logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ವಂಚನೆ
[ನಾ] ಮೋಸ (ಪಸುಗೆ ನೆಲಂ ಜಲಂ ಹಯದೊಡಂಬಡು ವಂಚನೆ ಕೇಣಂ ಆಸನಂ ಕೊಸೆ ದೆಸೆ ದಿಟ್ಟಿ ಮುಟ್ಟಿ ಕೆಲಜಂಕೆ ನಿವರ್ತನೆ ಕಾಣ್ಕೆ ಪರ್ವಿದ ಏರ್ವೆಸನದೊಳಾದ ಬಲ್ಮೆಯೊಳ್: ಪಂಪಭಾ, ೧೦. ೭೮)

ವಂದನಮಾಳಾ
[ನಾ] ತೋರಣ (ಸಂಛನ್ನ ವಂದನಮಾಳಾ ಲಲಿತಾಂಸುಕಧ್ವಜವಿಳಾಸಾಕೀರ್ಣಮಂ ಮೆಚ್ಚಿ ಪೊಕ್ಕಂ ಅಯೋಧ್ಯಾಪುರಮಂ: ಆದಿಪು, ೧೪. ೧೪೯) [ವಂದನಕ್ಕಾಗಿ ಭರತನು ಮಾಡಿಸಿದ ಕಾರಣದಿಂದ ಇದಕ್ಕೆ ವಂದನಮಾಲೆ ಎಂಬ ಹೆಸರು ಉಂಟಾಯಿತು: ಆದಿಪು, ೧೬. ೩೯]

ವಂದಾರು
[ನಾ] ಸ್ತುತಿಕಾರ, ಹೊಗಳುವವನು (ವಂದಾರು ಮುನೀಂದ್ರ ವೃಂದಾರಕವೃಂದಸೌಂದರಮುಂ ಆಸನ್ನಭವ್ಯ ವ್ಯೋಮಚರ ಭೂಚರನಿಚಯನಿಚಿತಮುಂ ಆಗಿ: ಆದಿಪು, ೩. ೪೫ ವ)

ವಂದಿ
[ನಾ] ಹೊಗಳು ಭಟ್ಟ (ಸೂತ ನಟ ವಂದಿಮಾಗಧ ವೈತಾಳಿಕ ಕಥಕ ಪುಣ್ಯಪಾಠಕ ವಿಪ್ರ ಉದ್ಭೂತರವಂ ಎಸೆಯೆ: ಪಂಪಭಾ, ೧೨. ೧೦೬)

ವಂದಿಜನ
ಹೊಗಳುಭಟ್ಟರ ಗುಂಪು (ನಿರಂತರಂ ಕಡಿಕಡಿದಿತ್ತ ಪೊನ್ನೆ ಬುಧ ಮಾಗಧ ವಂದಿಜನಕ್ಕೆ ಕೊಟ್ಟ ಕೋಡೆ ಎಡಱದೆ ಬೇಡಿಂ ಓಡಿಂ ಇದು ಚಾಗದ ಬೀರದ ಮಾತು ಕರ್ಣನಾ: ಪಂಪಭಾ, ೧. ೯೯);

ವಂಧ್ಯಾಸ್ತನಂಧಯಸಮಾಗಮ
ಬಂಜೆ ಮತ್ತವಳ ಮಗು ಸೇರುವುದು, ಅಸಂಭವ (ಅದಱಿಂದಮೆನ್ನ ಬಯಸಿದ ಬಯಕೆಯಪ್ಪುದು ವಂಧ್ಯಾಸ್ತನಂಧಯ ಸಮಾಗಮಸಮಾನಂ: ಆದಿಪು, ೩. ೪೩ ವ)

ವಂಶ
[ನಾ] ಆನೆಯ ಹೆಗಲಿನ ಬೆನ್ನುಮೂಳೆ (ಅನುಪೂರ್ವ ಧನುರಾಕಾರವಂಶನುಂ ಋಜುಪರಿಪೂರ್ಣ ಹ್ರಸ್ವಗ್ರೀವನುಂ .. .. ಅಪ್ಪ ವಿಜಯಪರ್ವತ ಗಜೇಂದ್ರಂ: ಆದಿಪು, ೧೨ ೫೬ ವ); [ನಾ] ಬಿದಿರು (ಇಭಖಡ್ಗಿವ್ರಾತ ನಾನಾ ಹರಿಮಯ ಕಟಕಭ್ರಾಜಿತಂ ತುಂಗವಂಶಪ್ರಭವಂ ಸಿಂಹಾಸನಶ್ರೀ ಸಮುಚಿತಂ: ಆದಿಪು, ೧೩. ೪೬); [ನಾ] ಕುಲ (ಆತನಿಂದವ್ಯವಚ್ಛಿನ್ನಮಾಗಿ ಬಂದ ವಂಶಂ ಸೂರ್ಯವಂಶಮೆಂಬುದಾಯ್ತು: ಪಂಪಭಾ, ೧. ೬೦ ವ)

ವಂಶಜರಾಜ್ಯ
[ನಾ] ವಂಶಪಾರಂಪರ್ಯವಾದ ರಾಜ್ಯ (ಆತ್ಮಬಾಷ್ಪಜಳೌಘಂಗಳಿನಂದು ಬಾಹುಬಲಿ ತನ್ನಿಂದಂ ನಿಧೀಶಂಗೆ ವಂಶಜರಾಜ್ಯಾಭಿಷವೋತ್ಸವಂ ನೆಗೞ್ದುದೆಂಬ ಆಶಂಕೆಯಂ ಮಾಡಿದಂ: ಆದಿಪು, ೧೪. ೧೩೩)

ವಂಶಾರಾಮ
[ನಾ] [ವಂಶ+ಆರಾಮ] ಬಿದಿರ ಮೆಳೆ (ಕೂರಿಸೆ ಗುರುಶುಶ್ರೂಷೆಯೊಳ್ ಆ ರಾಮನಂ ಉಗ್ರ ಪರಶುಪಾಟಿತರಿಪುವಂಶಾರಾಮನಂ ಇಷುವಿದ್ಯಾಪಾರಗಂ ಎನಿಸಿದುದು ಬಲ್ಮೆ ವೈಕರ್ತನನಾ: ಪಂಪಭಾ, ೧. ೧೦೪)

ವಂಶಾವತಾರ
[ನಾ] ಕುಲದ ಆರಂಭ (ಸಮಸ್ತವಸ್ತುವಿಸ್ತಾರಮಾಗಿರ್ದ ಹಸ್ತಿನಪುರವೆ ನಿಜವಂಶಾವಳಂಬಮಾಗೆ ನೆಗೞ್ದ ಭರತಕುಲತಿಲಕರ ವಂಶಾವತರಮೆಂತಾದುದೆಂದೊಡೆ: ಪಂಪಭಾ, ೧. ೫೮ ವ)


logo