logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಗಾಧ ನಿಕ್ಷೇಪಗಳು
(ಭೂವಿ) ಸಾಗರದಲ್ಲಿ ೨೦೦೦ ಮೀ.ಗಿಂತಲೂ ಹೆಚ್ಚಿನ ಆಳಗಳಲ್ಲಿ ಕ್ರಮೇಣ ಮೈದಳೆಯುವ ಅವಸಾದನ ನಿಕ್ಷೇಪಗಳು
abyssal deposits

ಅಗಾರಿಕ್
(ಸ) ಕೊಡೆಯಂಥ ಅಗ್ರಭಾಗ ಮತ್ತು ಅದರ ಕೆಳ ಮೈಯಲ್ಲಿ ಕಿವಿರುಗಳು ಇರುವ ಶಿಲೀಂಧ್ರಗಳ ಪೈಕಿ ಯಾವುದೇ ಒಂದು. ಉದಾ: ನಾಯಿಕೊಡೆ, ಅಣಬೆ
agaric

ಅಗೂಟೀ
(ಪ್ರಾ) ಇದು ರಾಡೆನ್ಷಿಯ ವರ್ಗದ ಕೇವಿಡೀ ಎಂಬ ಮೂಷಿಕ ಕುಟುಂಬಕ್ಕೆ ಸೇರಿದ ಮೊಲ ಗಾತ್ರದ ಸ್ತನಿ. ಟ್ರಿನಿಡಾಡ್ ಮತ್ತು ಗಿನಿ ಪ್ರದೇಶ ವಾಸಿ. ನಿಶಾಚರಿ. ಗಿಡಗಳ ಬೇರು, ಎಲೆ ಕಾಯಿ ಇದರ ಆಹಾರ
agouti

ಅಗೇಟ್
(ಭೂವಿ) ಕ್ವಾರ್ಟ್ಸ್‌ನ ಒಂದು ರೂಪ. ಒಂದು ಅರೆರತ್ನ ಖನಿಜ. ನೋಡಿ : ಓರಿಯಂಟಲ್ ಅಗೇಟ್
agate

ಅಗ್ನಿಮಾಂದ್ಯ
(ವೈ) ಆಹಾರ ಸರಿಯಾಗಿ ಜೀರ್ಣವಾಗದ ಸ್ಥಿತಿ. ಅಜೀರ್ಣ ವ್ಯಾಧಿ
dyspepsia

ಅಗ್ನಿಶಾಮಕಗಳು
(ತಂ) ಬೆಂಕಿಯ ಮೂಲಕ್ಕೆ ಅನುಗುಣವಾಗಿ ಶಾಮಕದ ಬಳಕೆ. ‘ಎ’ ವರ್ಗದ ಬೆಂಕಿಯಾದರೆ (ಕಾಗದ ಮರ ಮುಂತಾದ ಘನ ದಹ್ಯಗಳಿಂದ ಆದುದು) ಒತ್ತಡ ದಲ್ಲಿರುವ ನೀರು, ಸೋಡಿಯಮ್ ಬೈ ಕಾರ್ಬೊನೇಟ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ವರ್ತನೆಯಿಂದ ಉತ್ಪಾದಿಸಿದ ಕಾರ್ಬನ್ ಡೈ ಆಕ್ಸೈಡ್ ಅಥವಾ ಬ್ರೋಮೊ ಫ್ಲೂರೋಕ್ಲೋರೈಡ್ ಮೀಥೇನ್ ನಂಥ (ಬಿ.ಸಿ.ಎಫ್.) ಹ್ಯಾಲೊಜನೀಕೃತ ಹೈಡ್ರೊಕಾರ್ಬನ್ ಗಳನ್ನು ಸಿಂಪಡಿಸುವುದು ವಾಡಿಕೆ. ‘ಬಿ’ ವರ್ಗದ ಬೆಂಕಿಯಾದರೆ (ಪೆಟ್ರೋಲ್‌ನಂಥ ದಹನಶೀಲ ದ್ರವಗಳಿಂದಾದುದು) ಅದನ್ನು ಆರಿಸಲು ಅಲ್ಯೂಮಿನಿಯಮ್ ಸಲ್ಫೇಟ್ ಮತ್ತು ಸೋಡಿಯಮ್ ಬೈ ಕಾರ್ಬೊನೇಟ್ ದ್ರಾವಣಗಳ ವರ್ತನೆಯಿಂದ ಹುಟ್ಟಿದ ಕಾರ್ಬನ್ ಡೈ ಆಕ್ಸೈಡ್‌ನ ನೊರೆ ಪ್ರಶಸ್ತ
fire extinguishers

