logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಪಂಕಜವಕ್ತ್ರ
[ನಾ] ತಾವರೆಯಂತಹ ಮುಖ[ವುಳ್ಳವನು] (ಸಾಲಪ್ರಾಂಶು ವಿಶಾಲ ಲೋಲನಯನಂ ಪ್ರೋದ್ಯತ್ ವೃಷಸ್ಕಂಧಂ ಉನ್ಮೀಲತ್ ಪಂಕಜವಕ್ತ್ರಂ ಆಯತ ಸಮಗ್ರ ಉರಸ್ಸ್ಥಳಂ: ಪಂಪಭಾ, ೧. ೬೮)

ಪಂಕಜವಿಷ್ಟರ
[ನಾ] ಕಮಲದ ಆಸನವುಳ್ಳವನು, ಬ್ರಹ್ಮ (ಸ್ಫುರಿತೋದ್ಯತ್ಕನಕ ಪ್ರಭಾಪ್ರಸರದಿಂ ಪೀತಾಂಬರಂ ಪದ್ಮವಿಷ್ಟರದಿಂ ಪಂಕಜವಿಷ್ಟರಂ ನತವಿನೇಯವ್ರಾತ ಚೇತಸ್ತಮೋಹರನಾಗಿರ್ದುದಱಿಂ ಹರಂ: ಆದಿಪು, ೧೬. ೬)

ಪಂಕಪ್ರಭೆ
[ನಾ] [ಜೈನ] ಏಳು ನರಕಗಳಲ್ಲಿ ನಾಲ್ಕನೆಯದು, (ಪಂಕಪ್ರಭೆಯೊಳ್ ದಶಬ್ಧ್ಯುಪಮೆಯಿಂ ದುಃಖಾಗ್ನಿಯೊಳ್ ಬೆಂದು: ಆದಿಪು, ೫. ೪)

ಪಂಕೇಜಗರ್ಭಾತ್ಮಜ
[ನಾ] [ಪಂಕೇಜಗರ್ಭ+ಆತ್ಮಜ = ಬ್ರಹ್ಮನ ಮಗ] ನಾರದ (ಎಮ್ಮನ್ವಯಕ್ಷ್ಮಾಪರ್ ಆವ ವಿಳಾಸಂಗೊಳ್ ಇರ್ಪರ್ ಏದೊರೆತು ತಾಂ ಎಮ್ಮಯ್ಯನೈಶ್ವರ್ಯಂ ಇಂತು ಇವನೆಲ್ಲಂ ತಿಳಿವಂತುಟಾಗಿ ಬೆಸಸಿಂ ಪಂಕೇಜಗರ್ಭಾತ್ಮಜಾ: ಪಂಪಭಾ, ೬. ೧೫)

ಪಂಕೇಜಪತ್ರಾಂಬು
[ನಾ] [ಪಂಕೇಜ+ಪತ್ರ+ಅಂಬು] ತಾವರೆಯ ಎಲೆಯ ಮೇಲಿನ ನೀರು (ಅರ್ಕಂ ಅಳುರ್ಕೆಗೆಟ್ಟು ನಭದಿಂ ತೂಳ್ದಂ ಸುರುಳ್ದಪ್ಪಿದಳ್ ಮೃಡನಂ ಗೌರಿ ಸಮಸ್ತಂ ಈ ತ್ರಿಭುವನಂ ಪಂಕೇಜಪತ್ರಾಂಬುವೋಲ್ ನಡುಗಿತ್ತು: ಪಂಪಭಾ, ೧೦. ೨೬)

ಪಂಕೇಜಪತ್ರೇಕ್ಷಣೆ
[ನಾ] ತಾವರೆಯ ದಳದಂತೆ ಕಣ್ಣುಳ್ಳವಳು (ಅತ್ಯುಗ್ರ ಆಜಿಯೊಳ್ ಮುನ್ನಂ ಈ ಖಳ ದುಶ್ಶಾಸನನಂ ಪೊರಳ್ಚಿ ಬಸಿಱಂ ಪೋೞ್ದಿಕ್ಕಿ ಬಂಬಲ್ಗರುಳ್ಗಳಿಂ ಆನಲ್ತೆ ವಿಳಾಸದಿಂ ಮುಡಿಯಿಪೆಂ ಪಂಕೇಜಪತ್ರೇಕ್ಷಣೇ: ಪಂಪಭಾ, ೭. ೧೨)

ಪಂಕೇಜವಕ್ತ್ರೆ
[ನಾ] ಕಮಲಮುಖಿ (ಅಂತೆ ಬಂದು ಪಂಕೇಜವಕ್ತ್ರೆ ಮತ್ಸ್ಯಸುತನಂ ನುಡಿದಳ್: ಪಂಪಭಾ, ೮. ೯೭)

ಪಂಕೇರುಹನಾಭ
[ನಾ] ಬ್ರಹ್ಮ (ದ್ವಾರಾವತೀಪುರಕ್ಕೆ ಚರರಂ ತಡವಿಲ್ಲದೆ ಬೇಗಮಟ್ಟಿ ಪಂಕೇರುಹನಾಭನಂ ಬರಿಸಿ: ಪಂಪಭಾ, ೬. ೨೧)

ಪಂಗಿಗ
[ನಾ] ಹಂಗಿಗೊಳಗಾದವನು (ಮುಂಬಟ್ಟಿಸಿ ಕೊಲುತಿರ್ಪ ಜವನೆಂಬಱಕೆಯ ಪಗೆವಂಗದೆಂತು ಪಂಗಿಗನಪ್ಪೆಂ: ಆದಿಪು, ೪. ೭೭)

ಪಂಚಕಲ್ಯಾಣೋತ್ಸವ
[ನಾ] ತೀರ್ಥಂಕರರಿಗೆ ಸಂಬಂಧಿಸಿದ ಗರ್ಭಾವತರಣ, ಜನ್ಮ, ಪರಿನಿಷ್ಕ್ರಮಣ, ಕೇವಲಜ್ಞಾನ ಮತ್ತು ಪರಿನಿರ್ವಾಣವೆಂಬ ಐದು ಕಲ್ಯಾಣಗಳ ಆಚರಣೆಗಾಗಿ ಇಂದ್ರಾದಿಗಳು ನಡೆಸುವ ಉತ್ಸವ (ಆಕೆವೆರಸೊರ್ಮೆ ನಂದೀಶ್ವರಮಹಾಮಹಿಮೆಗಂ ಪಂಚಕಲ್ಯಾಣೊತ್ಸವಕ್ಕಂ ಅಚ್ಯುತೇಂದ್ರನೊಡನೆ ನಿಜಪೂಜಾವಿಳಾಸಮಂ ಮೆಱೆಯಲೆಂದು: ಆದಿಪು, ೨. ೭೭ ವ)


logo