logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಗಗನಯಾತ್ರಿ
(ತಂ) ವಾಯುಮಂಡಲಾತೀತ ಗಗನದಲ್ಲಿ ಆಕಾಶನೌಕೆಯಲ್ಲಿ ಪ್ರಯಾಣಿಸುವವ. ವ್ಯೋಮಯಾನಿ, ಆಕಾಶಯಾನಿ
astronaut

ಗಚ್ಚುಗಾರೆ
(ತಂ) ನೋಡಿ : ಕಾಂಕ್ರೀಟ್
concrete

ಗಜ
(ಗ) ಬ್ರಿಟಿಷ್ ಮಾನಕ ವ್ಯವಸ್ಥೆಯಲ್ಲಿ ಉದ್ದದ ಏಕಮಾನ. ೧ ಗಜ = ೦.೯೧೪೪ ಮೀಟರ್ = ೩ ಅಡಿಗಳು
yard

ಗಜನಿಂಬೆ
(ಸ) ರೂಟೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ. ಸಿಟ್ರಸ್ ಲೆಮನ್ ವೈಜ್ಞಾನಿಕ ನಾಮ. ರುಚಿ- ಹುಳಿ ಇಲ್ಲವೇ ಒಗರು. ಹಣ್ಣು ಅಂಡಾಕಾರ. ತುದಿ ಮುಂಚಾಚಿರುತ್ತದೆ. ಹಣ್ಣು ಸಿಟ್ರಿಕ್ ಆಮ್ಲದಿಂದ ಕೂಡಿರುತ್ತದೆ. ಬೆಟ್ಟದ ಗಜನಿಂಬೆ, ಅಸ್ಸಾಮ್ ಗಜನಿಂಬೆ ಎಂದು ಮುಂತಾದ ಅನೇಕ ಪ್ರಭೇದಗಳುಂಟು. ತಂಪು ಪಾನೀಯ, ಜ್ಯಾಮ್, ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಕೆ. ರಸ ಔಷಧಿಯಾಗಿಯೂ ಉಪಯುಕ್ತ. ನೋಡಿ : ಸಿಟ್ರಿಕ್ ಆಮ್ಲ
lemon

ಗಂಟಲ ಊತ
(ವೈ) ಕಟ್ಟುಸಿರು. ಎದೆಸೆರೆ ಬಿಗಿತದ ಪರಿಣಾಮವಾಗಿ ಉಂಟಾಗುವ ಗಂಟಲು ನೋವು
angina pectoris

ಗಂಟಲ ಕುಹರ
(ಪ್ರಾ) ಕಶೇರುಕಗಳಲ್ಲಿ ಬಾಯಿ ಕುಹರಕ್ಕೂ ಜಠರಕ್ಕೆ ಹೋಗುವ ನಾಳಕ್ಕೂ ನಡುವಿನ ಅನ್ನನಾಳ ಭಾಗ. ಆಹಾರ ಸಾಗಣೆಗೂ ಉಸಿರಾಟಕ್ಕೂ ಅನುಕೂಲಕರ
pharynx

ಗಂಟಲಮಾರಿ
(ವೈ) ಕೊರಿನೀಬ್ಯಾಕ್ಟೀರಿಯಮ್ ಡಿಫ್ತೀರಿಯೇ ಎಂಬ ಬ್ಯಾಕ್ಟೀರಿಯಾದಿಂದ ಮಕ್ಕಳಿಗೆ ಸಾಮಾನ್ಯವಾಗಿ ಬರುವ ರೋಗ. ಜ್ವರ, ಗಂಟಲನೋವು, ಗಳಲೆ ಕಟ್ಟುವಿಕೆ, ಗಂಟಲಿನಲ್ಲಿರುವ ಗಲಗ್ರಂಥಿ (ಟಾನ್ಸಿಲ್), ಕಿರುನಾಲಿಗೆ, ಮೃದು ತಾಲು ಹಾಗೂ ಗಂಟಲ ಹಿಂಭಾಗ ಇವುಗಳಲ್ಲಿ ಒಂದು ಹಳದಿ-ಬಿಳಿ ಬಣ್ಣದ ಪೊರೆ ರೂಪುಗೊಳ್ಳುವುದು ಈ ರೋಗದ ಮುಖ್ಯಲಕ್ಷಣ. ಎಷ್ಟೋ ಸಲ ಈ ಪೊರೆ ತೀವ್ರವಾಗಿ ವಾಯು ಮಾರ್ಗವನ್ನು ಮುಚ್ಚಿ ಬಿಡುತ್ತದೆ. ಈ ಬ್ಯಾಕ್ಟೀರಿಯಾ ಉತ್ಪಾದಿಸುವ ವಿಷ ಪದಾರ್ಥಗಳು ರಕ್ತದಲ್ಲಿ ಬೆರೆತು ನಂಜಿಗೆ ಕಾರಣವಾಗಿ ಪಾರ್ಶ್ವವಾಯು, ಹೃದಯ ಉರಿಯೂತ ಮುಂತಾದವು ತಲೆದೋರಿ ಸಾವೂ ಸಂಭವಿಸ ಬಹುದು. ಈಗ ಈ ರೋಗ ಅಪರೂಪ. ಕಾರಣ ಈ ರೋಗದ ವಿರುದ್ಧ ಲಭ್ಯವಿರುವ ಪರಿಣಾಮಕಾರಿ ಲಸಿಕೆ. ಮಕ್ಕಳಿಗೆ ಕೊಡುವ ಡಿ.ಪಿ.ಟಿ ಲಸಿಕೆಯಲ್ಲಿ ಮೊದಲನೆಯದೇ ಡಿಫ್ತೀರಿಯ! ಪಿ ಎಂಬುದು ಪೆರ್ಟ್ಯೂಸಿಸ್ ಅಂದರೆ ನಾಯಿಕೆಮ್ಮಿಗೆ ರಕ್ಷಣೆ ಕೊಡುವುದು. ಟಿ ಎಂಬುದು ಟೆಟನಸ್ (ಧನುರ್ವಾಯು)ಗೆ ರಕ್ಷಣೆ ಕೊಡುತ್ತದೆ
diphtheria

ಗಂಟಲು
(ಪ್ರಾ) ಕಶೇರುಕದ ಕೊರಳಿನೊಳಗೆ ಇರುವ ಕುಹರ. ಧ್ವನಿಪೆಟ್ಟಿಗೆ ಮತ್ತು ಸಂಬಂಧಿತ ರಚನೆಗಳನ್ನು ಒಳಗೊಂಡಿರುವ ಭಾಗ. ಗೋಣು
throat

ಗಂಟು
(ಸ) ಸಸ್ಯಕಾಂಡದಲ್ಲಿಯ ಗೆಣ್ಣು. ಮರದ ಕಾಂಡದಲ್ಲಿ ರೆಂಬೆ ಹೊರಡುವ ಸ್ಥಳದಲ್ಲಿ ಆಗುವ ಗಳಲೆ; ಇದರಿಂದ ಮರದ ಆ ಭಾಗದ ಹಲಗೆಯಲ್ಲಿ ಕಾಣುವ ಅಡ್ಡ ಎಳೆಯ ಗುಂಡು ರಚನೆ
knot

ಗಂಟು
(ಸ) ಸಸ್ಯಗಳಲ್ಲಿ ಸಣ್ಣ ಉಬ್ಬು ಅಥವಾ ಗೆಡ್ಡೆ
tubercle


logo