logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಸಂಕಟ
[ನಾ] [ಸಂಕಷ್ಟ] ಇಕ್ಕಟ್ಟಾದ, ದುರ್ಗಮವಾದ (ಜಾನುಭಂಜನೀ ಶೂಲಪ್ರಕರ ಪರಿವೃತಂಗಳುಂ ಕೂಪಕೂಟಾವಪಾತ ಲೋಹ ಕಂಟಕ ಸಂಕಟಂಗಳುಂ .. .. ಅಪ್ಪ ದುರ್ಗಂಗಳೊಳ್: ಆದಿಪು, ೧೩. ೫೭ ವ); [ನಾ] ವ್ಯಥೆ (ನಲ್ಲರಗಲ್ಕೆಗೆ ಕಣ್ಣ ನೀರ್ಗಳಂ ಮಿಡಿವ ಬಹುಪ್ರಕಾರಸಂಕಟಮೊಪ್ಪಿದುದಾ ಪ್ರಯಾಣದೊಳ್: ಆದಿಪು, ೪. ೫೭); ತೊಂದರೆ (ಒರ್ವರಂ ಒರ್ವರ್ ಎಚ್ಚು ನಿಜಪೀಠಾಂಭೋಜದಿಂ ಬ್ರಹ್ಮನುಚ್ಚಳಿಪನ್ನಂ ಪಿರಿದೊಂದು ಸಂಕಟಮನೀ ತ್ರೈಲೋಕ್ಯದೊಳ್ ಮಾಡಿದರ್: ಪಂಪಭಾ, ೧. ೭೯)

ಸಂಕರ
[ನಾ] ಮಿಶ್ರಣ (ಎರೞ್ತಡಿಯ ಪೂಮರದಿಂ ಕೞಿವೂಗಳತ್ತಮಿತ್ತ ಕವಿದಲ್ಲಿ ಮೆಲ್ಲನುಗೆ ತೆಂಕುವ ಪೂವಿನ ಸಂಕರಂಗಳಂ: ಆದಿಪು, ೧. ೬೧); [ನಾ] ಶಂಕರ, ಶಿವ (ಅಣ್ಣನೊಂದು ಮಾತಂ ಅಣಂ ಮೀಱದೆ ನಿಂದು ಸಂಕರನ ನೀನಾರಾಧಿಸು ಎಂದು ಇಂತಿದಂ ಮುನಿ ಪರಾಶರಂ ಒಲ್ದು ಪೇೞೆ: ಪಂಪಭಾ, ೮. ೫)

ಸಂಕರ್ಷಣ
[ನಾ] ಬಲರಾಮ (ಎಂಬುದುಂ ಸಂಕರ್ಷಣಂ ಆತನ ಮನದ ಉತ್ಕರ್ಷತೆಯನಱಿದು ಪೆಱತಂ ಇನ್ನೆನಗೆ ನುಡಿಯಲೆಡೆಯಿಲ್ಲ: ಪಂಪಭಾ, ೧೩. ೯೦ ವ)

ಸಂಕಲೆ
[ನಾ] [ಶೃಂಖಲಾ] ಸಂಕೋಲೆ (ಓಪನಂ ಮಿಡುಕಲೀಯದೆ ಕಾಲ್ವಿಡಿದೞ್ತು ತೋರ ಕಣ್ಬನಿಗಳನಿಕ್ಕಿದಳ್ ತರಳಲೋಚನೆ ಸಂಕಲೆಯಿಕ್ಕಿದಂತೆವೋಲ್: ಪಂಪಭಾ, ೪. ೯೭)

ಸಂಕಲ್ಪ
[ಗು] ಕಲ್ಪಿಸಿಕೊಂಡ, ಕಲ್ಪನೆಯ (ಎಂದು ತನ್ನೊಳೆ ಬಗೆದು ಸಂಕಲ್ಪಸಮಾಗಮಸುಖಮನನುಭವಿಸಿ: ಆದಿಪು, ೪. ೧೪ ವ); [ನಾ] ವಿದ್ಯೆ [ಶರಕಲ್ಪ] (ಶರಸಂಧಾನ ಆಕರ್ಷಣ ಹರಣಾದಿ ವಿಶೇಷವಿವಿಧಸಂಕಲ್ಪಕಳಾಪರಿಣತಿಯಂ ಮೆಱೆದುದು: ಪಂಪಭಾ, ೧೨. ೧೮೬)

ಸಂಕಾಶ
[ನಾ]ಹೋಲಿಕೆ, ಸದೃಶ (ಮತ್ತಮದೊಂದಿನಿಸು ಬೇಗದಿಂ ಮೃದುಮೃಣಾಳ ಸಂಕಾಶಮಾಯ್ತು:ಆದಿಪು, ೧೨. ೭);[ನಾ]ಸಮಾನವಾದ (ಧವಳಹಯಂ ಧವಳರಥಂ ಧವಳ ಉಷ್ಣೀಷಂ ಶಶಾಂಕಸಂಕಾಶ ಯಶೋಧವಳಿತ ಭುವನಂ ತಾಗಿದಂ ಅವಯವದಿಂ ಬಂದು ಧರ್ಮತನಯನ ಬಲದೊಳ್:ಪಂಪಭಾ, ೧೧. ೩೯)

ಸಂಕೀರ್ಣ
[ಗು] ತುಂಬಿಕೊಂಡ (ಅನೇಕ ಕರಿ ತುರಗ ನರ ಕಳೇವರ ಸಂಕೀರ್ಣಮುಂ ಉಭಯಪಕ್ಷಸ್ಥಿತ ಉಭಯಕುಲಶುದ್ಧ ನೃಪತಿಮಣಿಮಕುಟಮರೀಚಿ ಮೇಚಕಿತಮುಂ: ಪಂಪಭಾ, ೧೩. ೫೫ ವ)

ಸಂಕೀರ್ಣಂಗಳಾಗು
[ಕ್ರಿ] ದಟ್ಟವಾಗು, ಗಾಢವಾಗು (ಆದ ವಿನೋದಂಗಳ್ ಅನಂಗರಾಗರಸ ಸಂಕೀರ್ಣಂಗಳಾದಂದು ಆಱುವ ಪಾಂಗಾವುದು: ಆದಿಪು, ೧೨. ೨೧)

ಸಂಕು
[ನಾ][ಶಂಕು] ಕಠಾರಿ (ನಡುವ ಸರಲ್ಗೆ ಮೆಯ್ಯೊಳ್ ಅಡಂಗುವ ಸಂಕುಗೆ ದಿಂಕುಗೊಳ್ವ ಕಕ್ಕಡೆಗೆ ಇದಿರ್ ಉರ್ಚುವ ಇಟ್ಟಿಗೆ .. ..ಪಂಪಭಾ, ೧೦. ೯೪)

ಸಂಕುಲ
[ನಾ]ಸಮೂಹ(ಸುರ ದನುಜ ಭುಜಗ ವಿದ್ಯಾಧರ ನರ ಸಂಕುಲದೊಳ್ ಆರನಾದೊಡಂ ಏನೋ ಗರಮುಟ್ಟೆ ಕೊಲ್ಗುಂ ಇದು ನಿಜವಿರೋಧಿಯಂ ಧುರದೊಳ್ ಎಂದು ಶಕ್ತಿಯನಿತ್ತಂ:ಪಂಪಭಾ, ೧. ೧೦೩)


logo