logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಂಡವಿಜ್ಞಾನ
(ಪ್ರಾ) ಮೊಟ್ಟೆಗಳ, ವಿಶೇಷವಾಗಿ ಹಕ್ಕಿ ಮೊಟ್ಟೆಗಳ, ಅಧ್ಯಯನ ಮಾಡುವ ಪ್ರಾಣಿವಿಜ್ಞಾನ ವಿಭಾಗ
oology

ಅಂಡಾಣು ಬೀಜ ವರ್ಗಾವಣೆ
(ವೈ) ವಯೋಸಂಬಂಧಿತ ಬಂಜೆತನದಿಂದ ಅಥವಾ ಮೈಟೋಕಾಂಡ್ರಿಯಾಕ್ಕೆ ತಗಲಿದ ರೋಗಗಳಿಂದ ನರಳುತ್ತಿರುವ ಮಹಿಳೆ ಅಂಡಾಣು ಬೀಜ ವರ್ಗಾವಣೆ ವಿಧಾನದಿಂದ ಸಂತಾನವನ್ನು ಪಡೆಯಬಹುದು. ಮೊದಲ ಹಂತ, ಈ ಮಹಿಳೆಯ ಅಂಡಾಣುವಿನಲ್ಲಿರುವ ಬೀಜವನ್ನು ಹೊರ ತೆಗೆಯುವುದು. ಎರಡನೆಯ ಹಂತದಲ್ಲಿ ಆರೋಗ್ಯವಂತ ಮಹಿಳೆಯ ಅಂಡಾಣುವನ್ನು ಸಂಗ್ರಹಿಸಿ, ಅದರೊಳಗಿರುವ ಅಂಡವನ್ನು ತೆಗೆದು ಅದರ ಸ್ಥಾನದಲ್ಲಿ ಈಗಾಗಲೇ ಪ್ರತ್ಯೇಕಿಸಿಟ್ಟ ಬೀಜವನ್ನು ಸೇರಿಸುವುದು. ಮೂರನೆಯ ಹಂತದಲ್ಲಿ, ಈ ಕಸಿಗೊಂಡ ಅಂಡಾಣುವನ್ನು ಗಾಜಿನ ತಟ್ಟೆಯಲ್ಲಿಟ್ಟು ವೀರ್ಯಾಣುವಿನ ಸಂಪರ್ಕಕ್ಕೆ ಬರಿಸುವುದು. ನಾಲ್ಕನೆಯ ಹಂತದಲ್ಲಿ ಈ ನೆಡುಪೂರ್ವ ಭ್ರೂಣವನ್ನು ಬಾಡಿಗೆ-ತಾಯಿಯ ಗರ್ಭದಲ್ಲಿ ನಾಟುವುದು. ಈ ವಿಧಾನದಿಂದ ವಯಸ್ಸಾದ ಮಹಿಳೆ ಮಕ್ಕಳನ್ನು ಪಡೆಯಬಹುದು ಹಾಗೂ ಮೈಟೋಕಾಂಡ್ರಿಯಾ ರೋಗಗಳಿಂದ ನರಳುತ್ತಿರುವ ಹೆಂಗಸರೂ ಆರೋಗ್ಯವಂತ ಮಕ್ಕಳನ್ನು ಪಡೆಯಬಹುದು
oocyte nuclear transfer

ಅಂಡಾಶಯ
(ಪ್ರಾ) ಹೆಣ್ಣು ಪ್ರಾಣಿಗಳಲ್ಲಿ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುವ ಹಾಗೂ ಅಂಡಗಳಿಗೆ ಜನ್ಮ ನೀಡುವ ಗ್ರಂಥಿಗಳಿರುವ ಜನನಾಂಗ. ಕಶೇರುಕಗಳಲ್ಲಿ ಇಂಥ ಎರಡು ಜನನಾಂಗಗಳಿರುತ್ತವೆ. (ಸ) ಶಲಾಕೆಯ ತಳದಲ್ಲಿರುವ ಟೊಳ್ಳು ಭಾಗ. ಇದರಲ್ಲಿ ಅಂಡಕಗಳು ಉತ್ಪತ್ತಿಯಾಗುತ್ತವೆ. ಈ ಭಾಗ ಎರಡು ಅಥವಾ ಹೆಚ್ಚು ಶಲಾಕೆಗಳು ಕೂಡಿಯೂ ಉಂಟಾಗಿರಬಹುದು
ovary

