logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಔಂಕು
[ಕ್ರಿ] ಅಮುಕು (ಚಕ್ರರತ್ನಮಂ ಮುಂದಿಟ್ಟು ಮಧ್ಯಮಖಂಡಮುಮಂ ಔಂಕಿ ಪೂೞೆ ಪೊಕ್ಕವಷ್ಟಂಭಿಸಿ ನಿಂದಾಗಳ್: ಆದಿಪು, ೧೩. ೫೬ ವ)

ಔಘ
[ನಾ] ಗುಂಪು (ನೀರಂ ಕುಡಿದು ಪದ್ಮಪತ್ರೌಘಂಗಳಿಂ ತಮ್ಮಣ್ಣಂಗೆ ನೀರಂ ತೀವಿಕೊಂಡು ಸರೋವರದಿಂದ ಪೊಱಮಟ್ಟು: ಪಂಪಭಾ, ೮. ೩೯ ವ)

ಔದಾರಿಕವಪು
[ನಾ] ಅಭ್ಯುದಯಕ್ಕೂ ಮೋಕ್ಷಸುಖಕ್ಕೂ ಮೂಲಕಾರಣವಾದ ದೇಹ (ಭಗವದಂಗಸಂಗತ ಜಳಕಣಂಗಳಂ ದೇವಾಂಗವಸ್ತ್ರಂಗಳೊಳ್ ಒತ್ತಿ ಕಳೆದು ಸಹಜಸುರಭಿಗಂಧಬಂಧುರ ಔದಾರಿಕವಪುವಂ: ಆದಿಪು, ೭. ೧೦೬ ವ)

ಔಪರಿಷ್ಟಕ
[ನಾ] ಮೇಲ್ಭಾಗ (ಚಳದಳಿಕಾಳಿ ನಿನ್ನ ವದನಾಂಬುಜಮಂ ನಡೆ ನೋಡಲೀಯದೆ ಅವ್ವಳಿಸುವು ಔಪರಿಷ್ಟಕದೊಳೆನ್ನನಿವು ಎಂದು ಕನಲ್ದು: ಆದಿಪು, ೪. ೧೨); [ನಾ] ಒಂದು ಬಗೆಯ ರತಿಕ್ರೀಡೆ (ಮಧುರಸೀತ್ಕೃತನಾದದೊಳುಣ್ಮಿ ಪೊಣ್ಮಿ ಚೂಷಿತಕಮಂ ಔಪರಿಷ್ಟಕರತಂಗಳ ಭೇದದೊಳೊಂದಿದ ಆಮ್ರ ಚೂಷಿತಮಕನಾಮ್ರಪಕ್ವಫಲದೊಳ್: ಆದಿಪು, ೧೧. ೯೯)

ಔರ್ವಜ್ವಲನ
[ನಾ] ಸಮುದ್ರದ ಬೆಂಕಿ, ಬಡಬಾಗ್ನಿ (ಔರ್ವಜ್ವಲನ ಜ್ವಾಳಾಕಳಾಪೋದ್ಗಮಮನನುಗುಣಂ ಮಾಡುತುಂ .. .. ಬೆಳಗಿದುದು ದಿಶಾಚಕ್ರಮಂ ಚಕ್ರರತ್ನಂ: ಆದಿಪು, ೧೧. ೨)

ಔರ್ವವಹ್ನಿ
[ನಾ] ಬಡಬಾನಲ (ಕೌರವಬಲದ ಉರ್ಕನೊಂದಿನಿಸು ಮಾಣಿಸಿ ಪೋಪಂ ಇಳೇಶನಲ್ಲಿಗೆ ಎಂದು ಅವನತವೈರಿ ವೈರಿಬಲವಾರಿಧಿಯಂ ವಿಶಿಖ ಔರ್ವವಹ್ನಿಯಿಂ ತವಿಸಿ: ಪಂಪಭಾ, ೧೨. ೧೨೧)

ಔರ್ವಾನಳ
[ನಾ] ಬಡಬಾನಲ (ಪುದಿದು ಔರ್ವಾನಳಂ ಅಬ್ಧಿಯಂ ಸುಡುವವೋಲ್ ಶಸ್ತ್ರಾಗ್ನಿಯಿಂ ತೀವ್ರಕೋಪದಿಂ ಉದ್ವೃತ್ತಬಳಾಬ್ಧಿಯಂ ಸುಡೆ: ಪಂಪಭಾ, ೧೨. ೩೫)

ಔಷಧ
[ನಾ] ಮದ್ದು (ಮನಸಿಜನ ಅಂಗನಾಜನವಶೀಕರಣ ಔಷಧಂ ಅಂಗಜನ್ಮನಂಬಿನ ಮದಶಕ್ತಿ ಮೋಹನಯಂತ್ರಂ ಇದಪ್ಪುದು: ಆದಿಪು, ೪. ೪೧)

ಔಷಧಿ
[ನಾ] ಸಸ್ಯ[ಗಳ] ಸಾರ (ಪಂಚರತ್ನಗರ್ಭವಿವಿಧೌಷಧಿಸಂದರ್ಭ ಶಾತಕುಂಭಕುಂಭ ಸಂಭೃತ ಮಂಗಳಜಳಂಗಳಿಂದಂ: ಆದಿಪು, ೪. ೩೫ ವ); [ನಾ] ಸಸ್ಯ (ವಿರಳಫಳಂಗಳಾದುವು ಅಖಿಳೌಷಧಿಗಳ್ ರಸವೀರ್ಯಪಾಕಮುಂ ವಿರಳಮೆ ವೃಕ್ಷಜಾತಿಗಳ್: ಆದಿಪು, ೮. ೬೨)


logo