logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಐಕಾನಸ್ಕೋಪ್
(ತಂ) ಟೆಲಿವಿಷನ್‌ಗೆ ಜೋಡಿಸಿರುವ ಒಂದು ನಳಿಗೆ. ಇದರಲ್ಲಿಯ ಎಲೆಕ್ಟ್ರಾನ್ ದಂಡವು ಚಿತ್ರವನ್ನು ಕ್ರಮ ವೀಕ್ಷಿಸಿ ಆ ದ್ಯುತಿಚಿತ್ರವನ್ನು ವಿದ್ಯುತ್ ಸಂeಗಳಾಗಿ ಪರಿವರ್ತಿಸುತ್ತದೆ. ಇವು ಮುಂದೆ ರೇಡಿಯೋ ಅಲೆಗಳಾಗಿ ಪರಿವರ್ತಿತವಾಗಿ ದೂರದರ್ಶನದಲ್ಲಿ ಬಿತ್ತರವಾಗುತ್ತವೆ. ಬಿಂಬದರ್ಶಕ
iconoscope

ಐಕ್ಯ ಧಾತು
(ಗ) ನೋಡಿ : ತತ್ಸಮಕಾರಿ ಧಾತು
identity element

ಐಗನ್ ಫಲನ
(ಭೌ) ಗಡಿ ನಿರ್ಬಂಧಗಳ ಒಂದು ಗಣವನ್ನು ತೃಪ್ತಿಪಡಿಸುವ ತರಂಗ ಸಮೀಕರಣ ಪರಿಹಾರ. ಕ್ಯಾರಕ್ಟರಿಸ್ಟಿಕ್ (ಲಾಕ್ಷಣಿಕ) ಫಲನ. ಪ್ರಾಪರ್ (ನೈಜ) ಫಲನ
eigen function

ಐಚ್ಛಿಕ ಕ್ರಿಯೆ
(ಭೌ) ಮನಸ್ಸಿನಲ್ಲಿ ರೂಪುಗೊಂಡ, ಯಾವುದೋ ಉದ್ದೇಶದಿಂದ ಪ್ರೇರಿತವಾದ, ಪ್ರeಪೂರಿತವಾದ, ತನ್ನಷ್ಟಕ್ಕೆ ತಾನೇ ಆಗದ ಕ್ರಿಯೆ
voluntary action

ಐಚ್ಛಿಕ ಸ್ನಾಯು
(ವೈ) ಸ್ವ-ಇಚ್ಛೆಯಿಂದ ಚಲಿಸುವ ಎಲ್ಲಾ ಸ್ನಾಯುಗಳು. ಇವು ಸಾಮಾನ್ಯವಾಗಿ ಮಿದುಳಿನ ನಿಯಂತ್ರಣಕ್ಕೆ ಒಳಪಟ್ಟಿದ್ದು ದೇಹದ ಮೂಳೆಗಳಿಗೆ ಅಂಟಿಕೊಂಡು ಇರುತ್ತವೆ. ಮಿದುಳು ಹಾಗೂ ಮಿದುಳು ಬಳ್ಳಿಯಿಂದ ಬರುವ ನರಗಳು, ಮಯಲಿಯನ್‌ಯುಕ್ತ ನರಗಳು, ಈ ಸ್ನಾಯುಗಳಿಂದ ಪೂರೈಕೆಯಾಗಿರುತ್ತವೆ. ಹಾಗಾಗಿ ಇವು ಮಿದುಳಿನ ಆಣತಿಯಂತೆ ಕೆಲಸ ಮಾಡುತ್ತವೆ. ಈ ಸ್ನಾಯುವನ್ನು ಸೂಕ್ಷ್ಮದರ್ಶಕದ ಮೂಲಕ ಅಧ್ಯಯನ ಮಾಡಿದಾಗ ಪ್ರತಿಯೊಂದು ಸ್ನಾಯುಕೋಶವೂ ಉರುಳೆಯಾಕಾರದಲ್ಲಿ ಇರುವುದು ಕಾಣುತ್ತದೆ. ಇದರ ಮೇಲೆ ಅಡ್ಡಡ್ಡವಾಗಿ ಪಟ್ಟಿಗಳು ಇರುತ್ತವೆ. ಒಂದೊಂದು ತಂತುವಿನಲ್ಲೂ ಹಲವಾರು ನ್ಯೂಕ್ಲಿಯಸ್‌ಗಳಿದ್ದು, ಎಲ್ಲ ಸ್ನಾಯುತಂತುಗಳೂ ಪೊರೆಯಿಂದ ಆವೃತ. ರೇಖಿತ ಸ್ನಾಯು. ಪಟ್ಟೆ ಸ್ನಾಯು. ಅಸ್ಥಿ ಸ್ನಾಯು
voluntary muscle

