logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಜಗಲಿ
(ತಂ) ಕಟ್ಟಡ ಕಟ್ಟುವಲ್ಲಿ ಕೆಲಸಗಾರರು ಬಳಸುವ ಸಾರುವೆ
stage

ಜಗ್ಗದ ಅವಸ್ಥೆ
(ವೈ) ಸ್ನಾಯು ಅಥವಾ ನರ ಇತ್ಯಾದಿಗಳು ಒಮ್ಮೆ ಪ್ರತಿಕ್ರಿಯೆ ತೋರಿದನಂತರ ಮತ್ತೊಮ್ಮೆ ಅದೇ ಪ್ರತಿಕ್ರಿಯೆ ತೋರಿಸುವ ಮುನ್ನಿನ ಶೂನ್ಯ ಪ್ರತಿಕ್ರಿಯೆಯ ಅವಸ್ಥೆ
refractory phase

ಜಗ್ಗು
(ತಂ) ಭಾರ ವಸ್ತುವನ್ನು ಪ್ರಯಾಸದಿಂದ ಅಥವಾ ರಭಸದಿಂದ ಎಳೆ. ತುಯ್ಯಿ
lug

ಜಗ್ಗು
(ಭೌ) ತರಲದಲ್ಲಿ ಚಲಿಸುವಾಗ ವಸ್ತುವಿಗೆ ಎದುರಾಗುವ ಪ್ರತಿರೋಧ. ತುಯ್ತ
drag

ಜಘನಾಸ್ಥಿ
(ಪ್ರಾ) ವಸ್ತಿ ಕುಹರದ ಎರಡು ಪಕ್ಕಗಳನ್ನು ರಚಿಸಿರುವ ಜೋಡಿ ಮೂಳೆಗಳಲ್ಲಿ ಒಂದು. ಪ್ಯೂಬಿಸ್
pubis

ಜಟಿಲ ಮೂಳೆ ಮುರಿತ
(ವೈ) ಮೂಳೆ ಮುರಿತವಾದಾಗ ಇತರ ಊತಕಗಳೂ ಹರಿದು ಗಾಯವಾಗಿ ಮುರಿದ ಮೂಳೆಗಳಿಂದಾಗಿ ಚರ್ಮದ ಹೊರಗೆ ಗಾಯವಾಗಿ ಇರುವಂಥ ಸನ್ನಿವೇಶ. ಸಂಯುಕ್ತ ಅಸ್ಥಿಭಂಗ
compound fracture

ಜಠರ
(ಪ್ರಾ) ಪ್ರಾಣಿಗಳಲ್ಲಿ ಪಚನವ್ಯವಸ್ಥೆಯ ಪ್ರಥಮ ಕುಹರ. ಸ್ತನಿಗಳಲ್ಲಿ ಇದು ವಪೆಯ ಕೆಳಗಿರುವ ಸ್ನಾಯು ಸಂಚಿ. ಅನ್ನನಾಳದಿಂದ ಬಂದ ಆಹಾರ ಪದಾರ್ಥವನ್ನು ಜಠರದ ಪೊರೆ ಹೊರಸೂಸುವ ಆಮ್ಲ ಮತ್ತು ಕಿಣ್ವಗಳು ಪಚನಗೊಳಿಸಿದ ನಂತರ ಅದು ಡುಯೋಡಿನಮ್ ಪ್ರವೇಶಿಸುತ್ತದೆ. ಕೆಲವು ಸಸ್ಯಾಹಾರಿ ಸ್ತನಿಗಳ ಜಠರದಲ್ಲಿ ಹಲವು ಭಾಗಗಳು ಇವೆ. ಅವುಗಳಲ್ಲಿ ಒಂದರಲ್ಲಿ ಸೆಲ್ಯುಲೋಸನ್ನು ಪಚನಗೊಳಿಸಲು ನೆರವಾಗುವ ಬ್ಯಾಕ್ಟೀರಿಯಗಳು ಉಂಟು. ಹಕ್ಕಿಗಳಿಗೆ ಎರಡು ಜಠರಗಳು. ಮೊದಲನೆಯದರಲ್ಲಿ ಜೀರ್ಣರಸದೊಡನೆ ಮಿಶ್ರವಾದ ಆಹಾರವನ್ನು ಎರಡನೆಯದು ಅರೆಯುತ್ತದೆ. ಕೆಲವು ಬಗೆಯ ಮೀನು, ಹುಳು, ಚಿಪ್ಪು ಪ್ರಾಣಿ ಇತ್ಯಾದಿಗಳಲ್ಲಿ ಹೆಚ್ಚು ಬಲವುಳ್ಳ ಸ್ನಾಯುಗಳಿಂದ ಕೂಡಿದ ಜಠರವಿದೆ
stomach

ಜಠರ ಊತ
(ವೈ) ಜಠರದ, ಅದರಲ್ಲೂ ಮುಖ್ಯವಾಗಿ ಅದರೊಳಗಿನ ಲೋಳೆಪೊರೆಯ, ಉರಿಯೂತ
gastritis

ಜಠರ ರಸ
(ವೈ) ಆಹಾರ ಜೀರ್ಣವಾಗಲು ಜಠರದ ಲೋಳೆಪೊರೆಯಲ್ಲಿಯ ಗ್ರಂಥಿಗಳು ಸ್ರವಿಸುವ, ಜೀರಕ ಕಿಣ್ವಗಳು ಇರುವ, ತಿಳಿಯ ನಿರ್ವರ್ಣ ಆಮ್ಲೀಯ ದ್ರವ. ಮನುಷ್ಯರ ಜಠರ ರಸ ಪ್ರಧಾನವಾಗಿ ಶೇ. ೯೯.೪೪ರಷ್ಟು ನೀರು, ಶೇ. ೦.೦೨ರಷ್ಟು ಮುಕ್ತ ಹೈಡ್ರೋಕ್ಲೋರಿಕ್ ಆಮ್ಲ, ಸ್ವಲ್ಪ ಪ್ರಮಾಣಗಳಲ್ಲಿ ಸೋಡಿಯಮ್ ಕ್ಲೋರೈಡ್, ಪೊಟ್ಯಾಸಿಯಮ್ ಕ್ಲೋರೈಡ್, ಕ್ಯಾಲ್ಸಿಯಮ್ ಕ್ಲೋರೈಡ್ ಇತ್ಯಾದಿಗಳನ್ನೂ ಕಿಣ್ವಗಳನ್ನೂ ಒಳಗೊಂಡಿರುತ್ತದೆ
gastric juice

ಜಠರರಂಧ್ರನ
(ವೈ) ಜಠರಕ್ಕೆ ಆಹಾರ ಸಹಜ ಮಾರ್ಗ ದಲ್ಲಿ ಹೋಗದಿದ್ದಾಗ ಅದನ್ನು ಒದಗಿಸಲು ಶಸ್ತ್ರಕ್ರಿಯೆಯ ಮೂಲಕ ತೆರಪು ಅಥವಾ ರಂಧ್ರ ಮಾಡುವುದು. ನೋಡಿ: ಜಠರೋಚ್ಛೇದನ
gastrostomy


logo