logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂಶು
[ನಾ] ಕಿರಣ (ಇದಱ ಅಭ್ರಂಕಷಕೂಟಕೋಟಿಗಳೊಲಿರ್ದ ಅಂಭೋಜಷಂಡಂಗಳಂ ಪುದಿದು ಉಷ್ಣಾಂಶುವಿಂ ಊರ್ಧ್ವಗಾಂಶುನಿವಹಂ ಮೆಯ್ಯಿಟ್ಟಲರ್ಚುತ್ತುಮಿರ್ಪುದು: ಪಂಪಭಾ, ೪. ೨೨)

ಅಂಶುಕ
[ನಾ] [ಬಿಳಿಯ] ಬಟ್ಟೆ (ಲಳಿತೋತ್ಸವಧ್ವಜಾಂಶುಕ ವಿಳಸನಮಂ ಮುಂದೆ ನಿನಗೆ ತೋರ್ಪಂತಿರೆ ಕಣ್ಗೊಳಿಸಿರ್ದುದು ನೋಡ ಹಿಮಾಚಳಶಿಖರದ ಮೇಲೆ ಪಾಯ್ವ ಗಂಗಾಸ್ರೋತಂ: ಪಂಪಭಾ, ೭. ೭೩)

ಅಂಶುಕಧ್ವಜ
[ನಾ] ಬಟ್ಟೆಯ ಬಾವುಟ (ಸಂಛನ್ನವಂದನಮಾಳಾಲಲಿತ ಅಂಶುಕಧ್ವಜವಿಳಾಸಾಕೀರ್ಣಮಂ ಮೆಚ್ಚಿ: ಆದಿಪು, ೧೪. ೧೪೯)

ಅಂಶುಮಾಳಿ
[ನಾ] ಕಿರಣಗಳ ಮಾಲೆಯುಳ್ಳವನು, ಸೂರ್ಯ (ಅವರ್ಗೆ ಪುಟ್ಟಿದ ಮಗಂ ಉಗ್ರಪ್ರತಾಪ ವಿಜಿತಾಂಶುಮಾಳಿ ಮಣಿಮಾಳಿಯೆಂಬೊಂ: ಆದಿಪು, ೨. ೧೪ ವ)

ಅಂಸ
[ನಾ] [ಆನೆಯ] ಹೆಗಲು (ಕಂಸಾರಿಸಖಂ ಪರಿಧ್ವಂಸಿತ ರಿಪುನೃಪಸಮೂಹಂ ಒಡ್ಡಿದನಾಗಳ್ ಹಂಸವ್ಯೂಹಮಂ ಉತ್ತುಂಗಾಂಸಂ ತಾಂ ವಿಬುಧವನಜವನಕಳಹಂಸಂ: ಪಂಪಭಾ, ೧. ೧೧೦)

ಅಂಹೋದೂರ
[ನಾ] ಪಾಪದಿಂದ ದೂರವಾದುದು (ಚಾರು ವಿವಿಧಾಗ್ನಿಕಾರ್ಯ ಮಹಾದ್ವಿಜನ್ಮಘೋಷದಿಂ ಅಂಹೋದೂರಮುಮಂ ಅವನಿತಳಾಳಂಕಾರಂ ಸಂಸಾರಸಾರಂ ಗಂಗಾದ್ವಾರಂ: ಪಂಪಭಾ, ೪. ೧೫)

ಅಃ
[ಅ] [ಕತ್ತರಿಸಿ ಕೊಡುವಾಗ, ನೋವಿನಿಂದ] ಅಯ್ಯೋ ಎಂಬ ಉದ್ಗಾರ (ಎಂದುಂ ಪೋಗೆಂದನೆ ಮಾಣೆಂದನೆ ಪೆಱತೊದನೀವೆನೆಂದನೆ ನೊಂದು ಅಃ ಎಂದನೆ ಸೆರಗಿಲ್ಲದೆ ಪಿಡಿಯೆಂದನಿದೇಂ ಕಲಿಯೊ ಚಾಗಿಯೋ ರವಿತನಯಂ: ಪಂಪಭಾ, ೧. ೧೦೨)

ಅಕಳಂಕರಾಮ
[ನಾ] ಅರಿಕೇಸರಿಯ ಬಿರುದು, ಅರ್ಜುನ (ಚತುರಂಗಮೆಯ್ದೆ ಕೀಲಿಸೆ ಪಡೆ ಚಿತ್ರದೊಂದು ಪಡೆಯಂತೆವೊಲಾಯ್ತು ಅಕಳಂಕರಾಮನಿಂ: ಪಂಪಭಾ, ೧೧. ೧೩೫)

ಅಕಾಂಡತಾಂಡವ
[ನಾ] ಅಕಾಲದ ನರ್ತನ, ಹೊತ್ತಲ್ಲದ ಹೊತ್ತಿನ ಕುಣಿತ (ಅಕಾಂಡತಾಂಡವಾರಂಭಶೌಂಡ ಶಿಖಂಡಿ ಮಂಡಳಮುಮಂ: ಆದಿಪು, ೪. ೫೪ ವ)

ಅಕಾಂಡಪ್ರಳಯ
[ನಾ] ಅಕಾಲದಲ್ಲುಂಟಾದ ಪ್ರಳಯ (ಸಮುದ್ಯತ್ ರಜತಗಿರಿ ತಟ ಸ್ಪಷ್ಟ ಸಂಶ್ಲಿಷ್ಟ ಮೌರ್ವೀನಿನದಂ ಪರ್ವಿತ್ತು ಅಕಾಂಡಪ್ರಳಯ ಘನಘಟಾಟೋಪ ಗಂಭೀರನಾದಂ: ಪಂಪಭಾ, ೧೨. ೧೩೭)


logo