logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಶಂಕರ
[ಗು] ಶುಭಕರ (ಪ್ರೀತಿಂಕರ ಶಂಕರ ವಿದ್ಯಾತಿಶಯನಿಧಾನ ನಿನ್ನ ದಯೆವೆರಸಿದತಿಪ್ರೀತಿಯೊಳ್ ಆಂ ಅತ್ಯುತ್ತಮ ಜಾತಿಗಳೊಳ್ ಪುಟ್ಟಿ ಸುಖಮನುಣುತುಂ ಬಂದೆಂ: ಆದಿಪು, ೫. ೭೩)

ಶಂಕಾಂತರ
[ನಾ] ಸಂದೇಹಗಳು (ದಿವ್ಯಾಪ್ಸರೋವೃಂದಂ ಈ ಕ್ಷಿತಿಗೇಂ ಇಂದ್ರನ ಶಾಪದಿಂದ ಇೞಿದುವೋ ಪೇೞೆಂಬ ಶಂಕಾಂತರಂ ಮತಿಗಂ ಪುಟ್ಟುವಿನೆಗಂ: ಪಂಪಭಾ, ೪. ೩೯)

ಶಂಕಾಕುಳಿತಚಿತ್ತ
[ನಾ] [ಶಂಕಾ+ಆಕುಳಿತಚಿತ್ತ] ಆತಂಕದಿಂದ ವಿಕಲಗೊಂಡ ಮನಸ್ಸು (ಯಮನಂದನನಿರ್ವರ ಬರವುಮಂ ಕಾಣದೆ ಶಂಕಾಕುಳಿತಚಿತ್ತನಾಗಿ: ಪಂಪಭಾ, ೮. ೪೦ ವ)

ಶಂಕಾಪನಯನ
[ನಾ] [ಜೈನ] ಸಂದೇಹವಿಲ್ಲದಿರುವುದು (ಜಿನಮತ ಪದಾರ್ಥಶಂಕಾಪನಯನಮುಂ ಭೋಗಾಕಾಂಕ್ಷೆಯೊಳ್ ವಿಮುಖತೆಯುಂ: ಆದಿಪು, ೫. ೫೭)

ಶಂಕಾವಹ
[ಗು] ಸಂದೇಹವುಂಟುಮಾಡುವ (ಆಹವ ಮಹಾಹುಂಕಾರ ಕಾಳಕೂಟವಿಟಪಿಪ್ರದೋಹ ಶಂಕಾವಹ ನಾಭಿಕೂಪಾವಲಂಬಿತ ಕೂರ್ಚಕಳಾಪಂ: ಆದಿಪು, ೧೩. ೪೫ ವ)

ಶಂಕಿಸು
[ಕ್ರಿ] ಹೆದರು, ಹಿಂಜರಿ (ಬೆಸಸೆನೆಯುಂ ನುಡಿಯಲ್ ಶಂಕಿಸಿದಪೆಂ ಆಂ ಎಂದೊಡೆ ಏಕೆ ಶಂಕಿಸಿದಪೈ ನೀಂ ಬೆಸವೇೞ್: ಪಂಪಭಾ, ೧೨. ೯೦)

ಶಂಕು
[ನಾ] ಈಟಿ (ವಿಜಯರಾಜಮಹಿಷೀ ಮಯೂರಾತಪತ್ರ ಶಂಕಾವಹಶಂಕುಸಂಕುಳಂಗಳಿಂದಂ: ಆದಿಪು, ೧೪. ೯೦ ವ)

ಶಂಖ
[ನಾ] [ಜೈನ] ಶಂಖದ ಹುಳು, ಚರ್ಮ, ನಾಲಗೆಗಳನ್ನುಳ್ಳ ದ್ವೀಂದ್ರಿಯ ಜೀವಿ (ಸ್ಪರ್ಶನ ರಸನೇಂದ್ರಿಯೋಪೇತಂಗಳಪ್ಪ ಶಂಖಾದಿ ದ್ವೀಂದ್ರಿಯಂಗಳ್: ಆದಿಪು, ೧೦. ೬೩ ವ)

ಶಂಖಚಕ್ರಚಾಮರಹಳಚಿಹ್ನಿತಪದಾಕೃತಿ
[ನಾ] ಶಂಖ, ಚಕ್ರ, ಚಾಮರ, ನೇಗಿಲುಗಳ ಗುರುತಿರುವ ಪಾದದ ಆಕಾರ, ಎಂದರೆ ಚಕ್ರವರ್ತಿಯ ಪಾದ (ಅರಿನೃಪಾಲಮೌಳಿಮಣಿಯೊಳ್ ನೆಲೆಗೊಂಡುದು ಶಂಖಚಕ್ರಚಾಮರಹಳಚಿಹ್ನಿತಪದಾಕೃತಿ: ಪಂಪಭಾ, ೬. ೨೯)

ಶಂಖದೊಳ್ ಪಾಲೆಱೆ
[ಕ್ರಿ] ಶಂಖದಲ್ಲಿ ಹಾಲು ಹಾಕು, ಅಥವಾ ಪಾವನವಾಗು (ಶಂಖದೊಳ್ ಪಾಲೆಱೆದಂತಿರೆ ಮಲಿನಮಿಲ್ಲದ ಒಳ್ಗುಲದ ಅರಸುಗಳಿರೆ ನೀನುಂ ಅಗ್ರಪೂಜೆಯಂ ಆಂಪಾ: ಪಂಪಭಾ, ೬. ೫೦)


logo