logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಸಂಕರ ತಳಿ ಸತ್ವ
(ಜೀ) ಸ್ವಪರಾಗಣ/ಸ್ವನಿಶೇಚನಗಳಿಂದ ಕುಂದಿದ ಆನುವಂಶಿಕ ಅಂಶಗಳನ್ನು ಅಡ್ಡತಳೀಕರಣದಿಂದ ಮತ್ತೆ ವರ್ಧಿಸುವುದು
hybrid vigour

ಸಂಕರ ತ್ರಾಣ
(ಜೀ) ಆನುವಂಶಿಕವಾಗಿ ಭಿನ್ನವಾದ ಜನ್ಮದಾತೃಗಳಿಂದ ಹುಟ್ಟಿದ ಸಂತಾನ ತೋರುವ ಹೆಚ್ಚಿನ ಸಾಮರ್ಥ್ಯ. ಉದಾ : ವಿಭಿನ್ನ ಬೆಳೆ ಮಾದರಿಗಳನ್ನು ತಳಿ ಮಾಡಿ ಬೆಳೆಸಿದ ಮಿಶ್ರಬೆಳೆ ಮೂಲ ಮಾದರಿಗಳಿಗಿಂತ ಹೆಚ್ಚು ಶಕ್ತಿಯುತವೂ ಹೆಚ್ಚು ಫಲದಾಯಕವೂ ಆಗಿರುವುದು. ಹೆಣ್ಣು ಕುದುರೆ ಹಾಗೂ ಕತ್ತೆಗಳ ಕೂಡಿಕೆಯಿಂದ ಹುಟ್ಟಿದ ಹೇಸರಕತ್ತೆ. ಕುದುರೆ ಕತ್ತೆಗಳಿಗಿಂತ ಹೆಚ್ಚು ಶಕ್ತಿಯುತ. ಅಧಿಕ ರೋಗ ನಿರೋಧಕ ಮತ್ತು ದೀರ್ಘಾಯುಷಿ
hybrid vigour

ಸಂಕರಕೋಶ
(ಜೀ) ಪ್ರತಿಕಾಯಗಳನ್ನು ಸಂಶ್ಲೇಷಿಸುವ, ಬಿ-ಲಿಂಫೊಸೈಟ್ ಮತ್ತು ನಶಿಸದೆ ನಿರಂತರ ವಿಭಜನೆಗೊಳ್ಳುತ್ತ ಹೋಗುವ ಕ್ಯಾನ್ಸರ್‌ಪೀಡಿತ (ಮಯಲೋಮ) ಬಿಳಿ ರಕ್ತಗಳ ನಡುವಣ ಕೋಶ. ಈ ಸಂಕರ ಕೋಶಗಳು ಶಾಶ್ವತವಾಗಿ ಉಳಿಯು ವುದರಿಂದ ಮಾನೋಕ್ಲೋನಲ್ ಪ್ರತಿಕಾಯಗಳನ್ನು ಹೇರಳವಾಗಿ ಉತ್ಪಾದಿಸುತ್ತ ಹೋಗುತ್ತವೆ. ೧೯೭೫ರಲ್ಲಿ ಸಿ. ಮಿಲ್‌ಸ್ಟೈನ್ ಮತ್ತು ಜಿ-ಕೋಹೆಲರ್ ಮೊದಲಿಗೆ ಇಂತಹ ಸಂಕರಕೋಶ ಸೃಷ್ಟಿಸಿದರು
hybridoma

ಸಂಕರಣ
(ರ) ವೇಲೆನ್ಸೀಯ ಕಕ್ಷಕಗಳು ತಮ್ಮ ವಿಶಿಷ್ಟತೆಯನ್ನು ಕಳೆದುಕೊಂಡು ಅಷ್ಟೇ ಸಂಖ್ಯೆಯ ಆದರೆ ಸಮಸ್ವರೂಪದ ಕಕ್ಷಕಗಳಾಗುವಿಕೆ
hybridization

ಸಂಕರಣ ಪರಿಣಾಮ
(ಭೌ) ಬರುತ್ತಿರುವ ಅಧಿಕ ಆವೃತ್ತಿಯ ರೇಡಿಯೋ ಸಂಜ್ಞೆಗೆ ಸ್ಥಳದಲ್ಲೇ ಉತ್ಪತ್ತಿ ಮಾಡಿದ ಇನ್ನೊಂದು ಆವೃತ್ತಿಯ ಸಂಜ್ಞೆಯನ್ನು ಸೇರಿಸಿ ಅವೆರಡರ ವ್ಯತ್ಯಾಸವುಳ್ಳ ಆವೃತ್ತಿಯನ್ನು ಉಂಟುಮಾಡುವುದು. ಭಿನ್ನಾವೃತ್ತೀಯ ಪರಿಣಾಮ
hyterodyne effect

