logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಚ್ಚು
(ತಂ) ಇಟ್ಟಿಗೆ ಮೊದಲಾದವನ್ನು ಮಾಡಲು ಉಪಯೋಗಿಸುವ ಅಚ್ಚುಪಟ್ಟಿ. ಬೇಕಾದ ಆಕಾರ ಬರುವಂತೆ ಕರಗಿದ ಲೋಹ ಮೊದಲಾದವನ್ನು ಹೊಯ್ದು ಆರಿಸುವ ಎರಕದ ಅಚ್ಚು. (ಭೂವಿ) ಶಿಲೆಗಳಲ್ಲಿ ಕಾಣುವ ಪಳೆಯುಳಿಕೆ, ಖನಿಜ ಅಥವಾ ಮಡ್ಡಿ ರಚನೆಗಳ ಮೂಲ ಆಕೃತಿಯ ಗುರುತು
mould

ಅಚ್ಚೊತ್ತು
(ತಂ) ಪುಸ್ತಕದ ಮುದ್ರಣ, ಆವೃತ್ತಿ ಮತ್ತು ಮುದ್ರಣ ಪ್ರತಿಗಳ ಸಂಖ್ಯೆ; ಇದ್ದುದನ್ನೇ ಬದಲಾವಣೆಯಿಲ್ಲದೆ ಮಾಡಿದ ಪುನರ್ಮುದ್ರಣ. ಛಾಪ. (ವೈ) ದಂತ ವೈದ್ಯದಲ್ಲಿ, ಮೇಣ ಇತ್ಯಾದಿಗಳ ಮುದ್ದೆಗಳನ್ನು ಕಚ್ಚಿದಾಗ ಅದರಲ್ಲಿ ಮೂಡುವ ಹಲ್ಲುಗಳ ಗುರುತು
impression

ಅಚ್ಚೊತ್ತು
(ಜೀ) ಜೀವಿಗಳಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಪ್ರಕಟಗೊಳ್ಳುವ ಮುದ್ರಿತ ಭಾವನೆ ಅಥವಾ ನಡವಳಿಕೆ. ಈ ಅವಧಿಯನ್ನು ಸಂಕ್ರಮಣ ಕಾಲ ಎಂದು ಕರೆಯಬಹುದು. ಈ ಸಂಕ್ರಮಣವು ಕಾಲದಲ್ಲಿ ಪ್ರಭೇದದಿಂದ ಪ್ರಭೇದಕ್ಕೆ ಭಿನ್ನ. ನಡವಳಿಕೆಯೂ ವಿಶಿಷ್ಟ. ಉದಾ: ಬಾತುಕೋಳಿಯ ಮರಿಗಳು ಹುಟ್ಟಿದ ಕೆಲವು ಗಂಟೆಗಳಲ್ಲೇ ಯಾವುದೇ ಚಲಿಸುವ ವಸ್ತುವಿನ ಹಿಂದೆ ಹೋಗಲಾರಂಭಿಸುವುದು
imprinting

ಅಚ್ಚೊತ್ತು
(ತಂ) ಅದಿರು ಮೊದಲಾದವನ್ನು ಪುಡಿ ಮಾಡಲು ಉಪಯೋಗಿಸುವ ಒನಕೆಯಂಥ ವಿದ್ಯುಚ್ಚಾಲಿತ ಸಾಧನ
stamp

ಅಜಮಾಸು
(ಗ) ನೋಡಿ: ಸನ್ನಿಹಿತ
approximate

ಅಜೀರ್ಣ
(ವೈ) ಸಹಜ ಪಚನಕ್ರಿಯೆಗಳಿಗೆ ಅಡ್ಡಿವುಂಟಾದ ಸಂದರ್ಭಗಳಲ್ಲಿ ಉದರದಲ್ಲಿ ತಲೆದೋರುವ ಅಸೌಖ್ಯ ಸ್ಥಿತಿ
indigestion

ಅಜುರೈಟ್
(ಭೂವಿ) ತಾಮ್ರದ ಒಂದು ಅದಿರು; ತಾಮ್ರದ ಗಾಢ ನೀಲಿ ವರ್ಣದ ಜಲಯುಕ್ತ ಪ್ರತ್ಯಾಮ್ಲೀಯ ಕಾರ್ಬನೇಟ್; 2CuCO3,Cu(OH)2; ಚೆನ್ನಾಗಿ ರೂಪುಗೊಂಡ ಸ್ಫಟಿಕಗಳಾಗಿ ಇಲ್ಲವೇ ರಾಶಿ ರಾಶಿಯಾಗಿ ನೆಲದಲ್ಲಿ ಲಭ್ಯ
azurite

ಅಜೈಡ್
(ರ) -N3 ಗುಂಪನ್ನೊಳಗೊಂಡ ಸಂಯುಕ್ತ; ಸ್ಫೋಟಕಗಳಲ್ಲಿ ಉಪಯೋಗ. ಉದಾ: ಸೋಡಿಯಮ್ ಅಜೈಡ್ NaN3
azide

ಅಜೈವಿಕ
(ಸ) ಅಜೀವ ವಸ್ತುಗಳಿಗೆ ಸಂಬಂಧಿಸಿದ. ವಿಶೇಷ ವಾಗಿ ಮಣ್ಣು, ನೀರು, ಗಾಳಿಯನ್ನು ಕುರಿತಂತೆ ಬಳಸುವ ಪದ
abiotic

ಅಜೈವಿಕ ಜನನ
(ಜೀ) ಅಜೀವ ವಸ್ತುಗಳಿಂದ ಜೀವಿಗಳು ಹುಟ್ಟುವುದು. ಸ್ವಯಂಜೀವೋತ್ಪತ್ತಿ
abiogenesis


logo