logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಟಗರು
(ಪ್ರಾ) ಬೀಜ ಒಡೆದಿಲ್ಲದ ಗಂಡು ಕುರಿ
ram

ಟನ್
(ತಂ) ಬ್ರಿಟನ್ನಿನಲ್ಲಿ ಒಮ್ಮೆ ಬಳಕೆಯಲ್ಲಿದ್ದ ತೂಕದ ಒಂದು ಏಕಮಾನ. ೨೨೪೦ ಪೌಂಡ್‌ಗೆ ಅಥವಾ ೧೦೧೪.೦೪೭ ಕಿ.ಗ್ರಾಮ್‌ಗೆ ಸಮ. ಲಾಂಗ್‌ಟನ್ ಎಂಬ ಹೆಸರೂ ಉಂಟು. ಅಮೆರಿಕದಲ್ಲಿ ಬಳಕೆಯಲ್ಲಿರುವುದನ್ನು ಷಾರ್ಟ್ ಟನ್ ಎನ್ನಲಾಗುತ್ತದೆ. ಅದು ೨೦೦೦ ಪೌಂಡ್‌ಗೆ ಸಮ
ton

ಟನ್
(ತಂ) ಮೆಟ್ರಿಕ್‌ಟನ್. ೧೦೦೦ ಕಿ.ಗ್ರಾಂಗೆ ಸಮ
tonne

ಟಪೀಟಮ್
(ಪ್ರಾ) ರಾತ್ರಿಯಲ್ಲಿ ಹಾರಾಡುವ ಕೆಲವು ಕೀಟಗಳ ಕಣ್ಣುಗಳಲ್ಲಿಯ ಪ್ರತಿಫಲನ ರಚನೆ. ಅನೇಕ ನಿಶಾಚರಿ ಕಶೇರುಕಗಳ (ಸ್ತನಿಗಳ ಉದಾ. ಬೆಕ್ಕಿನ) ಕಣ್ಣಿನ ಕೊರಾಯ್ಡ್ ನಲ್ಲಿರುವ ಗ್ವಾನೀನ್ ಸ್ಫಟಿಕಯುಕ್ತ ಪ್ರತಿಫಲನ ಸ್ತರ. ಇದು ಬೆಳಕನ್ನು ಅಕ್ಷಿಪಟಕ್ಕೆ, ಹಿಂದಕ್ಕೆ, ಪ್ರತಿಫಲಿಸುತ್ತದೆ. ಇದರಿಂದ ದೃಷ್ಟಿ ಸುಧಾರಿಸುತ್ತದೆ ಮತ್ತು ಕಣ್ಣುಗಳು ಕತ್ತಲಲ್ಲಿ ಹೊಳೆಯುವಂತೆ ಆಗುತ್ತವೆ. (ಸ) ನಾಳ ಸಸ್ಯದ ಬೀಜಕ ಧಾನಿಯಲ್ಲಿ ಬೀಜಕ ಮಾತೃಕೋಶಗಳನ್ನು ಆವರಿಸಿಕೊಂಡಿರುವ ಕೋಶಗಳ ಪದರ
tapetum

ಟಪ್ಪೆ
(ತಂ) ನೋಡಿ: ರಿಲೇ
relay

ಟಫೇಟ
(ತಂ) ನವುರು ಎಳೆಗಳನ್ನು ಸರಳವಾಗಿ ನೇಯ್ದು ತಯಾರಿಸಿದ ಹಗುರ ವಸ್ತ್ರ. ಹೊಳೆಯುವ ಉತ್ತಮ ರೇಷ್ಮೆ ಅಥವಾ ರೇಷ್ಮೆಯಂಥ ಬಟ್ಟೆ
taffeta

ಟಫ್
(ಭೂವಿ) ಸಣ್ಣ ಚೂರು ಮತ್ತು ಸೂಕ್ಷ್ಮ ಕಣಗಳಿಂದ ಕೂಡಿದ ಜ್ವಾಲಾಮುಖಿ ದೂಳಿನಿಂದಾದ ದಟ್ಟ ಶಿಲೆ
tuff

ಟರ್ಕ್ವಾಯ್ಸ್
(ಭೂವಿ) ಅಲ್ಯೂಮಿನಿಯಮ್ ಹಾಗೂ ತಾಮ್ರದ ಜಲಯುಕ್ತ ಫಾಸ್ಪೇಟ್. ತ್ರಿನತೀಯ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುವ ದ್ವಿತೀಯಕ ಖನಿಜ. ವಿಶೇಷವಾಗಿ ಟ್ರ್ಯಾಕ್ಸೈಟ್ ಗಳಂಥ ಅಗ್ನಿಶಿಲೆಗಳ ಪರಿವರ್ತನಾ ವಲಯಗಳಲ್ಲಿ ಮೈದಳೆಯುತ್ತದೆ. ತಿಳಿನೀಲಿ, ನೀಲಿ ಮಿಶ್ರಿತ ಹಸುರು ಹಾಗೂ ಹಳದಿ ಮಿಶ್ರಿತ ಹಸುರು ಬಣ್ಣಗಳಲ್ಲಿ ಲಭ್ಯ. ಪ್ರಸಶ್ತ ರತ್ನ. CuAl6 (PO4)4 (OH)8 4H2O
turquoise

ಟರ್ನಿಪ್
(ಸ) ಕ್ರೂಸಫರೀ (ಬ್ರ್ಯಾಸಿಕೇಸಿ) ಕುಟುಂಬಕ್ಕೆ ಸೇರಿದ ತರಕಾರಿ ಗಿಡ. ಬ್ರ್ಯಾಸಿಕ ರೇಫ ಅಥವಾ ಬ್ರ್ಯಾಸಿಕ ಕ್ಯಾಂಪೆಸ್ಟ್ರಿಸ್ ವೈಜ್ಞಾನಿಕ ನಾಮ. ದ್ವಿವಾರ್ಷಿಕ ಮೂಲಿಕೆ. ಇಡೀ ಬೇರು ತರಕಾರಿಯಾಗಿ ಬಳಕೆ. ಇದರ ಬೇರಿನಲ್ಲಿ, ಎಲೆಗಳಲ್ಲಿ, ಬೀಜದಿಂದ ತೆಗೆದ ಎಣ್ಣೆಯಲ್ಲಿ ಔಷಧೀಯ ಗುಣಗಳುಂಟು
turnip

ಟರ್ಪೀನ್‌ಗಳು
(ರ) ಸಸ್ಯ ಪ್ರಪಂಚದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಪರಿಮಳ ವಸ್ತುಗಳು. ಸುಗಂಧ ತೈಲಗಳಲ್ಲಿ ಸರಳ ಟರ್ಪೀನ್‌ಗಳಿವೆ. ಬಾಷ್ಪಶೀಲ ವಸ್ತುವಾದ ಟರ್ಪೆಂಟೈನ್ ಎಣ್ಣೆ ಮತ್ತು ಘನವಸ್ತುವಾದ ಕರ್ಪೂರ ಟರ್ಪೀನ್‌ಗಳಿಗೆ ಉದಾಹರಣೆಗಳು. ಬಹುತೇಕ ಟರ್ಪೀನ್ ಹೈಡ್ರೊಕಾರ್ಬನ್‌ಗಳನ್ನು (C5H8)n ಎಂದು ನಿರೂಪಿಸುವುದುಂಟು
terpenes


logo