logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಜಂಗಮ
[ಗು] ನಡೆದಾಡುವ (ಬಲದೇವಂ ದುರ್ಯೋಧನಂಗಾಯು ಬರ್ಪಂತೆ ಪೆಗಲೊಳ್ ಹಲಾಯುಧಮನಿಟ್ಟುಕೊಂಡು ಜಂಗಮಪರ್ವತಮೆ ಬರ್ಪಂತೆ ಬಂದು: ಪಂಪಭಾ, ೧೩. ೮೮ ವ)

ಜಂಗಮಕಲ್ಪವೃಕ್ಷ
[ನಾ] ನಡೆದಾಡುವ ಕಲ್ಪವೃಕ್ಷ, ಮಹಾ ಉದಾರಿ (ಇವಂ ಜಂಗಮಕಲ್ಪವೃಕ್ಷಮೆನೆ ಕೊಟ್ಟು ಈ ಮಾೞ್ಕೆಯಿಂ ಭಾಜನಾಂಗದ ವಸ್ತ್ರಾಂಗದ ಭೂಷಣಾಂಗದ ಅಳವಂ ಚಕ್ರೇಶ್ವರಂ ತಾಳ್ದಿದಂ: ಆದಿಪು, ೪. ೩೫)

ಜಂಗಮರೂಪ
[ನಾ] ಸಂಚರಿಸುವ ಆಕಾರ (ಲತೆಗಳ್ ಜಂಗಮರೂಪದಿಂದೆ ನೆರದುವೋ ದಿವ್ಯಾಪ್ಸರೋವೃಂದಂ ಈ ಕ್ಷಿತಿಗೇಂ ಇಂದ್ರನ ಶಾಪದಿಂದ ಇೞಿದುವೋ ಪೇೞೆಂಬ ಶಂಕಾಂತರಂ ಮತಿಗಂ ಪುಟ್ಟುವಿನೆಗಂ: ಪಂಪಭಾ, ೪. ೩೯)

ಜಂಘಾ
[ನಾ] ತೊಡೆ (ಆ ಕನಕಕದಳೀಸ್ತಂ¨ ವಿಭ್ರಮ ಜಂಘಾಯುಗಳೆಯರೊಳ್ ಆ ಭುವನಭರಣೋತ್ತರಣ ಸ್ತಂಭರಮಣೀಯಜಂಘಾಯುಗಳಂ: ಆದಿಪು, ೮. ೨೩ ವ)

ಜಂಘಾಳ
[ನಾ] ವೇಗವಾಗಿ ಓಡುವವನು (ಚಂಡಾಜಿವಿಕ್ರಾಂತ ಮರ್ತ್ಯನಿಳಾಕ್ರಾಂತಹಯೌಘಮೂರ್ಜಿತ ಜಯಪ್ರಖ್ಯಾತ ಜಂಘಾಳ ಪತ್ತಿ ನಿಕಾಯಂ: ಆದಿಪು, ೪. ೯೧)

ಜಂತ್ರ
[ನಾ] ಯಂತ್ರ (ಆ ಸರಲ್ಗಳಿಂದಾತನ ಮನೆಯ ಮುಂದೆ ನಭದೊಳ್ ನಲಿನಲಿದಾಡುವ ಜಂತ್ರದ ಮೀನೆಚ್ಚನುಮಾಕೆಗೆ ಗಂಡನಕ್ಕುಂ: ಪಂಪಭಾ, ೩. ೩೨ ವ)

ಜಂಬುದೀವಿ
[ನಾ] ಜಂಬೂದ್ವೀಪ (ಸಮುನ್ಮಿಷದ್ವಿವಿಧ ರತ್ನಮಾಲಾ ಪ್ರಭಾಭಿದಾರುಣ ಜಲಪ್ಲವಾವಿಳ ವಿಳೋಳ ವೀಚೀರಯ ಪ್ರದಾರಿತ ಕುಳಾಚಲೋದಧಿ ಪರೀತಮಾಗಿರ್ದ ಜಂಬುದೀವಿಯೊಳಗುಂಟು: ಪಂಪಭಾ, ೧. ೫೧*) [ಇದನ್ನು ಪೃಥ್ವೀ ವೃತ್ತವೆಂದು ಗುರುತಿಸಿ ಪರಿಷತ್ತಿನ ಮುದ್ರಣದಲ್ಲಿ ಅಡಿಟಿಪ್ಪಣಿಯಾಗಿ ನೀಡಿದ್ದಾರೆ]

ಜಂಬೂವೃಕ್ಷ
[ನಾ] ನೇರಿಳೆ ಮರ (ಮೇರುಪರ್ವತದ ತೆಂಕಣ ತಂೞ್ಪಲೊಳ್ ದ್ವಾದಶಯೋಜನ ಪ್ರಮಾಣಮಪ್ಪ ಜಂಬೂವೃಕ್ಷದ ಕೆಲದೊಳ್: ಪಂಪಭಾ, ೬. ೩೦ ವ)

ಜಕ್ಕ
[ನಾ] ಯಕ್ಷ (ಕುಬೇರನಿಂ ಕಪ್ಪಂಗೊಂಡು ಪೊನ್ನಂ ಜಕ್ಕರೆಕ್ಕೆಯಿಂ ಪೊತ್ತು ಬರೆ: ಪಂಪಭಾ, ೬. ೩೨ ವ)

ಜಕ್ಕರೆಕ್ಕೆ
[ನಾ] [ಜಕ್ಕರ್+ಎಕ್ಕೆ} ಯಕ್ಷರು ಒಟ್ಟಾಗಿ (ಕೈಳಾಸದ ಮೇಗಣ್ಗೆ ವಂದು ಕುಬೇರನಿಂ ಕಪ್ಪಂಗೊಂಡು ಜಕ್ಕರ್ ಎಕ್ಕೆಯಿಂ ಪೊತ್ತು ಬರೆ: ಪಂಪಭಾ, ೬. ೪೨ ವ)


logo