logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಉಕ್ಕು
(ತಂ) ಕಬ್ಬಿಣ ಮತ್ತು ಶೇ. ೨ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಒಳಗೊಂಡಿರುವ ಮಿಶ್ರಲೋಹ. ಮ್ಯಾಂಗನೀಸ್, ಸಿಲಿಕಾನ್, ತಾಮ್ರ, ರಂಜಕ ಮತ್ತು ಗಂಧಕಗಳೂ ವಿವಿಧ ಪ್ರಮಾಣಗಳಲ್ಲಿ ಇರಬಹುದು. ಉಕ್ಕಿನ ಬಿಗಿತ, ಗಡಸುತನ ಮತ್ತು ಸಾಮರ್ಥ್ಯ ಅದರಲ್ಲಿರುವ ಕಾರ್ಬನ್ ಅಂಶವನ್ನು ಅವಲಂಬಿಸಿವೆ
steel

ಉಕ್ಕೇರು
(ಭೌ) ವಿದ್ಯುತ್ ಪ್ರವಾಹದ ವೋಲ್ಟೇಜ್‌ನಲ್ಲಾದ ಅತಿ ಉನ್ನತ ಆದರೆ ಕ್ಷಣಿಕ ಹೆಚ್ಚಳ
surge

ಉಕ್ತವಾಣಿ
(ತಂ) ಮಾತನ್ನು ದಾಖಲಿಸಿಕೊಂಡು ಅವಶ್ಯವಾದಾಗ ಪುನರುಚ್ಚರಿಸುವ ಸಲಕರಣೆ
dictaphone

ಉಕ್ತಿ
(ಗ) ಗಣಿತ ತರ್ಕಶಾಸ್ತ್ರದಲ್ಲಿ ನಿಜ ಮೌಲ್ಯವನ್ನು ನಿರ್ಧರಿಸಬಹುದಾದ ಸೂತ್ರ. ಉದಾ: ೧+೧=೨; ೫+೪=೦ ಮೊದಲನೆಯದರ ನಿಜ ಮೌಲ್ಯ ೧, ಎರಡನೆಯದರ ನಿಜ ಮೌಲ್ಯ ೦. ನೋಡಿ: ಹೇಳಿಕೆ
sentence

ಉಕ್ತಿ
(ಗ) ನೋಡಿ: ಗಣಿತೋಕ್ತಿ
expression

ಉಗಿ ಎಂಜಿನ್
(ತಂ) ಉಗಿಯಲ್ಲಿ ಇರುವ ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನ. ಇದು ಆವಿಯ ಸ್ಥಿತಿಸ್ಥಾಪಕ ಗುಣವನ್ನೂ ಅದರ ವಿಸ್ತರಣ ಅಥವಾ ಶೀಘ್ರ ದ್ರವೀಭವನ ಗುಣವನ್ನೂ ಉಪಯೋಗಿಸಿಕೊಂಡು ಕೆಲಸ ಮಾಡುತ್ತದೆ. ಇದರ ಪ್ರಮುಖ ಬಿಡಿಭಾಗಗಳು: ನಾಳಿ (ಸಿಲಿಂಡರ್) ಮತ್ತು ಇದರೊಳಗೆ ಹಿಂದಕ್ಕೂ ಮುಂದಕ್ಕೂ ಚಲಿಸುವ ಆಡುಬೆಣೆ/ಕೊಂತ (ಪಿಸ್ಟನ್). ಈ ಆಡುಬೆಣೆ ದಂಡವನ್ನು ವೃತ್ತಾಕಾರದ ಗಾಲಿಯ ಮಗ್ಗುಲಿಗೆ ಜೋಡಿಸಿದೆ. ೧೯ನೆಯ ಶತಮಾನದ ಕೊನೆಯ ಭಾಗದಲ್ಲಿ ಹೆಚ್ಚು ಬಳಕೆಯಲ್ಲಿತ್ತು. ಈಗ ಇದರ ಬದಲು ಉಗಿತಿರುಬಾನಿ ಹಾಗೂ ಅಂತರ್ದಹನ ಎಂಜಿನ್‌ಗಳು ಹೆಚ್ಚಾಗಿ ಬಳಕೆಗೆ ಬಂದಿವೆ
steam engine

ಉಗಿ ಬಟ್ಟೀಕರಣ
(ರ) ನೀರಿನಲ್ಲಿ ವಿಲೇಯ ವಾಗದಂಥ ದ್ರವಗಳ ಮೂಲಕ ಉಗಿಯನ್ನು ಹಾಯಿಸಿ ಬಟ್ಟೀಕರಿಸುವ ಒಂದು ವಿಧಾನ. ಪರಸ್ಪರ ವಿಲೇಯವಾಗದಂಥ ಎರಡು ದ್ರವಗಳ ಮಿಶ್ರಣದ ಆವಿ ಒತ್ತಡ ಶುದ್ಧ ರೂಪ ದ್ರವದ ಆವಿ ಒತ್ತಡಕ್ಕಿಂತ ಕಡಿಮೆಯಾಗಿರುತ್ತದೆ ಎಂಬ ಅಂಶವನ್ನು ಇದು ಆಧರಿಸಿದೆ
steam distillation

ಉಂಗುರ
(ರ) ನೋಡಿ : ವಲಯ
ring

ಉಂಗುರ ನೀಹಾರಿಕೆ
(ಖ) ವೀಣಾಪುಂಜದಲ್ಲಿರುವ ಗ್ರಹಯುಕ್ತ ನೀಹಾರಿಕೆ (M೫೭ ಅಥವಾ NGC ೬೭೨೦). ನಮ್ಮ ದೃಷ್ಟಿರೇಖೆಗೆ ಲಂಬ ತಳದಲ್ಲಿ ವಿಕ್ಷೇಪಗೊಳ್ಳುವ ಈ ನೀಹಾರಿಕೆಯ ಆಕಾರ ಉಂಗುರದಂತೆಯೇ ಕಾಣುತ್ತದೆ. ಇದರಲ್ಲಿ ಅಲ್ಲಲ್ಲಿ ಹರಡಿರುವ ಅನಿಲದ ತುಣುಕುಗಳು ಸೂರ್ಯನ ಸುತ್ತಲಿನ ಗ್ರಹಗಳ ಚಿತ್ರವನ್ನು ನೆನಪಿಗೆ ತರುವುದರಿಂದ ಇದಕ್ಕೆ ಗ್ರಹಯುಕ್ತ ನೀಹಾರಿಕೆ ಎಂಬ ಹೆಸರು
ring nebula

ಉಗುರು
(ಪ್ರಾ) ಮೇಲ್ವರ್ಗದ ಸ್ತನಿಗಳಲ್ಲಿ ಬೆರಳುಗಳ ತುದಿ ಗಳಲ್ಲಿ ಪಂಜಗಳ ಸ್ಥಾನದಲ್ಲಿ ಬೆಳೆದ ಅಧಿಚರ್ಮ ಮೂಲದ ಕೊಂಬಿನಂಥ ಫಲಕ. ನಖ
nail


logo