logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಒಕಾಪಿ
(ಪ್ರಾ) ಜಿರಾಫಿಡೀ ಕುಟುಂಬಕ್ಕೆ ಸೇರಿದ ಮೆಲುಕು ಹಾಕುವ ಸ್ತನಿ. ಒಕಾಪಿಯ ಜಾನ್‌ಸ್ಟೊನಿ ವೈಜ್ಞಾನಿಕ ನಾಮ. ಆಫ್ರಿಕದ ಉಷ್ಣವಲಯ ಕಾಡುಗಳಲ್ಲಿ ವಾಸ. ತಲೆಯ ಆಕಾರ, ತುಟಿಗಳು ಹಾಗೂ ನಾಲಗೆ ಜಿರಾಫೆಯಲ್ಲಿ ಇರುವಂತೆಯೇ. ಆದರೆ ಕೊರಳು ಅಷ್ಟು ಉದ್ದವಿಲ್ಲ. ಜೀಬ್ರದಂತಹ ದೇಹ. ಕಡುಕೆಂಗಂದು ತೊಗಲು. ಹಿಂಭಾಗ ಮತ್ತು ಕಾಲುಗಳ ಮೇಲ್ಭಾಗಗಳಲ್ಲಿ ಮಾತ್ರ ಅಡ್ಡಡ್ಡ ಗೆರೆಗಳು. ಪುಕ್ಕಲು ಹಾಗೂ ಸಾಧು ಸ್ವಭಾವದ್ದು. ನಿಶಾಚರಿ. ೧೯೦೦ರಲ್ಲಷ್ಟೆ ಮೊದಲು ಕಾಂಗೋದ ಸೆಮಿಕ್ಲಿ ಅರಣ್ಯದಲ್ಲಿ ಕಂಡುಬಂದಿತು
okapi

ಒಗ್ಗದಿಕೆ
(ವೈ) ನೋಡಿ : ಅಲರ್ಜಿ
allergy

ಒಗ್ಗಿಕೆ
(ಪವಿ) ಪರಿಸರದ ಒತ್ತಡಕ್ಕೆ ಹೊಂದಿ ಕೊಳ್ಳುವುದು. ಪರಿಸ್ಥಿತಿ ಹೊಂದಿಕೆ
acclimitisation

ಒಂಟೆ
(ಪ್ರಾ) ಕಶೇರುಕ ವಿಭಾಗ, ಸ್ತನಿ ವರ್ಗ, ದ್ವಿಖುರ ಗಣ, ಕಮೆಲಿಡೀ ಕುಟುಂಬ ಹಾಗೂ ಕಮೀಲಸ್ ಜಾತಿಗೆ ಸೇರಿದ, ಮರುಭೂಮಿಯ ಹಡಗೆಂದು ಪರಿಚಿತವಾಗಿರುವ ಚತುಷ್ಪಾದಿ, ಸಾಕು ಪ್ರಾಣಿ. ಸವಾರಿಗೂ ಹೇರು ಸಾಗಣೆಗೂ ಉಪಯುಕ್ತ. ಎರಡು ಮುಖ್ಯ ಪ್ರಭೇದಗಳಿವೆ ೧. ಕಮೀಲಸ್ ಡ್ರಾಮಿ ಡೆರಿಯಸ್ (ಅರೇಬಿಯದ ಒಂಟೆ) ಒಂದು ಡುಬ್ಬ ಉಳ್ಳದ್ದು; ೨. ಕಮೀಲಸ್ ಬ್ಯಾಕ್ಟ್ರಿಯೇನಸ್ ಎರಡು ಡುಬ್ಬ ಉಳ್ಳದ್ದು (ಮಂಗೋಲಿಯ, ತುರ್ಕಿ ಜನ್ಮ ಸ್ಥಾನ). ಒಂಟೆಯ ಹಾಲು ಅತ್ಯುತ್ತಮ ಆಹಾರ. ರೋಮದಿಂದ ಮೇಲು ಹಾಸು, ಕಂಬಳಿ, ಕೋಟು, ಗೌನು ಇತ್ಯಾದಿ ವಸ್ತ್ರಗಳನ್ನು ತಯಾರಿಸುತ್ತಾರೆ
camel

ಒಂಟೆಹುಳು
(ಪ್ರಾ) ಡಿಕ್ಟಿಯಾಪ್ಟರ ಗಣ, ಮ್ಯಾಂಟಿಡೀ ಉಪಗಣಕ್ಕೆ ಸೇರಿದ ಕೀಟ. ಬೇಲಿ, ಹಸಿರು ಗಿಡ ಮರ, ಹುಲ್ಲು ನೆಲಗಳಲ್ಲಿ ವಾಸ, ಹಿನ್ನೆಲೆಯ ಬಣ್ಣಕ್ಕೆ ಹೊಂದಿ ಕೊಳ್ಳುವ ಗುಣ ಇದೆ. ಎರಡು ಸಂಯುಕ್ತ ನೇತ್ರಗಳ ಜೊತೆಗೆ ಮೂರು ಸರಳನೇತ್ರಗಳಿವೆ. ಮಳ್ಳಿಕೀಟ
mantis

ಒಟ್ಟಿಲು
(ತಂ) ಹೆಚ್ಚು ಕಡಿಮೆ ಓರಣವಾಗಿ ಒಂದರ ಮೇಲೊಂದರಂತೆ ಇಟ್ಟ ವಸ್ತುರಾಶಿ. ಗುಡ್ಡೆ. ಒಡ್ಡು
pile

ಒಡಹುಟ್ಟಿದವರು
(ಪ್ರಾ) ಒಂದೇ ಜನ್ಮದಾತೃವಿನ ಮಕ್ಕಳು. ಸಹೋದರ ಸಹೋದರಿಯರು. ರಕ್ತಸಂಬಂಧಿಗಳು
siblings

ಒಂಡೊಗ್ರಾಫ್
(ತಂ) ಪರ್ಯಾಯ ವಿದ್ಯುತ್ ವೋಲ್ಟೇಜಿನ ತರಂಗರೂಪವನ್ನು ಹೆಜ್ಜೆ ಹೆಜ್ಜೆಯಾಗಿ ದಾಖಲಿಸುವ ಒಂದು ಉಪಕರಣ
ondograph

ಒಡೊಂಟೊಕ್ಲಾಸ್ಟ್
(ಪ್ರಾ) ಸ್ತನಿಗಳಲ್ಲಿ ಹಾಲು ಹಲ್ಲುಗಳು ಉದುರಿಹೋಗುವ ಹೊತ್ತು ಬಂದಾಗ ಅವುಗಳ ಬೇರುಗಳನ್ನು ನಾಶಮಾಡುವ ಮಹಾ ಕೋಶಗಳಲ್ಲೊಂದು
odontoclast

ಒಂಡೊಸ್ಕೋಪ್
(ತಂ) ಪ್ರಬಲ ಸೂಕ್ಷ್ಮ ತರಂಗ ವಿಕಿರಣ ಕ್ಷೇತ್ರಗಳಿಂದ ಚಾಲಿತವಾದ ದೀಪ್ತಿನಳಿಕೆ. ಪ್ರೇಷಕ (ಟ್ರಾನ್ಸ್‌ಮಿಟರ್)ಗಳನ್ನು ಟ್ಯೂನ್ ಮಾಡುವುದರಲ್ಲಿ (ನಿರ್ದಿಷ್ಟ ತರಂಗಾಂತರಕ್ಕೆ ಅಳವಡಿಸುವುದರಲ್ಲಿ) ಬಳಕೆ
ondoscope


logo