ಅಗ್ನಿಶಿಲೆ
(ಭೂವಿ) ಮ್ಯಾಗ್ಮದ, ಅಂದರೆ ಘನೀಭವಿಸುವ ಮುನ್ನಿನ ಶಿಲಾದ್ರವದ, ಉಷ್ಣವು ನಷ್ಟವಾದಂತೆ ಅದು ಹೆಪ್ಪುಗಟ್ಟಿ ಅಕ್ಕಪಕ್ಕದ ಸಂಸ್ತರಗಳ ಒತ್ತಡ ದಿಂದ ಮೈದಳೆದ ಶಿಲೆ. ಭೂಮಿಯಲ್ಲಿರುವ ಇತರ ಎರಡು ವಿಧದ ಶಿಲೆಗಳೆಂದರೆ ಜಲಜ ಅಥವಾ ಅವಸಾದನ ಶಿಲೆ, ರೂಪಾಂತರಿತ ಶಿಲೆ. ನೋಡಿ : ರೂಪಾಂತರಿತ ಶಿಲೆ, ಜಲಜ ಅಥವಾ ಅವಸಾದನ ಶಿಲೆ
igneous rock

ಅಗ್ರ
(ಜೀ) ಸಹಪತ್ರದ ಮುಂದಿನ ಪುಷ್ಪ ಪಾರ್ಶ್ವ. ಚರಜೀವಿ ಚಲಿಸುವಾಗ ಅದರ ದೇಹದ ಮೊದಲ ಭಾಗ. ಕಪಾಲೀಕರಣವಾಗುವ ಪ್ರಾಣಿಗಳಲ್ಲಿ ಮುಂಭಾಗದ ಹತ್ತಿರವಿರುವ ಅಥವಾ ಅನುದೀರ್ಘಾಕ್ಷದ ಕಪಾಲ ಕೊನೆಯಲ್ಲಿರುವ ಭಾಗ. ಮಾನವನಲ್ಲಿ ಉದರ ಪಾರ್ಶ್ವ
anterior

ಅಗ್ರ ಉರೋಸ್ಥಿ
(ಪ್ರಾ) ಆಂಫೀಬಿಯಗಳಲ್ಲಿ (ಸರೀಸೃಪಗಳಿಗೂ ಮೀನುಗಳಿಗೂ ನಡುವಣ ಕಶೇರುಕಗಳು) ಎದೆ ಮೂಳೆಯ ಅಗ್ರ ಭಾಗ. ಕೆಲವು ಉನ್ನತ ವರ್ಗ ಪ್ರಾಣಿಗಳಲ್ಲಿ ಎದೆ ಮೂಳೆಯನ್ನೂ ಗ್ರೀವಾಸ್ಥಿಯನ್ನೂ (ಕತ್ತಿನ ಮೂಳೆ) ಕೂಡಿಸುವ ಮೃದ್ವಸ್ಥಿ ಅಥವಾ ಮೂಳೆ
omosternum

ಅಗ್ರಗಾಮಿ
(ಸ) ಕೆಳಗಿನಿಂದ ಮೇಲಕ್ಕೆ ಬೆಳೆಯುವ. ಊರ್ಧ್ವಗಾಮಿ; ಅಗ್ರಾಭಿಸಾರಿ
acropetal


logo