logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಂಗಕ
(ಪ್ರಾ) ಸಸ್ಯದ ಅಥವಾ ಪ್ರಾಣಿಯ ಕೋಶ ದೊಳಗೆ ವಿಶಿಷ್ಟ ಕಾರ್ಯ ಜರಗಿಸುವ ಒಂದು ಸೂಕ್ಷ್ಮ ಸಂರಚನೆ. ನ್ಯೂಕ್ಲಿಯಸ್, ಮೈಟೊಕಾಂಡ್ರಿಯ ಹಾಗೂ ಲೈಸೋಸೋಮ್‌ಗಳು ಅಂಗಕಗಳಿಗೆ ನಿದರ್ಶನ
organelle

ಅಂಗಚ್ಛೇದನೆ
(ವೈ) ದೇಹದ ಹೊರಭಾಗವೊಂದನ್ನು ಕತ್ತರಿಸಿ ತೆಗೆಯುವುದು. ಉದಾ: ಬೆರಳು, ತೋಳು, ಕಾಲು, ಕಿವಿ ಮುಂತಾದವನ್ನು ಛೇದಿಸುವುದು
amputation

ಅಂಗಮರ್ದನ
(ವೈ) ಚಿಕಿತ್ಸೆ ನೀಡುವ ಉದ್ದೇಶದಿಂದ ಶರೀರದ ಸ್ನಾಯುಗಳನ್ನೂ ಅಸ್ಥಿಸಂಧಿಗಳನ್ನೂ ಅವುಗಳ ಕಾರ್ಯ ಚುರುಕಾಗುವಂತೆ ಕೈಯಿಂದ ಇಲ್ಲವೇ ಸಲಕರಣೆಯಿಂದ ನೀವುವುದು, ಉಜ್ಜುವುದು, ಹಿಸುಕುವುದು ಅಥವಾ ತಟ್ಟುವುದು. ಮಾಲೀಸು. ಸಂವಾಹನ
massage

ಅಂಗರಚನಾವಿಜ್ಞಾನ
(ಜೀ,ವೈ) ಜೀವಿಗಳ, ವಿಶೇಷವಾಗಿ ಮಾನವನ, ದೇಹರಚನೆ ಕುರಿತ ಅಧ್ಯಯನ. ಜೀವಿಗಳ ಭೌತರಚನೆ ಅರಿಯುವ ಸಲುವಾಗಿ ಅವನ್ನು ಛೇದಿಸಲಾಗುತ್ತದೆ
anatomy

ಅಂಗವಿಕಾಸ
(ವೈ) ಭ್ರೂಣ ಬೆಳವಣಿಗೆಯ ಆದಿಯಲ್ಲಿ ಜೀವಕೋಶ ಹಾಗೂ ಊತಕಗಳ ವಿಭೇದನ ಪ್ರಕ್ರಿಯೆ ನಡೆದು, ಯಾವ ಜೀವಕೋಶ/ಊತಕ ಯಾವ ಅಂಗವಾಗಿ ಬೆಳೆದು ಪರಿಪೂರ್ಣ ರೂಪವನ್ನು ಪಡೆಯಬೇಕು ಎಂಬುದರ ನಿರ್ಣಯವು ಈ ಹಂತದಲ್ಲಿ ನಡೆದು, ಅದರಂತೆ ಅವು ಬೆಳೆಯುತ್ತವೆ. ಆಕೃತಿ ವಿಕಾಸ. ಅಂಗರಚನ ವಿಕಾಸ. ರೂಪವಿಕಾಸ. ರೂಪೋತ್ಪತ್ತಿ
morphogenesis

ಅಂಗವಿಚ್ಛೇದನ
(ವೈ) ಅಂಗರಚನೆಯ ಅಧ್ಯಯನಕ್ಕಾಗಿ ಜೀವಿಯನ್ನು ಕತ್ತರಿಸುವ ಪ್ರಕ್ರಿಯೆ
dissection

ಅಂಗಾಂಶ
(ಜೀ) ನೋಡಿ : ಊತಕ
tissue

ಅಂಗಾಂಶ ಕೃಷಿ
(ಸ) ನೋಡಿ : ಊತಕ ಕೃಷಿ
tissue culture

ಅಂಗಾಕರ್ಷಿತ
(ಪ್ರಾ, ವೈ) ರಾಸಾಯನಿಕಗಳು, ಔಷಧಗಳು ಹಾಗೂ ಕ್ರಿಮಿಗಳು ಕೆಲವು ಸಲ ಒಂದು ನಿರ್ದಿಷ್ಟ ಅಂಗದತ್ತ ಒಲವನ್ನು ತೋರಿ ಆ ಕಡೆಯೇ ಸಾಗಿ ಅಲ್ಲಿ ಸಂಗ್ರಹ ಆಗುವಿಕೆ. ಅಂಗಸ್ನೇಹಿ
organotropic

ಅಂಗಾಲು
(ಪ್ರಾ) ಉನ್ನತ ವರ್ಗದ ಪ್ರಾಣಿಗಳಲ್ಲಿ ಕಾಲಿನ ತಳಭಾಗ
sole


logo