ಸಂಕರ್ಮ
(ಪವಿ) ಇದೊಂದು ಪರಿಸರಾತ್ಮಕ ಸಹಯೋಗ. ಇದರಲ್ಲಿ ಜೀವಿಯ ದೈಹಿಕ ಪ್ರಕ್ರಿಯೆಗಳು/ವರ್ತನೆಗಳು ಸಮೀಪದಲ್ಲಿರುವ ಇನ್ನೊಂದು ಜೀವಿಯಿಂದಾಗಿ ವರ್ಧಿಸುತ್ತವೆ. (ವೈ) ಚಲನೆ ಉಂಟುಮಾಡುವಲ್ಲಿ ಒಂದು ಸ್ನಾಯು ಇನ್ನೊಂದರ ಜೊತೆ ನಿರ್ವಹಿಸುವ ಸಂಕಲಿತ ಕ್ರಿಯೆ
synergism

ಸಂಕಲನ
(ಗ) ಅಂಕಗಣಿತದ ನಾಲ್ಕು ಮೂಲ ಪರಿಕರ್ಮಗಳ ಪೈಕಿ ಒಂದು. ಉಳಿದವು ವ್ಯವಕಲನ, ಗುಣಾಕಾರ ಮತ್ತು ಭಾಗಾಹಾರ. a+b=c ಆಗಿರಲಿ. ಈ ಒಟ್ಟು ಪರಿಕರ್ಮ ಸಂಕಲನ. aಗೆ ಸಂಕಲ್ಯ (ಯೋಜ್ಯ) bಗೆ ಸಂಕಲಿತ (ಯೋಜಕ) ಮತ್ತು cಗೆ ಸಂಕಲನ ಫಲಲಬ್ಧವೆಂದು ಹೆಸರು. ಚಿಹ್ನೆ +. ಉದಾ: ೨+೩=೫. ಕೂಡುವುದು
addition

ಸಂಕಲನ ಕ್ರಿಯೆ
(ಗ) ಮೊತ್ತವನ್ನು ಪಡೆಯುವುದು. (ರ) ಕಾರ್ಬನಿಕ ಅಣುವೊಂದಕ್ಕೆ ಇನ್ನೊಂದು ಅಣು ರಾಸಾಯನಿಕವಾಗಿ ಸೇರ್ಪಡೆ ಆಗುವ ಕ್ರಿಯೆ
summation

ಸಂಕಲನ ನಿಯಮ
(ಸಂ) ಯಾವುದೇ ಯಾದೃಚ್ಛಿಕ ಸನ್ನಿವೇಶಕ್ಕೆ ಸಂಬಂಧಿಸಿದಂತೆ A ಮತ್ತು B ಎರಡು ಘಟನೆಗಳನ್ನು ಸೂಚಿಸಿದರೆ ಇವುಗಳ ಪೈಕಿ ಒಂದಾದರೂ ನಡೆಯುವ ಸಂಭವತೆ P(APB) = P(A) + P(B) - P(AB). ಇಲ್ಲಿ AB ಎರಡೂ ಘಟನೆಗಳು ಒಟ್ಟೊಟ್ಟಿಗೆ ನಡೆಯುವುದನ್ನು ಸೂಚಿಸುತ್ತದೆ. ಈ ನಿಯಮ ವನ್ನು ಎರಡಕ್ಕಿಂತ ಹೆಚ್ಚು ಘಟನೆಗಳಿಗೆ ಸಾರ್ವತ್ರೀಕರಿಸಬಹುದು
additive law

ಸಂಕಲನಶೀಲ ಗುಣಗಳು
(ರ) ದ್ರಾವಣ ಗಳಲ್ಲಿ ವಿಲೀನವಾಗಿರುವ ಕಣಗಳ, ಅಯಾನ್‌ಗಳ ಮತ್ತು ಅಣುಗಳ ಸ್ವಭಾವಗಳನ್ನು ಅವಲಂಬಿಸದೆ ಅವುಗಳ ಸಾರತೆಯನ್ನು ಮಾತ್ರ ಅವಲಂಬಿಸಿದ ಗುಣಗಳು. ಘನೀಭವನ ಬಿಂದುವಿನ ಇಳಿತ, ಕುದಿ ಬಿಂದುವಿನ ಏರಿಕೆ ಮತ್ತು ಪರಾಸರಣ ಒತ್ತಡ ಈ ಗುಣಗಳಲ್ಲಿ ಕೆಲವು
colligative properties


logo