logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಂತರರಾಷ್ಟ್ರೀಯ ದಿನಾಂಕ ರೇಖೆ
(ಖ) ಉತ್ತರ ದಕ್ಷಿಣ ಧ್ರುವಗಳನ್ನು ಸಂಧಿಸುವಂತೆ ಗೋಳದ ಮೇಲ್ಮೈ ಮೇಲೆ ಎಳೆದ ಕಾಲ್ಪನಿಕ ರೇಖೆ. ೧೮೦0 ರೇಖಾಂಶ ವೃತ್ತ ಪೆಸಿಫಿಕ್ ಸಾಗರದ ನಿರ್ಜನ ಪ್ರದೇಶದ ಮೇಲೆ ಹಾದು ಹೋಗುತ್ತದೆ. ಹೀಗೆ ಸಾಗುವಾಗ ಒಂದೆರಡು ದ್ವೀಪಗಳನ್ನು ಬಳಸಿ ಹೋಗುವಂತೆ ಎಳೆದಿದೆ. ಈ ರೇಖೆಯಿಂದ ಜಪಾನ್ ಕಡೆಗೆ ಪೂರ್ವ, ಅಮೆರಿಕ ಕಡೆಗೆ ಪಶ್ಚಿಮ ಎಂದು ಅಂಗೀಕರಿಸಿದೆ. ಎಂದೇ ಪಶ್ಚಿಮದಿಂದ ಪೂರ್ವಕ್ಕೆ ಇದನ್ನು ದಾಟುವಾಗ ತಾರೀಖು ಪಟ್ಟಿಯಲ್ಲಿ ೧ ದಿವಸ ಹೆಚ್ಚು ಮಾಡಬೇಕು. ಪೂರ್ವದಿಂದ ಪಶ್ಚಿಮಕ್ಕೆ ದಾಟುವಾಗ ಕಡಿಮೆ ಮಾಡಬೇಕು. ನಾಗರಿಕ ಜೀವನದ ಸೌಲಭ್ಯಕ್ಕಾಗಿ ಈ ಏರ್ಪಾಡು. ‘ಅಂತರರಾಷ್ಟ್ರೀಯ ಮೆರಿಡಿಯನ್ ಸಮ್ಮೇಳನ’ ೧೮೮೪ರಲ್ಲಿ ಈ ೧೮೦0 ರೇಖಾಂಶ ವೃತ್ತವನ್ನು ದಿನಾಂಕ ರೇಖೆಯಾಗಿ ಆಯ್ಕೆ ಮಾಡಿತು
international dateline

ಅಂತರರಾಷ್ಟ್ರೀಯ ವ್ಯಾವಹಾರಿಕ ಉಷ್ಣತಾ ಮಾನಕ
(ಭೌ) ಉಷ್ಣಗತೀಯ ಮಾನಕಕ್ಕೆ ಆದಷ್ಟೂ ಸಮೀಪವಿರುವಂತೆ ೧೯೬೮ರಲ್ಲಿ ನಿರೂಪಿಸಿದ ವ್ಯಾವಹಾರಿಕ ಉಷ್ಣತಾಮಾನಕ. ಆರಂಭದಲ್ಲಿ ಅನಿಲ ಉಷ್ಣತಾಮಾಪಕ ಬಳಸಿಕೊಂಡು ಹನ್ನೊಂದು ಸ್ಥಿರ ಬಿಂದುಗಳನ್ನು ನಿರೂಪಿಸಲಾಯಿತು. ಉಷ್ಣತಾ ವ್ಯಾಪ್ತಿಗನುಸಾರ ಗೊತ್ತಾದ ಉಷ್ಣತಾ ಮಾಪಕದಿಂದ ಮಧ್ಯಂತರ ಉಷ್ಣತೆಗಳನ್ನು ಅಳೆಯಲಾಗುತ್ತದೆ. ಈಗ ಈ ಮಾನಕದ ಬಲುಮಟ್ಟಿಗಿನ ಉಷ್ಣತೆಯ ಅಳತೆಗಳನ್ನು ಪ್ಲಾಟಿನಮ್ ರೋಧಕ ಉಷ್ಣತಾ ಮಾಪಕದಿಂದ ಮಾಡಲಾಗುತ್ತದೆ
international practical temperature scale

