logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಂಟುತುರಿ
(ವೈ) ಸ್ಟಫೈಲೊಕಾಕೈ ಅಥವಾ ಸ್ಟ್ರಪ್ಟೋಕಾಕೈ ಬ್ಯಾಕ್ಟೀರಿಯಾಗಳಿಂದ ತಲೆದೋರುವ ಚರ್ಮದ ಮೇಲೆ ಕೀವುಗುಳ್ಳೆ ರೂಪದ ತೀವ್ರ ಸೋಂಕು. ಆರಂಭದಲ್ಲಿ ನೀರು ತುಂಬಿದ ಗುಳ್ಳೆಗಳಿದ್ದು, ಅನಂತರ ಅವು ಒಡೆದು ಹಳದಿ ಬಣ್ಣದ ಹೆಪ್ಪಳಿಕೆಗಟ್ಟುತ್ತವೆ. ಇದು ಸಾಮಾನ್ಯವಾಗಿ ಮುಖ ಮತ್ತು ಕೈಗಳಲ್ಲಿ ಹೆಚ್ಚು ಕಂಡುಬರುತ್ತದೆ. ಇಂಪೆಟಿಗೊ
impetigo

ಅಂಟುಪ್ಲಾಸ್ತ್ರಿ
(ವೈ) ಒಂದು ಪಕ್ಕದಲ್ಲಿ ಅಂಟು ಲೇಪಿಸಿರುವ ಹತ್ತಿ, ಕಾಗದ, ಪ್ಲಾಸ್ಟಿಕ್ ಪಟ್ಟಿ; ಗಾಯದ ಮೇಲೆ ಅಂಟಿಸಲು ಇಲ್ಲವೇ ಅದಕ್ಕೆ ಕಟ್ಟಿದ ಪಟ್ಟಿಯನ್ನು ಆ ಸ್ಥಳದಲ್ಲಿ ಬಿಗಿಯಾಗಿ ಹಿಡಿದಿಡಲು ಬಳಸುವ ಬಂಧಕ. ಆಸಂಜನ ಬಂಧಕ, ಅಂಟುಪಟ್ಟಿ
adhesive plaster

ಅಂಟುರೋಗ
(ವೈ) ಗಾಳಿ, ನೀರು ಮೊದಲಾದವುಗಳಿಂದ ಯಾವುದೇ ವ್ಯಕ್ತಿಯ ಶರೀರ ಹೊಕ್ಕು ಅನಂತರ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತ ಹೋಗುವ ರೋಗ. ಸಾಂಕ್ರಾಮಿಕ ರೋಗ
infectious disease

ಅಂಡ್‌ಗೇಟ್ AND
(ಕಂ) ಎಲ್ಲ ಇನ್‌ಪುಟ್(ನಿವೇಶ)ಗಳೂ ಏಕಕಾಲಿಕವಾಗಿ ಶಕ್ತೀಕರಿಸಲ್ಪಟ್ಟಾಗ ಮಾತ್ರ ಔಟ್‌ಪುಟ್ (ನಿರ್ಗಮ) ಸಂಜ್ಞೆಯನ್ನು ಉತ್ಪಾದಿಸುವ ದ್ವಾರ; ಅಂದರೆ ಇನ್‌ಪುಟ್ ಸಂಜ್ಞೆಗಳೆಲ್ಲವೂ ೧ ಆದಾಗ ಮಾತ್ರ ಔಟ್‌ಪುಟ್ ಸಂಜ್ಞೆ ೧ ಆಗುವುದು
gate

