಮಾನವಾಗಿ ಪರಿಗಣಿಸಲಾಗುತ್ತದೆ. ಉದಾ: (೧) ೧ ಡಿಗ್ರಿ (ಅಂಶ)=೬೦ ಮಿನಿಟುಗಳು (ಕಲಾ); ೧ ಮಿನಿಟು (ಕಲಾ) = ೬೦ ಸೆಕೆಂಡುಗಳು (ವಿಕಲಾ) ಎಂಬುದು ‘ಕೋನ’ಮಾನದ ಷಷ್ಟ್ಯಂಶ ಪದ್ಧತಿ. (೨) ಆಧುನಿಕ ಕಾಲಮಾನ ಷಷ್ಟ್ಯಂಶ ಪದ್ಧತಿಯಲ್ಲಿ ೧ ಗಂಟೆ = ೬೦ ನಿಮಿಷಗಳು, ೧ ನಿಮಿಷ = ೬೦ ಸೆಕೆಂಡುಗಳು. (೩) ಭಾರತೀಯ ಕಾಲಮಾನದ ಷಷ್ಟ್ಯಂಶ ಪದ್ಧತಿಯಲ್ಲಿ ೧ ದಿನ = ೬೦ ಘಟಿ (ನಾಡಿ)ಗಳು, ೧ ಘಟಿ (ನಾಡಿ) = ೬೦ ವಿಘಟಿ (ವಿನಾಡಿ)ಗಳು
sexagesimal

ಷಷ್ಠಕ
(ಗ) ವೃತ್ತದ ಆರನೆಯ ಒಂದು ಭಾಗ, ೩೬೦0¸೬=೬೦0. ಕೋನಾಂತರ ಅಳೆಯಲು ಬಳಸುವ ಒಂದು ಸಲಕರಣೆ. ನೋಡಿ: ಸೆಕ್ಸ್ ಟಂಟ್
sextant

ಷಷ್ಠದಶಮಾನ
(ಕಂ.ಗ.) ಹದಿನಾರು ವಿವಿಧ ಪ್ರತೀಕಗಳಿಂದ ಸಂಖ್ಯೆಗಳನ್ನು ನಿರೂಪಿಸುವ ಪದ್ಧತಿ: ೦, ೧, ೨, ೩, ೪, ೫, ೬, ೭, ೮, ೯, a, b, c, d, e, f. ದಶಮಾನ ಪದ್ಧತಿಯಲ್ಲಾದರೋ ಹತ್ತು ಪ್ರತೀಕಗಳು. ದ್ವಿಮಾನದಲ್ಲಿ ಎರಡು ಪ್ರತೀಕಗಳು. ಷಷ್ಠದಶಮಾನ ಪದ್ಧತಿಯಲ್ಲಿ ಸಂಖ್ಯಾ ನಿರೂಪಣೆ ದ್ವಿಮಾನ ಪದ್ಧತಿಯಲ್ಲಿಯದಕ್ಕಿಂತ ಹ್ರಸ್ವವಾದುದರಿಂದ ಕಂಪ್ಯೂಟರ್ ಗಳಲ್ಲಿ ಈ ಪದ್ಧತಿಯನ್ನು ಬಳಸುವುದುಂಟು. ಷೋಡಶಮಾನ ಪದ್ಧತಿ
hexadecimal

ಷಷ್ಠಫಲಕ
(ಗ) ಆರು ಮುಖಗಳುಳ್ಳ ಘನಾಕೃತಿ - ಷಣ್ಮುಖ. ನೋಡಿ: ಬಹುಫಲಕ
hexahedron

ಷಷ್ಠಭುಜ
(ಗ) ಆರು ಮುಖಗಳುಳ್ಳ ಬಹುಭುಜಾಕೃತಿ. ನೋಡಿ: ಬಹುಭುಜ
hexagon

ಷಾಕ್ ಅಬ್ಸಾರ್ಬರ್
(ತಂ) ವಾಹನಗಳು ಹಳ್ಳತಿಟ್ಟುಗಳಿರುವ ರಸ್ತೆಯಲ್ಲಿ ವೇಗವಾಗಿ ಚಲಿಸುವಾಗ ಸ್ಪ್ರಿಂಗುಗಳ ಮೇಲೆ ಬೀಳುವ ಒತ್ತಡವನ್ನು ಹೀರಿಕೊಂಡು ವಾಹನ ಸಲೀಸಾಗಿ ಚಲಿಸುವಂತೆ ಮಾಡಲು ಚಾಸಿಸ್‌ನಲ್ಲಿ ಅಳವಡಿಸಿರುವ ಸಾಧನ
shock absorber

ಷಾರ್ಕ್‌ಮೀನು
(ಪ್ರಾ) ಉಷ್ಣ ಹಾಗೂ ಉಪೋಷ್ಣವಲಯ ಸಾಗರಗಳಲ್ಲಿ ಕಂಡು ಬರುವ ಇಲಾಸ್ಮೊಬ್ರ್ಯಾಂಕ್ ಉಪವರ್ಗದ ಮಾಂಸಾಹಾರಿ ಮೀನುಗಳ ಸುಮಾರು ೨೨೫ ಪ್ರಭೇದಗಳ ಪೈಕಿ ಒಂದು. ಇದರ ಒಡಲಿನ ಎರಡು ತುದಿಗಳೂ ಚೂಪಾಗಿದ್ದು ಕದಿರಿನ ಆಕಾರದಲ್ಲಿರುತ್ತವೆ. ಬೂದು, ಹಳದಿ, ಕಪ್ಪು ಬಣ್ಣದ್ದು. ಚರ್ಮವು ಗಂಟು ಅಥವಾ ಕ್ಷಯಗಂತಿಗಳಿಂದ ಕೂಡಿ ಒರಟಾಗಿರುತ್ತದೆ. ಮೂತಿ ಬಾಯಿಗಿಂತ ಮುಂದಕ್ಕೆ ಚಾಚಿರುತ್ತದೆ. ಈ ಮೀನಿನ ಯಕೃತ್ತಿನ ಎಣ್ಣೆಯನ್ನು ಎ ವೈಟಮಿನ್‌ನ ಆಕರವಾಗಿ ಬಳಸಲಾಗುತ್ತದೆ. ಟೈಗರ್ ಷಾರ್ಕ್ ಸುಮಾರು ೨೫ಮೀ. ಉದ್ದ ಬೆಳೆಯುತ್ತದೆ. ಸೊರಮೀನು
shark


logo