ಅಂತರವಕಾಶ
(ಜೀ) ಕೆಲವು ಬಗೆಯ ಸಂಯೋಜಕ ಊತಕಗಳಲ್ಲಿ ಕೋಶಗಳ ಮತ್ತು ತಂತುಗಳ ನಡುವಿನ ತೆರಪುಗಳ ಪೈಕಿ ಒಂದು. ಎಲೆಯ ಸಿರೆಗಳ ನಡುವಣ ಅಥವಾ ಕೀಟದ ರೆಕ್ಕೆಯ ಮೇಲಿನ ನರಗಳ ನಡುವಣ, ಬಲು ಸಣ್ಣ ಪ್ರದೇಶ. ಕಿರುಸಂಧಿ. (ವೈ) ವರ್ಣವಲಯ, ದುಂಡಗಿರುವ ಬಣ್ಣದ ಭಾಗ. ಉದಾ: ಮೊಲೆ ತೊಟ್ಟಿನ ಅಥವಾ ಕಣ್ಣಿನ ಪಾಪೆಯ ಸುತ್ತಲಿನ ಭಾಗ
areola

ಅಂತರವಾಹ
(ಭೌ) ವಿದ್ಯುನ್ಮಂಡಲದ ಯಾವುದೋ ಬಿಂದುವಿನಲ್ಲಿ ಹಾಕಿದ ವಿದ್ಯುತ್ ಪ್ರೇರಕಬಲದ ಪ್ರತಿಯೊಂದು ಏಕಮಾನ ಆಧಿಕ್ಯಕ್ಕೆ ಆ ಮಂಡಲದ ಇನ್ನೊಂದು ಭಾಗದಲ್ಲಿ ಕಂಡುಬರುವ ವಿದ್ಯುತ್ ಪ್ರವಾಹದ ಆಧಿಕ್ಯ. ಪರಸ್ಪರ ವಾಹ ಒಂದು ವಿಶಿಷ್ಟ ನಿದರ್ಶನ
transconductance

ಅಂತರಸಂಸ್ತರಿತ
(ಭೂವಿ) ಎರಡು ಶಿಲಾ ಸ್ತರಗಳ ಮಧ್ಯೆ ಇರುವ; ಭಿನ್ನ ಸಾಮಗ್ರಿಯ ಇತರ ಸ್ತರಗಳಿಗೆ ಸಮಾಂತರವಾದ ಸ್ತರದಲ್ಲಿರುವ
interbedded

ಅಂತರಹೃತ್‌ಸ್ತರ
(ಜೀ) ಕಶೇರುಕಗಳಲ್ಲಿ ಹೃದಯದ ಪೊಳ್ಳುಭಾಗವನ್ನು ಆವರಿಸಿರುವ ಒಳಪೊರೆ. ಹೃದಯದ ಒಳಪೊರೆ. ಹೃತ್ಪೊರೆ
endocardium

ಅಂತರಾಂಗಗಳು
(ಪ್ರಾ) ಜೀವಿಯ ದೇಹ ಕುಹರಗಳೊಳಗಿನ ಅಂಗಗಳು. ಉದಾ: ಮಿದುಳು, ಶ್ವಾಸಕೋಶ, ಹೃದಯ, ಜಠರ
viscera

ಅಂತರಾಣವಿಕ ಬಲಗಳು
(ಭೌ) ಯಾವುದೇ ಸಂಯುಕ್ತದಲ್ಲಿ ಒಂದು ಅಣುವನ್ನು ಇನ್ನೊಂದ ರೊಂದಿಗೆ ಬಂಧಿಸುವ ಬಲಗಳು. ಇವು ಒಂದು ಅಣುವಿನಲ್ಲೇ ಪರಮಾಣುಗಳನ್ನು ಪರಸ್ಪರ ಬಂಧಿಸುವ ಬಲಗಳಿಗಿಂತ ತೀರ ದುರ್ಬಲವಾದವು
intermolecular forces

ಅಂತರಾಯಿಕ
(ಭೌ) ಬಿಟ್ಟು ಬಿಟ್ಟು ಪ್ರಾರಂಭ ವಾಗುವ. ಕ್ರಿಯೆಗಳ ನಡುವೆ ಕ್ರಮಬದ್ಧ ಅಥವಾ ಕ್ರಮರಹಿತ ಅಂತರಗಳಲ್ಲಿ ನಿಂತು ಮುಂದುವರಿಯುವ. ಸವಿರಾಮ.
intermittent

ಅಂತರಾವಸ್ಥೆ
(ಪ್ರಾ) ಪ್ರಾಣಿಯ ಜೀವನದಲ್ಲಿ ಯಾವುದೇ ಸುಸ್ಪಷ್ಟ ಗಮನಾರ್ಹ ಘಟ್ಟ , ವಿಶೇಷವಾಗಿ ಎರಡು ಅನುಕ್ರಮ ಪೊರೆ ಬಿಡುವಿಕೆಗಳ (ಉರ್ಚು) ನಡುವಿನ ಅವಧಿ
stadium


logo