logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಹ್ಯಾಲೈಡ್
(ರ) ಯಾವುದೇ ಹ್ಯಾಲೊಜನ್‌ನೊಂದಿಗೆ ಅದಕ್ಕಿಂತ ಹೆಚ್ಚಿನ ವಿದ್ಯುತ್ ಧನತ್ವವುಳ್ಳ ಧಾತು ಅಥವಾ ರ‍್ಯಾಡಿಕಲ್ ಸಂಯೋಗವಾದಾಗ ಉಂಟಾಗುವ ಸಂಯುಕ್ತ. ಹ್ಯಾಲೈಡ್‌ಗಳನ್ನು ಫ್ಲೂರೈಡ್‌ಗಳು, ಕ್ಲೋರೈಡ್‌ಗಳು, ಬ್ರೊಮೈಡ್‌ಗಳು ಅಥವಾ ಅಯೋಡೈಡ್‌ಗಳು ಎಂದು ಹೆಸರಿಸಲಾಗುತ್ತದೆ
halide

ಹ್ಯಾಲೊಜನ್
(ರ) ಆವರ್ತಕೋಷ್ಟಕದ ಏಳನೇ ಗುಂಪಿನಲ್ಲಿರುವ ಫ್ಲೂರೀನ್, ಕ್ಲೋರೀನ್, ಬ್ರೋಮೀನ್, ಅಯೋಡಿನ್ ಹಾಗೂ ಅಸ್ಟಟೀನ್, ಈ ಐದು ಧಾತುಗಳಲ್ಲಿ ಯಾವುದೇ ಒಂದು. ಇವು ಲೋಹಗಳೊಡನೆ ಸರಳ ಸಂಯೋಗ ಹೊಂದಿ ಹ್ಯಾಲೈಡ್‌ಗಳೆಂಬ ಲವಣಗಳಾಗುತ್ತವೆ. ಇವು ವಿಶಿಷ್ಟ ಅಲೋಹಕಗಳು. ಉನ್ನತ ಎಲೆಕ್ಟ್ರಾನ್ ಬಂಧುತ್ವ ಹಾಗೂ ಉನ್ನತ ಅಯಾನೀಕರಣ ಶಕ್ತಿಯನ್ನು ಪಡೆದಿರುತ್ತವೆ. ಇವು ಉತ್ತಮ ಆಕ್ಸಿಡೀಕಾರಕಗಳೂ ಹೌದು. ಗ್ರೀಕ್ ಭಾಷೆಯ ಹ್ಯಾಲೊ (ಲವಣ) ಜನ್ (ಜನಕ)ನಿಂದ ಈ ಹೆಸರು. ಲವಣಜನಕ. ಉದಾ: NaCl, KBr, KI ಇತ್ಯಾದಿ.
halogen

ಹ್ಯಾಲೊಪ್ಲಾಂಕ್ಟನ್
(ಜೀ) ಕಡಲ ಮೇಲ್ಮೈ ಅಥವಾ ಮೇಲ್ಪದರಲ್ಲಿ ವಾಸಿಸುವ ಸಸ್ಯ ಅಥವಾ ಜೀವಿಗಳು
haloplankton

ಹ್ಯೂಮಸ್
(ಸ) ನೆಲದಲ್ಲಿಯ ಸಸ್ಯ ಸಂಬಂಧವಾದ ಗೊಬ್ಬರ (ಎಲೆ, ಕಡ್ಡಿ ಮೊದಲಾದ ಜೈವಿಕ ಪದಾರ್ಥಗಳು ನೆಲದಲ್ಲಿ ಸಾವಕಾಶವಾಗಿ ಕೊಳೆತು ಕಪ್ಪೇರಿದ ಪದಾರ್ಥ). ಕಲಿಲ ಸ್ಥಿತಿಯಲ್ಲಿ ಇರುವ ಇದು ಮಣ್ಣಿನಲ್ಲಿ ನೀರಿನಂಶ ಹಿಡಿದಿರಿಸುವುದರ
humus

ಹ್ಯೂಮಿಕ್ ಆಮ್ಲ
(ರ) ಮಣ್ಣಿನಲ್ಲೂ ಬಿಟ್ಯುಮಿನಸ್ ಪದಾರ್ಥಗಳಲ್ಲೂ (ಬಗೆಬಗೆಯ ಹೈಡ್ರೋಕಾರ್ಬನ್‌ಗಳ ಮಿಶ್ರಣ) ಕಂಡುಬರುವ, ಮತ್ತು ಕೊಳೆತ ಸಸ್ಯದಿಂದ ರೂಪಿತವಾದ ಸಂಕೀರ್ಣ ಕಾರ್ಬಾಕ್ಸಲಿಕ್ ಆಮ್ಲ. ಇತರ ಆಮ್ಲಗಳಲ್ಲೂ ಜೈವಿಕ ದ್ರಾವಕಗಳಲ್ಲೂ ಅವಿಲೇಯ
humic acid