ಐಝಡ್ ಪರೀಕ್ಷೆ
(ತಂ) ಲೋಹ ದಂಡದ ಆಘಾತ ಧಾರಣ ತ್ರಾಣ ಅಳೆಯಲು ಬಳಸುವ ಪ್ರಯೋಗ
izod test

ಐಝಡ್ ಮೌಲ್ಯ
(ತಂ) ಐಝಡ್ ಲೋಲಕ ಸಂಘಟ್ಟನೆ-ಪರೀಕ್ಷಣಾ ಯಂತ್ರದಲ್ಲಿ ಮಾದರಿಯನ್ನು ತುಂಡರಿಸುವಾಗ ಹೀರಿಕೊಳ್ಳಲಾದ ಶಕ್ತಿ
izod value

ಐಡೆಮ್‌ಪೊಟೆಂಟ್
(ಗ) ಸ್ವತಃ ತನ್ನಿಂದಲೇ ಗುಣಿಸಲ್ಪಟ್ಟಾಗ ಬದಲಾಗದ ರಾಶಿ. ಉದಾ: ೧ ಮತ್ತು ಮಾತೃಕೆ . x2 = x ಎಂಬ ಸಮೀಕರಣವನ್ನು ತೃಪ್ತಿಗೊಳಿಸುವಂಥ ಬೀಜಗಣಿತೀಯ ಉಕ್ತಿಯೊಂದರ ಮೂಲ
idempotent

ಐಬಿಸ್
(ಪ್ರಾ) ಸಿಕೋನೈನಿಫಾರ್ಮೀಸ್ ಗಣದ, ತ್ರೆಸ್ ಕಿಯೊರ್ನಿತಿಡೀ ಕುಟುಂಬದ ಹಲವು ಪ್ರಭೇದಗಳ ನೀರು ಹಕ್ಕಿ. ಇದರ ಅನೇಕ ಪ್ರಭೇದಗಳು ಪ್ರಪಂಚದ ನಾನಾ ಭಾಗಗಳಲ್ಲಿ, ಮುಖ್ಯವಾಗಿ ಉಷ್ಣವಲಯ ಪ್ರದೇಶಗಳಲ್ಲಿ ಹರಡಿವೆ. ದೊಡ್ಡ ಗಾತ್ರದ ಹಕ್ಕಿ. ಕೊಕ್ಕು ಉದ್ದ ವಾಗಿದ್ದು ಪಿಕಾಸಿಯ ಅಲಗಿನಂತೆ ಮುಂದಕ್ಕೆ ಬಾಗಿರುತ್ತದೆ. ಕೆಂಪು ರೆಕ್ಕೆ ಪುಕ್ಕಗಳಿಗಾಗಿ ಬೇಟೆ ಆಡಿದುದರ ಫಲವಾಗಿ ಈ ಕೆಂಪು ಹಕ್ಕಿ ಪ್ರಭೇದ ತೀರ ನಶಿಸಿಹೋಗಿದೆ. ಬೆಳ್ಳಕ್ಕಿ
ibis

ಐಬೆಕ್ಸ್
(ಪ್ರಾ) ಕ್ಯಾಪ್ರ ಜಾತಿಗೆ ಸೇರಿದ, ದಕ್ಷಿಣ ಯೂರೋಪ್. ಮಧ್ಯ ಏಷ್ಯ ಹಾಗೂ ಏಷ್ಯ ಮೈನರ್‌ಗಳಲ್ಲಿ ಕಂಡುಬರುವ ಕಾಡುಮೇಕೆಗಳ ಪೈಕಿ ಒಂದು. ಸ್ಥೂಲ ದೃಢ ಮೈಕಟ್ಟು, ಹಿಂದಕ್ಕೆ ಬಾಗಿದ ದೊಡ್ಡ ಕೊಂಬುಗಳು, ಮೈ ತುಂಬ ಒರಟಾದ ಬಿರುಸು ಕೂದಲುಗಳು, ಮೈಯ ಕೆಳ ಭಾಗದಲ್ಲಿ ಸಮೃದ್ಧ ದಟ್ಟ ಮೃದು ತುಪ್ಪಳ ಇರುವುದು ಇದರ ವೈಶಿಷ್ಟ್ಯ
ibex


logo