logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಕಂಡ್ರೈಟ್
(ಭೂವಿ) ಒಂದು ಬಗೆಯ ಶಿಲಾಸದೃಶ ಕಾಂಡ್ರ್ಯೂಲ್‌ರಹಿತ ಉಲ್ಕಾಪಿಂಡ
achondrite

ಅಕಶೇರುಕ
(ಪ್ರಾ) ಬೆನ್ನು ಮೂಳೆ ಇಲ್ಲದ ಪ್ರಾಣಿ
invertebrate

ಅಕಾಲ ಪ್ರಸವ
(ವೈ) ಗರ್ಭಾಶಯದಲ್ಲಿ ಶಿಶು ಪೂರ್ಣವಾಗಿ ಅಭಿವರ್ಧನೆಗೊಳ್ಳುವ ಅವಧಿಗೆ ಮುನ್ನವೇ (ಗರ್ಭಧಾರಣೆಯಾಗಿ ೩೫ ವಾರಗಳಿಗೂ ಮುನ್ನವೇ) ಸಂಭವಿಸುವ ಪ್ರಸವ. ಪ್ರಾಪ್ತಕಾಲಪೂರ್ವ ಜನನ
premature birth

ಅಕೇಂದ್ರಿತ
(ಸ) ಕ್ರೋಮೊಸೋಮ್‌ಗಳಿಗೂ ಕ್ರೋಮೊ ಸೋಮ್ ವಲಯಗಳಿಗೂ ಅನ್ವಯಿಸಿದಂತೆ ಸೆಂಟ್ರೊಮಿಯರ್ ಇಲ್ಲದ
acentric

ಅಕೋನಕ ರೇಖೆ
(ಭೂ) ಕಾಂತೀಯ ದಿಕ್ಪಾತ ಶೂನ್ಯ ಸ್ಥಳಗಳನ್ನು ಸೇರಿಸುವ ಕಾಲ್ಪನಿಕ ರೇಖೆ; ದಿಕ್ಸೂಚಿಯಲ್ಲಿ ಭೌಗೋಳಿಕ ಹಾಗೂ ಕಾಂತೀಯ ಉತ್ತರ ಬಿಂದುಗಳು ವಿಚಲಿಸುವ ಸ್ಥಳಗಳಿವು
agonic line

ಅಕ್ಕಿ
(ಸ) ಬತ್ತದ ಹೊಟ್ಟನ್ನು ತೆಗೆದು ಪಡೆದ ಕಾಳು. ಪಿಷ್ಟ ಪದಾರ್ಥ ಹೆಚ್ಚು, ಪ್ರೋಟೀನ್ ಮತ್ತು ಜಿಡ್ಡು ಕಮ್ಮಿ. ಇದರ ತೌಡು ದನಕ್ಕೆ ಪೌಷ್ಟಿಕ ಮೇವು. ನೋಡಿ: ಬತ್ತ
rice

ಅಕ್ಕಿ ಪತಂಗ
(ಪ್ರಾ) ಲೆಪಿಡಾಪ್ಟಿರ ಗಣ, ಪೈರಾಲಿಡೀ ಕುಟುಂಬಕ್ಕೆ ಸೇರಿದ ಕೀಟ. ಕಾರ್ಸೈರ ಕಿಫಲೋನಿಕ ವೈಜ್ಞಾನಿಕ ನಾಮ. ಆಹಾರ ಪದಾರ್ಥಗಳ ಮೇಲೆ ನೂಲು ಎಳೆಗಳಿಂದ ದಟ್ಟವಾದ ಬಲೆ ಕಟ್ಟಿ ಅವನ್ನು ನಿರುಪಯುಕ್ತಗೊಳಿಸುತ್ತದೆ
rice moth

ಅಕ್ಯುಪಂಕ್ಚರ್
(ವೈ) ದೇಹದ ನಿರ್ದಿಷ್ಟ ಸಂಧಿ ಬಿಂದುಗಳಲ್ಲಿ ಚರ್ಮಕ್ಕೆ ಸೂಜಿ ಚುಚ್ಚಿ ನೋವು ನಿವಾರಣೆ ಅಥವಾ ಸಂವೇದನಹರಣ ಮಾಡುವ ರೋಗಚಿಕಿತ್ಸಾ ವಿಧಾನ. ಚೀನಾ ಮೂಲದ್ದು. ಇದರ ಕಾರ್ಯರೀತಿ ಅಸ್ಪಷ್ಟ. ಆದರೆ ಶರೀರವು ತನ್ನದೇ ಎಂಡೋರ್ಫಿನ್ (ಎಂಡೋಜೀನಸ್ ಮಾರ್ಫಿನ್‌ನ ಹೃಸ್ವನಾಮ)ಗಳೆಂಬ ನೋವುಶಾಮಕಗಳನ್ನು ಉತ್ಪಾದಿಸಿಕೊಳ್ಳಲು ಇದು ಉತ್ತೇಜಿಸುತ್ತದೆ ಎಂದು ಭಾವಿಸಲಾಗಿದೆ. ಸೂಜಿ ಚಿಕಿತ್ಸೆ
acupuncture

ಅಕ್ರಿಫ್ಲೆವಿನ್
(ವೈ) ಗಾಢ ಕಿತ್ತಳೆ ಬಣ್ಣದ ಸ್ಫಟಿಕ ಪದಾರ್ಥ; ಪೂತಿರೋಧಕ, ಗಾಯಪಟ್ಟಿಗಳಲ್ಲಿ ಬಳಸಲಾಗುತ್ತದೆ. ೩,೬-ಡೈ ಅಮೀನೋ-೧೦ ಮೀಥೈಲ್ ಅಕ್ರಿಡಿನಿಯಮ್ ಕ್ಲೋರೈಡ್. C14H14N3Cl
acriflavine

ಅಕ್ರಿಲಿಕ್ ಆಮ್ಲ
(ರ) CH2=CH.COOH, ಅಸೆಟಿಕ್ ಆಮ್ಲದ ವಾಸನೆ ಇರುವ ಸುಲಭ ಕ್ರಿಯಾಪಟು ಪದಾರ್ಥ. ದ್ರಬಿಂ ೧೩0ಸೆ; ಕುಬಿಂ ೧೪೧0ಸೆ
acrylic acid


logo