ಹ್ರಸ್ವ ಮಂಡಲ
(ಭೌ) ೧. ವಿದ್ಯುನ್ಮಂಡಲವೊಂದರಲ್ಲಿ ಪ್ರತಿಬಾಧೆ ಶೂನ್ಯವಾಗಿರುವಂಥ ವಾಹಕವನ್ನು ಎರಡು ಬಿಂದುಗಳ ನಡುವೆ ಜೋಡಿಸಿ ಅವುಗಳ ನಡುವಿನ ವಿಭವಾಂತರವನ್ನು ಕಡಿಮೆ ಮಾಡುವುದು. ಹೀಗೆ ಮಾಡಿದಾಗ ಶಕ್ತಿಹ್ರಾಸವಾಗುವುದಿಲ್ಲ. ಈ ರೀತಿಯ ಹ್ರಸ್ವಮಂಡಲವನ್ನು ನಿರ್ದಿಷ್ಟ ಉದ್ದೇಶ ಸಾಧನೆಗಾಗಿ ಮಾಡಿದಲ್ಲಿ ಸರಿಯೆ. ಇಲ್ಲದಿದ್ದಲ್ಲಿ ಆಕಸ್ಮಿಕವಾಗಿ ಹೀಗಾದಲ್ಲಿ ಮಂಡಲವನ್ನು ಕೂಡಲೇ ಬೇರೆ ಕಡೆ ತೆರೆದು ವಿದ್ಯುತ್ ಆ ಕಡೆ ಪ್ರವಹಿಸುವಂತೆ ಮಾಡದಿದ್ದಲ್ಲಿ, ಆಗ ಈ ಭಾಗದ ಮೂಲಕ ಹೆಚ್ಚಿನ ವಿದ್ಯುತ್ ಪ್ರವಹಿಸಿ ಅಧಿಕ ಉಷ್ಣ ಹಾಗೂ ಅಗ್ನಿ ಅನಾಹುತಗಳಂಥ ಅಪಾಯ ಸಂಭವಿಸಬಹುದು
short circuit

ಹ್ರಸ್ವಾಕ್ಷ
(ಗ) ದೀರ್ಘವೃತ್ತದ ದೀರ್ಘಾಕ್ಷಕ್ಕೆ ಲಂಬವಾಗಿರುವ ಮತ್ತು ಕನಿಷ್ಠ ಉದ್ದದ ವ್ಯಾಸ. ಗೌಣಾಕ್ಷ
minor axis

ಹ್ರಸ್ವಾಕ್ಷ ಗೋಳಾಭ/ಗೋಳಕಲ್ಪ
(ಗ) ನೋಡಿ : ಪರಿಭ್ರಮಣ ದೀರ್ಘವೃತ್ತಾಭ
oblate spheroid

ಹ್ರಾಸ
(ಭೌ) ಸಾಧಾರಣವಾಗಿ ಉಷ್ಣರೂಪದಲ್ಲಿ ಯಾವುದೇ ಶಕ್ತಿ ನಷ್ಟಗೊಳ್ಳುವುದು. ಪರಿಮಾಣಾತ್ಮಕವಾಗಿ, ಈ ನಷ್ಟದ ದರ. ಶಕ್ತಿಹ್ರಾಸ, ಶಕ್ತಿಕ್ಷಯ, ಶಕ್ತಿಸೋರಿಕೆ (ತಂ) ವಿದ್ಯುತ್‌ಶಕ್ತಿಯಲ್ಲಿ ಸಾಮಾನ್ಯವಾಗಿ ಅನಪೇಕ್ಷಣೀಯವಾಗಿ ಆಗುವ ನಷ್ಟ ಅಥವಾ ಇಳಿತಾಯ. ಹೀಗೆ ನಷ್ಟವಾದ ಶಕ್ತಿ ಉಷ್ಣವಾಗಿ ಪರಿವರ್ತಿತವಾಗುತ್ತದೆ. ಇದರಿಂದಾಗಿ ವಿದ್ಯುತ್ ಸಾಗಣೆ ಮಾರ್ಗ ಇತ್ಯಾದಿಗಳಲ್ಲಿ ಶಕ್ತಿ ನಷ್ಟ ಉಂಟಾಗುತ್ತದೆ ಮತ್ತು ಫಿಲ್ಟರ್‌ಗಳ ಸ್ಥಗನತೀವ್ರತೆ ಕಮ್ಮಿಯೂ ಆಗಬಹುದು. ಕಮ್ಮಿ ಆವೃತ್ತಿ ಮಂಡಲಗಳಲ್ಲಿ ಇದು ಬಹುಮಟ್ಟಿಗೆ ರೋಧದ ಮತ್ತು ಚಕ್ರೀಯ ಪ್ರವಾಹ ನಷ್ಟಗಳ ಪರಿಣಾಮ. ಉನ್ನತ ಆವೃತ್ತಿ ಮಂಡಲ ಗಳಲ್ಲಿ ರೋಧ, ವಿಕಿರಣ ಹಾಗೂ ಡೈಎಲೆಕ್ಟ್ರಿಕ್ (ಪರಾವೈದ್ಯುತ) ನಷ್ಟಗಳು ಎಲ್ಲವೂ ಇಂತಹ ಹ್ರಾಸಕ್ಕೆ ಕಾರಣವಾಗುತ್ತವೆ. ಇದರಲ್ಲಿ ಉಂಟಾಗುವ ಉಷ್ಣವನ್ನು ಉಷ್ಣಹೀರುಗ (ಹೀಟ್ ಸಿಂಕ್), ವಾಯು ಇಲ್ಲವೇ ನೀರು ತಂಪುಕಾರಿಗಳ ಮೂಲಕ ತಕ್ಷಣವೇ ನಿವಾರಿಸದಿದ್ದಲ್ಲಿ ಮಂಡಲದ ಭಾಗಗಳಿಗೆ ಹಾನಿ ಉಂಟಾಗಬಹುದು
dissipation


logo