logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಡಯಟೋನಿಕ್ ಸ್ವರಗ್ರಾಮ
(ಭೌ) ಸ್ವರಗ್ರಾಮವನ್ನು ಅಥವಾ ಸ್ವರಾಷ್ಟಕವನ್ನು ಅನುಕೂಲತೆಯ ಸಲುವಾಗಿ ಎರಡು ವಿಭಿನ್ನ ಸ್ವರಗುಂಪುಗಳಾಗಿ ವಿಭಾಗಿಸುವುದು
diatonic scale

ಡಯಥೆರ್ಮಿ
(ವೈ) ಉಚ್ಚ ಆವೃತ್ತಿಯ ವಿದ್ಯುತ್ ಪ್ರವಾಹವನ್ನು ಹಾಯಿಸಿ ದೇಹದ ಊತಕಗಳನ್ನು ಕಾಸಿ ನೀಡುವ ವೈದ್ಯಕೀಯ ಚಿಕಿತ್ಸಾ ವಿಧಾನ. ಭೌತಚಿಕಿತ್ಸೆ ನೀಡುವಾಗ ಈ ವಿಧಾನ ದಿಂದ ಚರ್ಮದಡಿಯ ಮಾಂಸಖಂಡಗಳನ್ನೂ ಕೀಲುಗಳನ್ನೂ ಕಾಸ ಲಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸುವಾಗ ಈ ವಿಧಾನವನ್ನು ಸ್ಥಳೀಯವಾಗಿ ಅನ್ವಯಿಸುವ ಮೂಲಕ ರಕ್ತ ಗರಣೆ ಕಟ್ಟುವಂತೆ, ಊತಕ ನಶಿಸುವಂತೆ (ನೆಕ್ರೋಸಿಸ್) ಮಾಡಲಾಗುತ್ತದೆ. ವಿದ್ಯುದುಷ್ಣ ಚಿಕಿತ್ಸೆ. ತೂರುಗಾವು
diathermy

ಡಯಲ್ಲೇಜ್
(ಭೂವಿ) ಗ್ಯಾಬ್ರೊ ಮುಂತಾದ ಪ್ರತ್ಯಾಮ್ಲೀಯ ಅಗ್ನಿಶಿಲೆಗಳಲ್ಲಿರುವ ಮಾನೊಕ್ಲೈನ್ ಗಣದ ಪರಿವರ್ತಿತ ಪೈರಾಕ್ಸೀನ್ ಖನಿಜ. ರಾಸಾಯನಿಕವಾಗಿ ಅಗೈಟ್/ಡಯಾಪ್ಸೈಡನ್ನು ಹೋಲುತ್ತದೆ
diallage

ಡಯಸ್ಟೇಸ್
(ರ) ಪಿಷ್ಟವನ್ನು ಶರ್ಕರವಾಗಿ ಮಾರ್ಪಡಿಸುವ ಕಿಣ್ವ. ಪಿಷ್ಟವನ್ನು ಜಲವಿಭಜಿಸಿ ಡೆಕ್‌ಸ್ಟ್ರಾನ್ ಮತ್ತು ಮಾಲ್ಟೋಸ್ ಗಳಾಗಿ ಪರಿವರ್ತಿಸಬಲ್ಲ ಕಿಣ್ವ
diastase

ಡಯಾಕಾಂತೀಯತೆ
(ಭೌ) ಕಾಂತೀಯ ಪ್ರವೃತ್ತಿ ತುಸು ನಿಷೇಧಾತ್ಮಕವಾಗಿರುವ ಪದಾರ್ಥದ ಗುಣ. ಅಂದರೆ, ಈ ಪದಾರ್ಥವು ಅದನ್ನು ಕಾಂತೀಕರಿಸುವ ಬಲವನ್ನು ವಿರೋಧಿಸುತ್ತದೆ. ಅದರ ಕಾಂತೀಯ ಪಾರಕತೆ ನಿರ್ದ್ರವ್ಯತೆಯ ಕಾಂತೀಯ ಪಾರಕತೆಗಿಂತ ಕಡಿಮೆ ಇರುತ್ತದೆ. ಪಾರಕಾಂತೀಯತೆ
diamagnetism

ಡಯಾಪ್ಟರ್
(ಭೌ) ಮಸೂರದ ಇಲ್ಲವೇ ಪಟ್ಟಕದ ಸಾಮರ್ಥ್ಯ ಮಾನ. ಪ್ರತೀಕ d. ಇದರ ಬೆಲೆ ಮೀಟರ್‌ಗಳಲ್ಲಿ ಅಳೆದಂತೆ, ನಾಭೀದೂರದ ವ್ಯುತ್ಕ್ರಮ. ಉದಾಹರಣೆ : ನಾಭೀ ದೂರ ೦.೫ ಮೀಟರ್ ಇರುವ ಮಸೂರದ ಸಾಮರ್ಥ್ಯ ೧/೦.೫=೨. ಅಭಿಸರಣ ಮಸೂರದ ಸಾಮರ್ಥ್ಯವನ್ನು ಸಾಧಾರಣವಾಗಿ ಧನಾತ್ಮಕವೆಂದೂ ಅಪಸರಣ ಮಸೂರದ್ದನ್ನು ಋಣಾತ್ಮಕವೆಂದೂ ಭಾವಿಸುವುದು ವಾಡಿಕೆ
dioptre

ಡಯಾಫಿಸಿಸ್
(ಸ) ಹೂಗೊಂಚಲಿನ ಪ್ರಧಾನ ಕಾಂಡದ ಅಪಸಾಮಾನ್ಯ ದೀರ್ಘ ಬೆಳವಣಿಗೆ. (ಪ್ರಾ) ಅಂಗವೊಂದರ ಉದ್ದವಾದ ಮೂಳೆಯ ಮಧ್ಯಭಾಗ. ಅಸ್ಥಿಕಾಂಡ
diaphysis

ಡಯಾಬೇಸ್
(ಭೂವಿ) ಡಾಲೆರೈಟ್ ಶಿಲೆಗೆ ಅಮೆರಿಕನ್ ಹೆಸರು. ನೋಡಿ: ಡಾಲೆರೈಟ್
diabase

ಡಯಾಶ್ಚಿಸ್ಟಿಕ್
(ಭೂವಿ) ಒಂದೇ ತಪ್ತ ದ್ರವರಾಶಿಯಿಂದ ದೊರೆತ ಎರಡು ವಿಭಿನ್ನ ಅಗ್ನಿಶಿಲೆಗಳಿಗೆ ಸಂಬಂಧಿಸಿದ
diaschistic

ಡಯೊರೈಟ್
(ಭೂವಿ) ಕಣೀಯ ಒಳರಚನೆ ಇದ್ದು ಅಧಿಕ ಪ್ರಮಾಣದಲ್ಲಿ ಪ್ಲೇಜಿಯೋಕ್ಲೇಸ್ ಫೆಲ್ಡ್‌ಸ್ಪಾರ್‌ನಿಂದಲೂ ಅಲ್ಪ ಪ್ರಮಾಣಗಳಲ್ಲಿ ಕಪ್ಪುಬಣ್ಣದ ಖನಿಜಗಳಿಂದಲೂ ರೂಪುಗೊಂಡ ಮತ್ತು ಕಣಪೂರ್ಣ ಸುಲಭವಾಗಿ ಗೋಚರಿಸುವ ಪ್ಲೂಟಾನಿಕ್ ಶಿಲೆ
diorite


logo