logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಲಕ್ಷಣ
(ಜೀ) ಪೀಳಿಗೆಯಿಂದ ಪೀಳಿಗೆಗೆ ಆನುವಂಶಿಕವಾಗಿ ಹರಿಯುವ ಮತ್ತು ಸ್ಪಷ್ಟವಾಗಿ ಗುರುತಿಸಲಾಗುವ ಗುಣ ವಿಶೇಷ
character

ಲಕ್ಷಣ
(ವೈ) ವ್ಯಾಧಿಯ/ಅನಾರೋಗ್ಯದ ಕಾರಣವಾಗಿ ರೋಗಿಯ ಅನುಭವಕ್ಕೆ ಬರುವ ವೇದನೆ, ದೌರ್ಬಲ್ಯ, ತಲೆಸುತ್ತುವಿಕೆ ಇತ್ಯಾದಿ. ರೋಗಲಕ್ಷಣ
symptom

ಲಕ್ಷಣಾಧಾರಿತ ಚಿಕಿತ್ಸೆ
(ವೈ) ರೋಗ ಚಿಹ್ನೆಗಳ ವಿಶ್ಲೇಷಣೆಯಿಂದ ರೋಗವನ್ನು ಪತ್ತೆ ಹಚ್ಚಿ ಅದಕ್ಕೆ ಯುಕ್ತ ಚಿಕಿತ್ಸೆ ನೀಡುವ ಕ್ರಮ
symptomatic treatment

ಲಕ್ಷಣಾವಳಿ
(ವೈ) ರೋಗ ವೈಶಿಷ್ಟ್ಯವನ್ನು ಪ್ರಕಟಿಸುವ ಆದರೆ ಸ್ವತಃ ರೋಗವಲ್ಲದ ಹಲವಾರು ಚಿಹ್ನೆಗಳ ಅಥವಾ ಸೂಚನೆಗಳ ಸಮಷ್ಟಿ
syndrome

ಲಕ್ಷ್ಯ
(ತಂ) ಪರಮಾಣವಿಕ ಕಿರಣಗಳು ಅಥವಾ ಕಣಗಳು (ಆಲ್ಫ ಕಣಗಳು, ಪ್ರೋಟಾನ್‌ಗಳು, ಎಲೆಕ್ಟ್ರಾನ್‌ಗಳು ಇತ್ಯಾದಿ) ಸಂತತವಾಗಿ ಬಂದು ಬಡಿಯುವ ಯಾವುದೇ ಎಲೆಕ್ಟ್ರೋಡ್ ಅಥವಾ ತಲ. ಉದಾ : ಕ್ಯಾಥೋಡ್ ಕಿರಣ ನಾಳದಲ್ಲಿ ಅಥವಾ ಎಕ್ಸ್- ಕಿರಣನಾಳದಲ್ಲಿ ಈ ಲಕ್ಷ್ಯ (ಟಾರ್ಗೆಟ್)ಲೋಹದ ಒಂದು ಫಲಕ
target

ಲಕ್ಸ್
(ಭೌ) ಎಸ್‌ಐ (ಸಿಸ್ಟಮ್ ಇಂಟರ್‌ನ್ಯಾಷನಲ್) ಪದ್ಧತಿಯಲ್ಲಿ ದೀಪನ/ಪ್ರದೀಪ್ತಿಯ ಏಕಮಾನ. ಚದರ ಮೀಟರಿಗೆ ೧ ಲೂಮೆನ್. ಸಂಕ್ಷಿಪ್ತ lx
lux

ಲಂಗರು
(ತಂ) ಹಡಗು ಅಥವಾ ದೋಣಿ ನೀರಿನಲ್ಲಿ ತೇಲುತ್ತಿರುವಾಗಲೇ ಒಂದೆಡೆ ನಿಂತಿರುವಂತೆ ಮಾಡಲು ಅದರಿಂದ ನೆಲ ಕಚ್ಚುವವರೆಗೂ ಇಳಿಬಿಟ್ಟ ಭಾರದ ಸಲಕರಣೆ. ಬೀಳ್ಗುಂಡು
anchor

ಲಗೂನ್
(ಭೂವಿ) ತಗ್ಗಾದ ಮರಳುದಂಡೆ, ಹವಳದ ದಿಬ್ಬ ಮೊದಲಾದವುಗಳ ಮೂಲಕ ಸಮುದ್ರದಿಂದ ಬೇರ್ಪಡಿಸಿದ ಉಪ್ಪು ನೀರಿನ ಹರವು; ಸಮದ್ರದಲ್ಲಿ ಹವಳದ ದಿಬ್ಬ ಸುತ್ತುವರಿದಿರುವ ಜಲಭಾಗ. ಆವೃತ ಜಲಭಾಗ
lagoon

ಲಘು ಗಣಕ
(ಗ) ನೋಡಿ: ಲಾಗರಿತಮ್
logarithm

ಲಘುಕೋನ
(ಗ) ೯೦0ಗಿಂತ ಕಡಿಮೆ ಇರುವ ಕೋನ
acute angle


logo