logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಡಂಗ
[ನಾ] ಸುಂಕವಸೂಲಿಗಾಗಿರುವ ಕಾವಲು ಕಟ್ಟೆ (ಪೊಂಗುವ ಮಲೆಪರ ಮಲೆಗಳ ಡಂಗಂಗಳ್ ಮಲೆವ ಮಂಡಲಂಗಳ್ ಪ್ರತ್ಯಂತಗಳ್ ಎನಲ್ ಒಳವೆ ಪಾಂಡವರಂ ಗೆಡೆಗೊಳೆ ನಿನಗೆ ಕುರುಕುಳಾಂಬರಭಾನೂ: ಪಂಪಭಾ, ೯. ೩೯)

ಡಂಬ
[ನಾ] ತೋರಿಕೆ, ಮೋಸ (ಸತ್ತನೆ ಮತ್ತೆ ಪುಟ್ಟುವಂ ಗಡ ಪುಸಿ ಕಾಣ ಡಂಬವಿದು ಖೇಚರ ನೀನಿದನೆಂತು ನಂಬಿದೋ: ಆದಿಪು, ೨. ೮); ಕಪಟ, ಮರೆಮಾಚುವಿಕೆ (ಹಿಡಿಂಬೆ ಡಂಬಮಿಲ್ಲದೆ ಭೀಮಸೇನನೊಳಪ್ಪ ಒಡಂಬಡಂ ನುಡಿಯೆ: ಪಂಪಭಾ, ೩. ೧೮ ವ)

ಡಕ್ಕೆ
[ನಾ] ಒಂದು ವಾದ್ಯ (ತನ್ನ ತೊಡಂಕದು ಎಯ್ದೆ ನೂರ್ಮಡಿ ಮನದೊಳ್ ಪಳಂಚಲೆಯೆ ಡಕ್ಕೆಯೊಳ್ ಅೞ್ಜಜವಾಗೆ ಆಡಿದಳ್: ಪಂಪಭಾ, ೪. ೯೦)

ಡವಕೆ
[ನಾ] ಪೀಕದಾನಿ (ಚಾಮರದ ಅಡಪದ ಡವಕೆಯ ಕನ್ನಡಿಯ ಪರಿಚಾರಿಕೆಯುರುಂ ಒಡನಾಡಿ ಬೆಳೆದ ಕೆಳದಿಯರುಂ: ಆದಿಪು, ೩. ೨೩ ವ)

ಡವಕೆಯ ಪರಿಚಾರಿಕೆ
[ನಾ] ಪೀಕದಾನಿ ಅಥವಾ ಕಾಳಾಂಜಿ ನೀಡುವ ಸೇವಕಿ (ನೂಱೆಂಟುಂ ಕರಣಮುಮಂ ಅವಳ ಡವಕೆಯ ಪರಿಚಾರಿಕೆಯಱಿಗುಂ ಆಕೆಗವು ತೊಡರ್ವೆಡೆಯೇ: ಆದಿಪು, ೯. ೨೯)

ಡವಕೆವಿಡಿ
[ಕ್ರಿ] ಪೀಕದಾನಿಯನ್ನು ಒಡ್ಡು (ಲೋಕಂ ಪೊಗೞ್ವುದು ಕನಕಾಬ್ಜಾಕಾರದ ಡವಕೆವಿಡಿದ ಸುರಸೌಂದರಿಯಂ : ಆದಿಪು, ೭. ೭)

ಡಾಕಿನೀ
[ನಾ] ಪಿಶಾಚಿ (ಆಮಂತ್ರಿತ ಡಾಕಿನೀ ದಶನಘಟ್ಟನಜಾತವಿಭೀಷಣಂ ಮದೇಭ ಅಂತ್ರನಿಯಂತ್ರಿತ ಅಶ್ವಶವಮಾಂಸರಸಾಸವಮತ್ತಯೋಗಿನೀತಂತ್ರಂ: ಪಂಪಭಾ, ೧೨. ೧೨೦)

ಡಾಮರ
[ನಾ] ಹಿಂಸೆ, ದಾಳಿ (ಆ ಮಾಧವೀಮಂಟಪಮಂ ಕಾಮನ ಡಾಮರಕ್ಕೆ ಅಳ್ಕಿ ವನದುರ್ಗಂಬುಗುವಂತೆ ಪೊಕ್ಕು: ಪಂಪಭಾ, ೫. ೬ ವ)

ಡಾವರ
[ನಾ] ಕ್ಷೋಭೆ (ಇಂಚೆಯ ಪಸವಿನ ಬಱದ ಕಳಂಚಿನ ಡಾವರದ ಬಾಧೆಯಿಲ್ಲದ ಪದದೊಳ್ ಮುಂಚದೆ ಪಿಂಚದೆ ಬಳೆದು ವಿರಿಂಚಿಯ ಕೆಯ್ಪಿಡಿವೊಲಾದುವಾ ನಾಡೂರ್ಗಳ್: ಪಂಪಭಾ, ೮. ೫೧)

ಡೊಂಬರ ಕೋಡಗ
[ನಾ] ಕೊಲ್ಲಟಿಗರು ಆಟಕ್ಕಾಗಿ ಬಳಸುವ ಕೋತಿ, ಇತರರು ಹೇಳಿದಂತೆ ಕೇಳುವವನು (ಡೊಂಬರ ಕೋಡಗದಂತಾಡಿ ಗೆಲ್ದಾಗಳ್ ತಮ್ಮಣ್ಣನ ಸೋಲಮಂ ಕಂಡಾಗಳ್ ಭೀಮಸೇನನಿಂತೆಂದಂ: ಪಂಪಭಾ, ೬. ೭೨ ವ)


logo