ಅಂಡ
(ಜೀ) ಅಂಡಕದಿಂದ ಮೈಯೋಸಿಸ್ (ಅರೆ ವಿದಳನ) ಮೂಲಕ ಉತ್ಪತ್ತಿಯಾದ ಸ್ತ್ರೀಯುಗ್ಮಕ. ಪುಲ್ಲಿಂಗ ಕೋಶಕ್ಕೆ ಹೋಲಿಸಿದರೆ ದೊಡ್ಡ ಗಾತ್ರದ ಮತ್ತು ಚಲನೆ ಇರದ ಸ್ತ್ರೀಲಿಂಗ ಕೋಶ. ಪುಲ್ಲಿಂಗ ಕೋಶದೊಂದಿಗೆ ಕೂಡಿದ ಅನಂತರ ಹೊಸ ಜೀವಿಯಾಗಿ ಅಭಿವರ್ಧಿಸುವ ಗುಣವುಳ್ಳದ್ದು. ಗೋಳಾಕಾರ. ವೈಟಲೀನ್ (ಪೀತಕ) ಪೊರೆಯಿಂದ (ಭ್ರೂಣಾವರಣ) ಆವೃತವಾಗಿರುವುದು. ಅಂಡಕೋಶ
ovum

ಅಂಡಕ
(ಜೀ) ಬೀಜಸಸ್ಯಗಳಲ್ಲಿ ಶಲಾಕೆಗೆ ಲಗತ್ತಾಗಿರುವ ಒಂದು ರಚನೆ. ಇದರೊಳಗೆ ಸ್ತ್ರೀಕೋಶವಿರುವುದು. ಫಲೀಕರಣಾ ನಂತರ ಈ ಕೋಶ ಬೀಜವಾಗುವುದು. (ಪ್ರಾ) ಅಭಿವರ್ಧನೆಯ ಆರಂಭ ಘಟ್ಟಗಳಲ್ಲಿರುವ ಅಂಡ ಅಥವಾ ಬೀಜ
ovule

ಅಂಡಜನನ
(ಪ್ರಾ) ಗರ್ಭಾದಾನಕ್ಕೆ ಸಿದ್ಧತೆಯಾಗಿ ಅಂಡ ಬೆಳೆಯುವ ಹಾಗೂ ಪಕ್ವಗೊಳ್ಳುವ ಪ್ರಕ್ರಿಯೆ
oogenesis

ಅಂಡಜ ಸ್ತನಿ
(ಪ್ರಾ) ಮೊಟ್ಟೆ ಇಡುವ ಕೆಳವರ್ಗದ ಸ್ತನಿ. ಇವುಗಳಲ್ಲಿ ಮೂತ್ರನಾಳ, ಯೋನಿ, ಜೀರ್ಣಾಂಗ ಇವೆಲ್ಲಕ್ಕೂ ಒಂದೇ ದ್ವಾರವಿದ್ದು ಕೆಳಮಟ್ಟದ ವಿಕಾಸಕ್ಕೆ ನಿದರ್ಶನ. ಏಕದ್ವಾರಿ
monotreme

ಅಂಡನಾಳ
(ಪ್ರಾ) ಅಂಡಾಶಯದ ಒಳಗಿನಿಂದ ಹೊರಕ್ಕೆ ಅಥವಾ ಗರ್ಭಾಶಯದೊಳಕ್ಕೆ ಚಾಚಿಕೊಂಡಿರುವ ನಾಳ. ಇದರ ಮೂಲಕ ಅಂಡಗಳು ವಿಸರ್ಜನೆಯಾಗುತ್ತವೆ.
oviduct

ಅಂಡಲೂಸೈಟ್
(ಭೂವಿ) ಅಲ್ಯೂಮಿನಿಯಮ್ ಸಿಲಿಕೇಟಿನ ಮೂರು ಸ್ಫಟಿಕಾತ್ಮಕ ಖನಿಜಗಳ ಪೈಕಿ ಒಂದು. Al2siO5. ಸಮಚತುರ್ಭುಜಿ, ಕಯನೈಟ್ ಮತ್ತು ಸಿಲ್ಲಿಮನೈಟ್ ಉಳಿದೆರಡು ಖನಿಜಗಳು
andalusite


logo