logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂಗಹೀನ
[ಗು] ದೈಹಿಕ ಊನವುಳ್ಳವನು (ಪಾಂಡುರಾಜಂಗೆ ಧೃತರಾಷ್ಟ್ರನಂಗಹೀನನೆಂದು ವಿವಾಹದೊಸಗೆಯೊಡನೆ ಪಟ್ಟಬಂಧದೊಸಗೆಯಂ ಮಾಡಿ ನೆಲನನಾಳಿಸೆ: ಪಂಪಭಾ, ೧. ೧೦೭ ವ)

ಅಂಗುಟ
[ನಾ] ಉಂಗುಷ್ಠ, ಕಾಲಿನ ಹೆಬ್ಬೆರಳು (ಮಡದೆಡೆ ನಾಲ್ವೆರಲ್ ಅಂಗುಟದೆಡೆಯೊಳ್ ಗೇಣಾಗೆ ನಿಲ್ವುದಿಚ್ಛಾಗತಂ ಅಂದೆಡೆಯೊಳ್ ವಾಚಂಯಮತೆಯೊಳ್ ಒಡಂಬಡಂ ಪಡೆದು ನಿಂದನಾದಿಬ್ರಹ್ಮಂ: ಆದಿಪು, ೯. ೮೪)

ಅಂಗುಳಿ
[ನಾ] ಆನೆಯ ಸೊಂಡಿಲ ತುದಿ (ಮೃದುದೀರ್ಘವಿಸ್ತೃತ ಅಂಗುಳಿಯುಂ .. .. ಸಪ್ತದ್ವಾಸ್ಥಿತನುವುಮಪ್ಪ ವಿಜಯ ಪರ್ವತಗಜೇಂದ್ರಂ ಬಂದು ಮುಂದೆ ನಿಲ್ವುದುಂ: ಆದಿಪು, ೧೨. ೫೬ ವ)

ಅಂಗುಳಿತ್ರಾಣ
[ನಾ] ಬೆರಳ ಕಾಪು (ಬದ್ಧ ಗೋಧಾಂಗುಳಿತ್ರಾಣ ಯೋಧಸಿಂಧುರಘಟಾ ಸಂಘಟ್ಟಮುಂ: ಆದಿಪು, ೧೪. ೯೩ ವ)

ಅಂಗೋದ್ಭವ
[ನಾ] ಮನ್ಮಥ (ಮಸೆದ ಅಂಗೋದ್ಭವನ ಅಸ್ತ್ರದಂತೆಸೆವ ನಿನ್ನೀ ರೂಪು ವೃದ್ಧತ್ವದೊಳ್ ಪೊಸತೊಂದಾಯ್ತು: ಆದಿಪು, ೨. ೪೭)

ಅಂಗೋದ್ಭೂತ
[ನಾ] ಮನ್ಮಥ (ಶೃಂಗಾರಾಮೃತವಾರ್ಧಿಜಾತೆ .. .. ಸಂದ ಅಂಗೋದ್ಭೂತನಗಣ್ಯ ಪುಣ್ಯನಿಧಿ: ಕರ್ಣನೇಮಿ, ೮. ೯೫)

ಅಂಘ್ರಿಪ
[ನಾ] ಮರ (ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪದ ಫಳಂ ಅದರ್ಕೆ ರಸಮದು ಕಾಮಂ: ಆದಿಪು, ೧೦. ೫೦)

ಅಂಚಿತ
[ಗು] ಸುತ್ತಲ್ಪಟ್ಟ (ಕಳಧೌತಘಟಂ ಮುಕ್ತಾಫಳಾಂಚಿತಗ್ರೀವಂ ಎೞೆದುಕೊಂಡುದು ತಾರಾವಳಿಪರಿವೃತನವಸಂಧ್ಯಾಜಳದದ ಗಾಡಿಯಂ: ಆದಿಪು, ೭. ೮೪); [ಗು] ಪೂಜಿತ (ಸಕಳಕ್ಷ್ಮಾಚರಖೇಚರಾಂಚಿತ ಮಹಾಮಾಣಿಕ್ಯ ಗಾಣಿಕ್ಯ ಹಾಸ್ತಿಕ ರತ್ನೋರ್ಜಿತ ಚಕ್ರವರ್ತಿವಿಭವಂ: ಆದಿಪು, ೧೬. ೮)

ಅಂಚಿರ
[ಗು] ಅಸ್ಥಿರ, ಹೆಚ್ಚು ಕಾಲ ಉಳಿಯದ (ಪೊಸನನೆಯೊಳ್ ಪಸುರ್ಪಲರೊಳಂಚಿರಮಲ್ಲದ ಬೆಳ್ಪು: ಆದಿಪು, ೧. ೬೬)

ಅಂಚೆ
ಹಂಸ (ಕಡವಿನ ಕಂಪು ಅಡಂಗಿದುದು ಜಾದಿಯ ಕಂಪು ಒದವಿತ್ತು ಸೋಗೆಯ ಉರ್ಕು ಉಡುಗಿದುದು ಅಂಚೆಯುರ್ಕು ಪೊಸತಾಯ್ತು: ಪಂಪಭಾ, ೭. ೬೯); ಬಟ್ಟೆ (ಒಂದು ಅಂಚೆಯಂ ಪೊದೆದು ಒಂದು ಅಂಚೆಯಂ ಉಟ್ಟ ನಿನ್ನಿರವು ಇದೇಂ ಅಂಭೋಜಪತ್ರೇಕ್ಷಣೇ: ಪಂಪಭಾ, ೮. ೬೬)


logo