logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಬಕ
(ಪ್ರಾ) ಸಿಕೋನೈಯಿಫಾರ್ಮೀಸ್ ಗಣ, ಸಿಕೋನೈಯಿಡೀ ಕುಟುಂಬಕ್ಕೆ ಸೇರಿದ ಪಕ್ಷಿ. ಅಗಲ ರೆಕ್ಕೆಗಳು ನೀಳ ಕತ್ತು. ಉದ್ದ ಕೊಕ್ಕು, ಕಾಲು ಇರುವುದು ಇದರ ಲಕ್ಷಣಗಳು. ಕೊಕ್ಕರೆ, ಬೆಳ್ಳಕ್ಕಿ, ಕಂಚುಗಾರ
stork

ಬಕಪಾತ್ರೆ
(ರ) ದ್ರವಗಳನ್ನು ಬಟ್ಟಿ ಇಳಿಸುವ ಉದ್ದೇಶದಿಂದ ಬಳಸುವ, ಸಾಮಾನ್ಯವಾಗಿ ಗಾಜಿ ನಿಂದ ತಯಾರಿಸಿದ ಪಾತ್ರೆ. ಇದು ಬಾಗಿದ ಉದ್ದವಾದ ಕತ್ತಿನಿಂದ ಕೂಡಿರುತ್ತದೆ. ರೆಟಾರ್ಟ್. ಬಟ್ಟಿಪಾತ್ರೆ
retort

ಬಂಕರ್
(ಸಾ) ೧. ಹಡಗಿನಲ್ಲಿ ಕಲ್ಲಿದ್ದಲ ಅಥವಾ ಇಂಧನದ ತೊಟ್ಟಿ. ತೈಲ ದಾಸ್ತಾನಿಡುವ ನೆಲೆ, ೨. ರಕ್ಷಣೆಗಾಗಿ ಸೈನಿಕರು ತೋಡುವ ನೆಲಗೂಡು
bunker

ಬಕಲ್
(ಸಾ) ಸೊಂಟಪಟ್ಟಿಯನ್ನು ಬಿಗಿಹಿಡಿದು ನಿಲ್ಲಿಸಲು ನೆರವಾಗುವ ಲೋಹ ಕೊಕ್ಕೆ. ಚಿಲುಕು ಕಟ್ಟು. ಜಗ್ಗಿಸು. ಬಗ್ಗಿಸು
buckle

ಬಕೆಟ್
(ಸಾ) ನೀರೆತ್ತಲು ಬಳಸುವ ಹಿಡಿಪಾತ್ರೆ
bucket

ಬಕ್ಕತಲೆ
(ವೈ) ತಲೆಯಿಂದ ಕೂದಲು ಉದುರಿ ಹೋಗಿರುವುದು. ಪಟ್ಟತಲೆ, ಬೋಳು ತಲೆ
alopecia

ಬಖೈರು
(ಸಾ) ಕಾಲಾನುಕ್ರಮ ದಾಖಲೆ. ಚಾರಿತ್ರಿಕ ಮಾಹಿತಿಗಳ ವ್ಯವಸ್ಥಿತ ಯಾದಿ. ವರದಿ
chronicle

ಬಗಸೆ
(ಸ) ಕಬ್ಬು ಅರೆದು ರಸಹಿಂಡಿದ ನಂತರ ಉಳಿವ ಚರಟ. ಕಬ್ಬಿನ ಹಿಪ್ಪೆ
bagasse

ಬಂಗಾರದ ಅಕ್ಕಿ
(ಜೈತಂ) ತಳಿ ತಂತ್ರಜ್ಞಾನ ಬಳಸಿ ಮಾರ್ಪಡಿಸಿದ ಅಕ್ಕಿ. ಇದರ ಎಂಡೋಸ್ಪರ್ಮ್‌ನಲ್ಲಿ ಬೀಟ- ಕ್ಯಾರೊಟಿನ್ ಮತ್ತು ಕಬ್ಬಿಣ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ, ಅಕ್ಕಿಗೆ ಹೊಂಬಣ್ಣ ನೀಡುತ್ತವೆ. ಸೇವಿಸಿದಾಗ ಬೀಟ- ಕ್ಯಾರೊಟಿನ್ ದೇಹದಲ್ಲಿ ವೈಟಮಿನ್-ಎ ಆಗಿ ಪರಿವರ್ತನೆ ಗೊಳ್ಳುತ್ತದೆ. ವಿಕಾಸಶೀಲ ದೇಶಗಳಲ್ಲಿ ವೈಟಮಿನ್-ಎ ಕೊರತೆ ಇರುವವರಿಗೆ ಇದು ಉಪಯುಕ್ತ ಎಂದು ಭಾವಿಸಲಾಗಿದ್ದರೂ ವಿವಾದಾತ್ಮಕವಾಗಿಯೇ ಇದೆ
golden rice

ಬಂಗುಡೆ
(ಪ್ರಾ) ಸ್ಕಾಂಬ್ರಿಡೀ ಕುಟುಂಬಕ್ಕೆ ಸೇರಿದ ಕಡಲ ಮೀನು. ರಾಸ್ಟ್ರೆಲ್ಲಿಜರ್ ಕನಗುರ್ತ ವೈಜ್ಞಾನಿಕ ನಾಮ. ಭಾರತದ ಪಶ್ಚಿಮ ಕರಾವಳಿಯಲ್ಲಿ ಹೆಚ್ಚು ಲಭ್ಯ. ಬೇಸಗೆಯಲ್ಲಿ ಮೊಟ್ಟೆ ಇಡಲೋಸುಗ ತಂಡೋಪತಂಡವಾಗಿ ಕೆರೆಗಳಿಗೆ ಬರುತ್ತವೆ. ಆಹಾರವಾಗಿ ಬಳಕೆ
mackerel


logo