ಅಂಡಾಶಯ ಕುಹರ
(ಪ್ರಾ) ಉನ್ನತ ಪ್ರಾಣಿ ವರ್ಗಗಳ ಅಂಡಾಶಯದಲ್ಲಿ ಅಂಡಗಳಿರುವ ಸಂಚಿಯಂಥ ನಾಳಗಳಲ್ಲೊಂದು
ovarian follicle

ಅಂಡಾಶ್ಮ
(ಭೂವಿ) ಸಣ್ಣ ಸಣ್ಣ ದುಂಡು ಕಣಗಳು ಒಟ್ಟುಗೂಡಿ ಆಗಿರುವ ಒಂದು ಬಗೆಯ ಜಲಜಶಿಲೆ/ಸುಣ್ಣ ಕಲ್ಲು. ಇಂಗ್ಲೆಂಡಿನ ಹಾಗೂ ಯೂರೋಪಿನ ಕೆಲವು ಭಾಗಗಳಲ್ಲಿ ಇರುವ ಜುರಾಸಿಕ್ ಭೂಸ್ತರದ ಉನ್ನತ ಭಾಗಗಳಲ್ಲಿ ವಿಶೇಷವಾಗಿ ಲಭ್ಯ
oolite

ಅಂಡಾಶ್ಮ
(ಭೂವಿ) ಕ್ಯಾಲ್ಸಿಯಮ್ ಕಾರ್ಬನೇಟ್, ಕಾಮೊಸೈಟ್ ಅಥವಾ ಡೊಲೊಮೈಟ್‌ನಿಂದ ಕೂಡಿದ, ಹೆಚ್ಚು ಕಡಿಮೆ ಗೋಳೀಯವಾದ, ಮೀನಿನ ಮೊಟ್ಟೆಯನ್ನು ಹೋಲುವ, ವ್ಯಾಸ ೨ ಮಿಮೀಗಿಂತ ಹೆಚ್ಚು ಇರದ, ಸಾಮಾನ್ಯವಾಗಿ ಏಕಕೇಂದ್ರೀಯ ಸ್ತರಗಳಿಂದ ಮತ್ತು/ಅಥವಾ ಅರೀಯ ತಂತುಗಳಿಂದ ರಚಿತವಾದ ಜಲಜಶಿಲೆಯ ಮುದ್ದೆ ಅಥವಾ ಗಟ್ಟಿ. ಸಮುದ್ರ ತಲದಲ್ಲಿ ಅಥವಾ ಸುಣ್ಣಕಲ್ಲು ರಾಶಿಯ ಮಧ್ಯೆ ಕಂಡುಬರುತ್ತದೆ
oolith

ಅಂಡಿಸೈಟ್
(ಭೂವಿ) ಮಧ್ಯಸ್ಥ ಸಂಯೋಜನೆ ಇದ್ದು ಪ್ಲೇಜಿಯೊಕ್ಲೇಸ್ ಪ್ರಧಾನ ಫೆಲ್ಡ್‌ಸ್ಪಾರ್ ಆಗಿರುವ ಸೂಕ್ಷ್ಮ ಕಣಿಕ ಅಗ್ನಿಶಿಲೆ (ಸಾಧಾರಣವಾಗಿ ಲಾವ)
andesite

ಅಂಡೋತ್ಸರ್ಗ
(ಜೀ) ಅಂಡಗಳು ರಚಿತವಾಗುವುದು; ಸ್ತನಿಗಳಲ್ಲಿ ಅಂಡಾಶಯದಿಂದ ಅಂಡಗಳು ವಿಮೋಚನೆಗೊಳ್ಳುವ ಪ್ರಕ್ರಿಯೆ
ovulation

ಅಂಡೋತ್ಪಾದಕ
(ಪ್ರಾ) ಮೊಟ್ಟೆ ಇಟ್ಟು ಮರಿ ಮಾಡುವ (ಪ್ರಾಣಿ). ಮರಿಯಾಗಿ ಅಭಿವರ್ಧನೆಗೊಳ್ಳುವ ಪ್ರಕ್ರಿಯೆಗಳೆಲ್ಲ ತಾಯಿಯ ಒಡಲಿನ ಹೊರಗೆ ಜರುಗುತ್ತವೆ - ಹಕ್ಕಿಗಳಲ್ಲಿ ಇರುವಂತೆ. ನೋಡಿ : ಜರಾಯುಜ
oviparous

ಅಂತಃಆಣವಿಕ
(ಭೌ) ಅಣುವಿನೊಳಗೆ ನೆಲೆಗೊಂಡ
intramolecular


logo