logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಕ್ಷಿಪಟ
(ಪ್ರಾ) ಸಕಲ ಪ್ರಾಣಿಗಳಲ್ಲೂ ಇರುವ ಕಣ್ಣಿನ ದ್ಯುತಿಸಂವೇದಕ ಪದರ. ಮಾನವ ಅಕ್ಷಿಪಟದಲ್ಲಿ ಎರಡು ಬಗೆಯ-ಸರಳು ಮತ್ತು ಶಂಕು-ಸಂವೇದಕ ಘಟಕಗಳಿವೆ (ವೈ) ಇದು ವಾಸ್ತವದಲ್ಲಿ ಪಟವಲ್ಲ. ನರಕೋಶಗಳ ಜಾಲ. ಕಣ್ಣುಗುಡ್ಡೆಯ ಹಿಂಭಾಗದಲ್ಲಿ ಇರುತ್ತದೆ. ಅಕ್ಷಿಪಟದಲ್ಲಿ ನರಕೋಶ ಗಳು ೧೦ ಸ್ತರಗಳಲ್ಲಿ ಜೋಡಣೆಗೊಂಡಿರುತ್ತವೆ. ಎರಡನೆಯ ಸ್ತರದಲ್ಲಿ ಬೆಳಕಿಗೆ ಸಂವೇದನೆ ತೋರುವ ಸರಳು ಹಾಗೂ ಶಂಕು ಕೋಶಗಳಿರುತ್ತವೆ. ಇವು ಬೆಳಕಿನ ರೂಪದಲ್ಲಿ ಬರುವ ಮಾಹಿತಿಯನ್ನು ವಿದ್ಯುದಾವೇಗಗಳನ್ನಾಗಿ ಪರಿವರ್ತಿಸಿ ಅಕ್ಷಿನರದ ಮೂಲಕ ಮಿದುಳಿನ ದೃಷ್ಟಿ ಕ್ಷೇತ್ರಕ್ಕೆ ರವಾನಿಸಿ ನೋಟದ ಅರ್ಥವನ್ನು ತಿಳಿಯಲು ನೆರವಾಗುತ್ತವೆ. ಅಕ್ಷಿಜಾಲ. ರೆಟಿನ
retina

ಅಕ್ಷಿಸ್ನಾಯುವಾತ
(ವೈ) ಕಣ್ಣುಗುಡ್ಡೆಯನ್ನು ಚಲಿಸಲು ನೆರವಾಗುವ ಸ್ನಾಯುಗಳಿಗೆ ತಗುಲಿದ ಲಕ್ವಾ. ತತ್ಸಂಬಂಧ ನರಗಳು ಕ್ರಿಯಾಹೀನವಾಗುವುದೇ ಈ ಲಕ್ವಕ್ಕೆ ಕಾರಣ
ophthalmoplegia

ಅಕ್ಷೀಯ
(ಸಾ) ಅಕ್ಷಕ್ಕೆ ಸಂಬಂಧಿಸಿದ
axial

ಅಖಂಡನೀಯ
(ರ) ಅಣುವನ್ನು ರಾಸಾಯನಿಕವಾಗಿ ವಿಚ್ಛಿದ್ರಗೊಳಿಸಲಾಗದ ಸ್ಥಿತಿ. (ವೈ) ಅಪರಿವರ್ತನೀಯ. ದೇಹದಲ್ಲಿ ಯಾವುದಾದರೂ ಒಂದು ಭಾಗ ಸ್ಥಾನಪಲ್ಲಟವಾಗಿದ್ದು, ಅದನ್ನು ಮೊದಲಿನ ಸ್ಥಿತಿಗೆ ತರಲಾಗದ ಸ್ಥಿತಿ. ಉದಾ : ಮುರಿದ ಕೆಲವು ಮೂಳೆ, ತಪ್ಪಿದ ಕೀಲು ಇತ್ಯಾದಿ
irreducible

ಅಗತ್ಯ ಧಾತು
(ಜೀ) ಯಾವುದೇ ಜೀವಿಯ ಅಭಿವರ್ಧನೆ ಪುನರುತ್ಪಾದನೆಗಳಿಗೆ ಅವಶ್ಯವಾದ ಧಾತು. ಈ ಧಾತುವಿನ ಸ್ಥಳವನ್ನು ಮತ್ತೊಂದು ಧಾತು ಪಡೆಯಲಾರದು
essential elements

ಅಗಲ ತಂತುಕಟ್ಟು
(ವೈ) ಗರ್ಭಾಶಯದ ಬದಿಗಳಿಂದ ವಸ್ತಿ ಕುಹರದ ಬದಿಗಳಿಗೆ ವ್ಯಾಪಿಸಿರುವ ಎರಡು ಪಟ್ಟಿಗಳ ಪೈಕಿ ಒಂದು
broad ligament

ಅಗಸೆ
(ಸ) ಪ್ಯಾಪಿಲಿಯೊನೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಇದರ ಎಲೆ, ಹೂ, ಕಾಯಿಯನ್ನು ಅಡುಗೆಗೂ, ತೊಗಟೆ ಹಾಗೂ ಎಲೆಯನ್ನು ಔಷಧಕ್ಕೂ ಉಪಯೋಗಿಸುತ್ತಾರೆ
sesbania

ಅಗಸೆ ಎಣ್ಣೆ
(ಸ) ನಾರಗಸೆಯ ಬೀಜದಿಂದ ತೆಗೆದ ಎಣ್ಣೆ. ಇದರಲ್ಲಿ ಒಲಿಯಿಕ್ ಮತ್ತಿತರ ಅಪರ್ಯಾಪ್ತ ಆಮ್ಲಗಳ ಘನ ಹಾಗೂ ದ್ರವ ಗ್ಲಿಸರೈಡುಗಳಿರುತ್ತವೆ. ಇದರ ಅಯೊಡೀನ್
linseed oil

ಅಗಸೆನಾರು
(ಸ) ಲೈನೇಸೀ ಕುಟುಂಬ, ಲೈನಮ್ ಯುಸಿಟಾಟಿಸಿ ಮಮ್ ಜಾತಿಗೆ ಸೇರಿದ, ಸಮಶೀತೋಷ್ಣವಲಯದಲ್ಲಿ ನಾರಿಗಾಗಿ ಬೆಳೆಯುವ ಸಸ್ಯ. ಇದರ ಬೀಜದಿಂದ (ಲೀನ್‌ಸೀಡ್) ಎಣ್ಣೆ ತೆಗೆಯುತ್ತಾರೆ. ಹಿಂಡಿ ಮೇವಾಗಿ ಉಪಯುಕ್ತ. ನಾರಗಸೆ
flax

ಅಗಾಧ
(ಭೂವಿ) ಸುಮಾರು ೪,೦೦೦-೬,೦೦೦ ಮೀ. ಆಳದಲ್ಲಿ ಸಾಗರತಲ ಪರಿಸರ ಕುರಿತ. ನೋಡಿ: ತೀರಾವಳಿ (ಸುಮಾರು ೨೦೦ ಮೀ. ಆಳ), ಗಭೀರ (ಸುಮಾರು ೨೦೦-೪೦೦೦ ಮೀ. ಆಳ)
abyssal


logo