logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಂಕ
(ಗ) ಸಂಖ್ಯೆಯನ್ನು ವ್ಯಕ್ತಪಡಿಸಲು ಬಳಸುವ ಪ್ರತೀಕ. ಉದಾ: ೪೭೯ ಸಂಖ್ಯೆಯಲ್ಲಿ ಮೂರು ಅಂಕಗಳಿವೆ. ೦ಯಿಂದ ೯ರ ಒಳಗಿನ ಅಂಕಗಳಲ್ಲಿ ಒಂದು. ಅಂಕೆ. ಅಂಕಿ
digit

ಅಂಕಗಣಿತ
(ಗ) ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಹಾರ. ಮೂಲಗಳ ಶೋಧನೆ ಮುಂತಾದ ಪರಿಕರ್ಮಗಳನ್ನು ಸಂಖ್ಯೆಗಳೊಂದಿಗೆ ನಡೆಸುವ ಗಣಿತ ವಿಭಾಗ
arithmetic

ಅಂಕಗಣಿತದ ಮೂಲಭೂತ ಪ್ರಮೇಯ
(ಗ) ೧ಕ್ಕಿಂತ ಅಧಿಕವಾಗಿರುವ ಯಾವುದೇ ಧನ ಪೂರ್ಣಾಂಕವನ್ನು ಅವಿಭಾಜ್ಯಗಳ ಗುಣ ಲಬ್ಧವಾಗಿ ನಿರೂಪಿಸಬಹುದು. ಅಪವರ್ತನಗಳ ಅನುಕ್ರಮದ ಹೊರತಾಗಿ ಈ ನಿರೂಪಣೆ ಏಕೈಕ. ಇದು ಯೂಕ್ಲಿಡ್ಡನ ಕೊಡುಗೆ. ಉದಾ: 21=3x7, 165 = 3x5x11
fundamental theorem of arithmetic

ಅಕಂಡ್ರೈಟ್
(ಭೂವಿ) ಒಂದು ಬಗೆಯ ಶಿಲಾಸದೃಶ ಕಾಂಡ್ರ್ಯೂಲ್‌ರಹಿತ ಉಲ್ಕಾಪಿಂಡ
achondrite

ಅಂಕನ
(ಗ) ಪರಿಮಾಣ, ಪರಿಕರ್ಮ ಮುಂತಾದವನ್ನು ಸೂಚಿಸಲು ಬಳಸುವ ಪ್ರತೀಕಗಳ ಸಮುಚ್ಚಯ. ಉದಾ: 1+x+x2+...+xn+... ಇಲ್ಲಿಯ ಚುಕ್ಕಿಗಳು ಮುಂದುವರಿಕೆಯ ಅಂಕನ. 1.2.3...n = n! ಇಲ್ಲಿ ! ಅಂಕನ ೧ರಿಂದ nವರೆಗಿನ ಕ್ರಮ ಗುಣಲಬ್ಧವನ್ನು ಸೂಚಿಸುವುದು. n!ನ್ನು ಕ್ರಮ ಗುಣಲಬ್ಧ n ಎಂದು ಓದಬೇಕು
notation

ಅಂಕನಮಾನ
(ಗ) ಈಗಿನ ದಶಮಾಂಶ ಪದ್ಧತಿ ಬರುವುದಕ್ಕೆ ಮುನ್ನ ಜಗತ್ತಿನ ನಾನಾ ದೇಶಗಳಲ್ಲಿ ಬಳಕೆಯಲ್ಲಿದ್ದ ಎಣಿಕೆ ಕ್ರಮಗಳು. ಜೋಡಿ-ಜೋಡಿಗಳಲ್ಲಿ ಮತ್ತು ಹತ್ತು ಹತ್ತುಗಳಲ್ಲಿ ಎಣಿಸುವ ಕ್ರಮಗಳು ಅತಿ ಪ್ರಾಚೀನ. ಉದಾ: ಎರಡನ್ನು ಒಂದು ಜೋಡಿ ಎಂದು ಪರಿಗಣಿಸಿ ಐದನ್ನು ಎರಡು ಜೋಡಿ ಮತ್ತು ಒಂದು ಎಂದು ಕರೆಯುವುದು ಒಂದು ಕ್ರಮ. ಅದೇ ರೀತಿ ಹತ್ತನ್ನು ಒಂದು ಮಾನವಾಗಿಟ್ಟುಕೊಳ್ಳುವುದು ಮತ್ತೊಂದು ಕ್ರಮ. ಮೊಹೆಂಜೊದಾರೋ ಶಾಸನಗಳಲ್ಲಿ (ಕ್ರಿ.ಪೂ. ೩೪೦೦) ವಿಭಿನ್ನ ಅಂಕನಮಾನಗಳು ಕಾಣಬರುತ್ತವೆ. ಯುಕೆಟಾನ್‌ನ (ದ. ಅಮೆರಿಕ) ಮಾಯಾ ಜನರು, ರೋಮನ್ನರು ಬೇರೆ ಬೇರೆ ಅಂಕನಮಾನಗಳನ್ನು ಬಳಸಿದ್ದಾರೆ
scale of notation

ಅಕಶೇರುಕ
(ಪ್ರಾ) ಬೆನ್ನು ಮೂಳೆ ಇಲ್ಲದ ಪ್ರಾಣಿ
invertebrate

ಅಂಕಾತ್ಮಕ ಗಡಿಯಾರ
(ತಂ) ನೋಡಿ : ಡಿಜಿಟಲ್ ಗಡಿಯಾರ
digital clock

ಅಂಕಾತ್ಮಕ ಗಣಕ
(ತಂ) ನೋಡಿ: ಡಿಜಿಟಲ್ ಕಂಪ್ಯೂಟರ್
digital computer

ಅಕಾಲ ಪ್ರಸವ
(ವೈ) ಗರ್ಭಾಶಯದಲ್ಲಿ ಶಿಶು ಪೂರ್ಣವಾಗಿ ಅಭಿವರ್ಧನೆಗೊಳ್ಳುವ ಅವಧಿಗೆ ಮುನ್ನವೇ (ಗರ್ಭಧಾರಣೆಯಾಗಿ ೩೫ ವಾರಗಳಿಗೂ ಮುನ್ನವೇ) ಸಂಭವಿಸುವ ಪ್ರಸವ. ಪ್ರಾಪ್ತಕಾಲಪೂರ್ವ ಜನನ
premature birth


logo